ವ್ಯರ್ಥ ದರ್ಶನವನ್ನು ನೋಡಿರುವಿ ರಲ್ಲಾ. ಸುಳ್ಳಾದ ಭವಿಷ್ಯವನ್ನು ಹೇಳಿದ್ದೀರಲ್ಲಾ. ನಾನು ಮಾತನಾಡದೆ ಇದ್ದರೂ--ಕರ್ತನೇ ಹೇಳಿದನೆಂದು ಹೇಳಿದ್ದಿರಲ್ಲಾ.
Cross references
ಆಗ ಇಗೋ, ದೇವರು ಅವನನ್ನು ಕಳುಹಿಸಲಿಲ್ಲ; ಅವನೇ ನನಗೆ ವಿರೋಧವಾಗಿ ಈ ಪ್ರವಾದನೆ ಹೇಳಿದನೆಂದು ನಾನು ಗ್ರಹಿಸಿಕೊಂಡೆನು. ಟೋಬೀಯನೂ ಸನ್ಬಲ್ಲ ಟನೂ ಅವನಿಗೆ ಕೂಲಿ ಕೊಟ್ಟರು.
ಮನುಷ್ಯಪುತ್ರನೇ, ಪ್ರವಾದಿ ಸುತ್ತಿರುವ ಇಸ್ರಾಯೇಲಿನ ಪ್ರವಾದಿಗಳಿಗೆ ವಿರುದ್ಧ ವಾಗಿ ನೀನು ಪ್ರವಾದಿಸಿ, ತಮ್ಮ ಸ್ವಂತ ಹೃದಯಗ ಳೊಳಗಿಂದ ಪ್ರವಾದಿಸುತ್ತಿರುವವರಿಗೆ ಹೀಗೆ ಹೇಳು --ಕರ್ತನ ವಾಕ್ಯವನ್ನು ಕೇಳಿರಿ;
ಅವರು ವ್ಯರ್ಥವಾದದ್ದನ್ನೂ ಸುಳ್ಳು ಭವಿಷ್ಯ ವಾದದ್ದನ್ನೂ ನೋಡಿದ್ದಾರೆಂದು ಕರ್ತನು ಹೇಳುತ್ತಾನೆ; ಆದರೆ ಕರ್ತನು ಅವರನ್ನು ಕಳುಹಿಸಲಿಲ್ಲ; ತಾವು ನುಡಿದ ಮಾತು ಬೇರೆಯವರು ನಿರೀಕ್ಷಿಸುವಂತೆ ಮಾಡುತ್ತಾರೆ.
ವಿಗ್ರಹಗಳು ವ್ಯರ್ಥವಾಗಿ ಮಾತ ನಾಡಿವೆ; ಶಕುನಗಾರರು ಸುಳ್ಳನ್ನು ನೋಡಿದ್ದಾರೆ; ಮೋಸವಾದ ಕನಸುಗಳನ್ನು ತಿಳಿಸಿದ್ದಾರೆ; ವ್ಯರ್ಥವಾಗಿ ಆದರಿಸುತ್ತಾರೆ; ಆದದರಿಂದ ಮಂದೆಯ ಹಾಗೆ ತಮ್ಮ ದಾರಿಯಲ್ಲಿ ಹೋಗಿದ್ದಾರೆ; ಕುರುಬನಿಲ್ಲದ ಕಾರಣ ಕಳವಳಗೊಂಡಿದ್ದಾರೆ.
ಆಗ ಯಾರಾದರೂ ನಿಮಗೆ--ಇಗೋ, ಕ್ರಿಸ್ತನು ಇಲ್ಲಿದ್ದಾನೆ ಇಲ್ಲವೆ ಅಲ್ಲಿದ್ದಾನೆ ಎಂದು ಹೇಳಿದರೆ ಅದನ್ನು ನಂಬಬೇಡಿರಿ.