Home Bibles ಯೆಹೆಜ್ಕೇಲ 11:4 · ಕನ್ನಡ ಬೈಬಲ್
ಯೆಹೆಜ್ಕೇಲ 11:4 · ಕನ್ನಡ ಬೈಬಲ್

ಆದದರಿಂದ ಓ ಮನುಷ್ಯ ಪುತ್ರನೇ, ಅವರಿಗೆ ವಿರೋಧವಾಗಿ ಪ್ರವಾದಿಸು.

Cross references

ಯೆಶಾಯ 58:1

ಗಟ್ಟಿಯಾಗಿ ಕೂಗು, ಹಿಂತೆಗೆಯಬೇಡ. ತುತೂರಿಯಂತೆ ನಿನ್ನ ಸ್ವರವನ್ನೆತ್ತು, ನನ್ನ ಜನರಿಗೆ ಅವರ ದ್ರೋಹವನ್ನೂ ಯಾಕೋಬನ ಮನೆಯವರಿಗೆ ಅವರ ಪಾಪವನ್ನೂ ತೋರಿಸು.

ಯೆಹೆಜ್ಕೇಲ 3:2

ಆಗ ನಾನು ನನ್ನ ಬಾಯನ್ನು ತೆರೆದೆನು, ಆತನು ನನಗೆ ಆ ಸುರಳಿಯನ್ನು ತಿನ್ನಿಸಿದನು.

ಯೆಹೆಜ್ಕೇಲ 3:4

ನನಗೆ ಆತನು--ಮನುಷ್ಯಪುತ್ರನೇ, ಹೋಗು; ಇಸ್ರಾಯೇಲ್ಯರ ಮನೆಯವರ ಬಳಿಗೆ ಹೋಗಿ ಅವರ ಸಂಗಡ ನನ್ನ ಮಾತುಗಳನ್ನು ಮಾತನಾಡು.

ಯೆಹೆಜ್ಕೇಲ 3:17

ಮನುಷ್ಯಪುತ್ರನೇ, ನಾನು ನಿನ್ನನ್ನು ಇಸ್ರಾಯೇ ಲಿನ ಮನೆಯನ್ನು ಕಾಯಲು ಕಾವಲುಗಾರನನ್ನಾಗಿ ಮಾಡಿದ್ದೇನೆ. ಆದದರಿಂದ ನನ್ನ ವಾಕ್ಯವನ್ನು ನನ್ನ ಬಾಯಿಂದ ಕೇಳಿ ನನ್ನಿಂದ ಅವರಿಗೆ ಎಚ್ಚರಿಕೆ ಕೊಡು.

ಯೆಹೆಜ್ಕೇಲ 20:46

ಮನುಷ್ಯಪುತ್ರನೇ, ದಕ್ಷಿಣದ ಕಡೆಗೆ ಮುಖಮಾಡಿ ತೆಂಕಣದ ಕಡೆಗೆ ಮಾತ ನಾಡು; ದಕ್ಷಿಣ ಬಯಲು ಅರಣ್ಯಕ್ಕೆ ವಿರೋಧವಾಗಿ ಪ್ರವಾದಿಸು.

ಯೆಹೆಜ್ಕೇಲ 21:2

ಮನುಷ್ಯಪುತ್ರನೇ, ನೀನು ಯೆರೂಸಲೇಮಿಗೆ ಅಭಿಮುಖನಾಗಿ ಅಲ್ಲಿನ ಪರಿಶುದ್ಧ ಸ್ಥಳಗಳ ಕಡೆಗೆ ಮಾತನಾಡುತ್ತಾ ಇಸ್ರಾ ಯೇಲ್‌ ದೇಶಕ್ಕೆ ವಿರುದ್ಧವಾಗಿ ಪ್ರವಾದಿಸು.

ಯೆಹೆಜ್ಕೇಲ 25:2

ಮನುಷ್ಯಪುತ್ರನೇ, ನೀನು ಅಮ್ಮೋನನ ಕುಮಾರರಿಗೆ ಅಭಿಮುಖನಾಗಿ ಅವರಿಗೆ ವಿರೋಧವಾಗಿ ಪ್ರವಾದಿಸು;

ಹೊಶೇಯ 6:5

ಆದದರಿಂದ ನಾನು ಪ್ರವಾದಿಗಳ ಮುಖಾಂತರ ಕಡಿದುಬಿಟ್ಟು ನನ್ನ ಬಾಯಿ ಮಾತುಗಳಿಂದ ಅವರನ್ನು ಕೊಂದುಹಾಕಿದ್ದೇನೆ; ನಿನ್ನ ನ್ಯಾಯತೀರ್ಪುಗಳು ಬೆಳಕಿನ ಹಾಗೆ ಹೊರಟವು.

ಹೊಶೇಯ 8:1

ನಿನ್ನ ಬಾಯಿಗೆ ತುತೂರಿಯನ್ನು ಇಟ್ಟುಕೋ, ಅವರು ನನ್ನ ಒಡಂಬಡಿಕೆಯನ್ನು ವಿಾರಿ ನನ್ನ ನ್ಯಾಯಪ್ರಮಾಣಕ್ಕೆ ವಿರುದ್ಧವಾಗಿ ಅಪರಾಧ ಮಾಡಿದ್ದರಿಂದ ಅವನು ಹದ್ದಿನ ಹಾಗೆ ಕರ್ತನ ಆಲಯಕ್ಕೆ ವಿರುದ್ಧವಾಗಿ ಬರುತ್ತಾನೆ.

Interlinear

Choose Theme