ಮನುಷ್ಯಪುತ್ರನೇ, ನಿನ್ನ ಸಹೋದರರಿಗೆ, ಹೌದು, ನಿನ್ನ ಸಹೋದರರಿಗೆ, ನಿನ್ನ ಸಮಸ್ತ ಬಂಧು ಗಳಿಗೆ, ಇಸ್ರಾಯೇಲಿನ ಮನೆತನದವರಿಗೆ, ಇವರೆಲ್ಲ ರಿಗೆ ಯೆರೂಸಲೇಮಿನ ನಿವಾಸಿಗಳು--ಕರ್ತನಿಂದ ದೂರ ಹೋಗಿರಿ, ಈ ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳಿದರು.
Cross references
ನಿನ್ನ ಷ್ಟಕ್ಕೆ ನೀನೇ ನಿಂತುಕೋ, ನನ್ನ ಬಳಿಗೆ ಬರಬೇಡ, ಯಾಕಂದರೆ ನಿನಗಿಂತ ನಾನು ಪರಿಶುದ್ಧನಾಗಿದ್ದೇ ನೆಂದು ಹೇಳುವವರು; ಇವರು ನನ್ನ ಮೂಗಿನಲ್ಲಿ ಹೊಗೆಯಾಗಿಯೂ ಹಗಲೆಲ್ಲಾ ಉರಿಯುವ ಬೆಂಕಿ ಯಾಗಿಯೂ ಇದ್ದಾರೆ.
ಕರ್ತನ ವಾಕ್ಯವನ್ನು ಕೇಳಿರಿ, ಆತನ ವಾಕ್ಯಕ್ಕೆ ನಡಗುವವರೇ, ನಿಮ್ಮ ಸಹೋದರರು ನಿಮ್ಮನ್ನು ಹಗೆಮಾಡಿ ನನ್ನ ಹೆಸರಿಗೋಸ್ಕರ ನಿಮ್ಮನ್ನು ಹೊರಗೆ ಹಾಕಿ--ಕರ್ತನು ಮಹಿಮೆ ಹೊಂದಲೆಂದು ಹೇಳಿ ದ್ದಾರೆ; ಆದರೆ ಆತನು ನಿಮ್ಮ ಸಂತೋಷಕ್ಕಾಗಿ ಕಾಣಿಸಿ ಕೊಳ್ಳುವನು; ಅವರು ನಾಚಿಕೆಪಡುವರು.
ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನ ಮೊದಲನೇ ವರುಷವಾಗಿದ್ದ ಯೆಹೂ ದದ ಅರಸನಾದ ಯೋಷೀಯನ ಮಗನಾದ ಯೆಹೋ ಯಾಕೀಮನ ನಾಲ್ಕನೇ ವರುಷದಲ್ಲಿ ಯೆಹೂದದ ಸಮಸ್ತ ಜನರ ವಿಷಯ ಯೆರೆವಿಾಯನಿಗೆ ಉಂಟಾದ ವಾಕ್ಯವು.
ಮನುಷ್ಯಪುತ್ರನೇ, ಇಸ್ರಾಯೇಲಿನ ದೇಶದ ಹಾಳು ಪ್ರದೇಶಗಳಲ್ಲಿ ವಾಸಿಸುವರು-- ಅಬ್ರಹಾಮನೇ ಒಬ್ಬನಾಗಿದ್ದು ದೇಶವನ್ನು ಸ್ವತಂತ್ರಿಸಿ ಕೊಂಡನು, ಆದರೆ ನಾವು ಬಹಳ ಜನರಾಗಿದ್ದು ದೇಶವು ನಮಗೆ ಸ್ವಾಸ್ತ್ಯವಾಗಿ ಕೊಡಲ್ಪಟ್ಟಿದೆ ಎಂದು ಹೇಳುತ್ತಾರೆ.
ಅವರು ನಿಮ್ಮನ್ನು ಸಭಾಮಂದಿರಗಳಿಂದ ಹೊರಗೆ ಹಾಕುವರು; ಹೌದು, ನಿಮ್ಮನ್ನು ಕೊಲ್ಲುವವನು ದೇವರ ಸೇವೆ ಮಾಡುತ್ತಾನೆಂದು ನೆನಸುವ ಗಳಿಗೆ ಬರುತ್ತದೆ.