ಒಬ್ಬ ಕೆರೂಬಿಯನು ಕೆರೂಬಿಯರ ಮಧ್ಯದೊಳಗಿಂದ ತನ್ನ ಕೈಯನ್ನು ಕೆರೂಬಿಯರ ಮಧ್ಯದೊಳಗಿರುವ ಬೆಂಕಿಗೆ ಚಾಚಿ, ತಕ್ಕೊಂಡು ನಾರುಮಡಿಯನ್ನು ಧರಿಸಿಕೊಂಡಿ ದ್ದವನ ಕೈಗೆ ಇಟ್ಟನು. ಇವನು ಅದನ್ನು ತೆಗೆದುಕೊಂಡು ಹೊರಗೆ ಹೋದನು.
Cross references
ಅವುಗಳ ರೂಪವು ಜೀವಿಸುವ ಪ್ರಾಣಿಗಳ ಹಾಗಿದ್ದು ಅವುಗಳ ಆಕಾರವು ಉರಿಯುವ ಬೆಂಕಿಯ ಕೆಂಡ ಗಳಂತೆಯೂ ದೀಪಗಳ ಹಾಗೆಯೂ ಇದ್ದು ಅದು ಜೀವಿಗಳ ಮಧ್ಯದಲ್ಲಿ ಮೇಲೆಯೂ ಕೆಳಗೂ ಹೋಗು ತ್ತಿತ್ತು. ಆ ಬೆಂಕಿಯು ಪ್ರಕಾಶಮಾನವಾಗಿತ್ತು. ಆ ಬೆಂಕಿಯೊಳಗಿಂದ ಮಿಂಚುಗಳು ಹೊರಡುತ್ತಿದ್ದವು.
ಆತನು ನಾರು ಮಡಿಯನ್ನು ಧರಿಸಿಕೊಂಡ ಮನುಷ್ಯನಿಗೆ--ಚಕ್ರಗಳ ಮಧ್ಯದಿಂದಲೂ ಕೆರೂಬಿಯರ ಮಧ್ಯದಿಂದಲೂ ಬೆಂಕಿ ಯನ್ನು ತೆಗೆದುಕೊಳ್ಳಲು ಆಜ್ಞಾಪಿಸಿದನು. ಅವನು ಒಳಗೆ ಹೋಗಿ ಚಕ್ರಗಳ ಬಳಿಯಲ್ಲಿ ನಿಂತನು.
ದೇವಾ ಲಯಕ್ಕೂ ಪರಿಶುದ್ಧ ಸ್ಥಳಕ್ಕೂ ಎರಡು ಬಾಗಲುಗಳಿ ದ್ದವು.
ಮನುಷ್ಯಕುಮಾರನು ತನ್ನ ದೂತರನ್ನು ಕಳುಹಿ ಸುವನು; ಅವರು ಆತಂಕ ಮಾಡುವ ಎಲ್ಲವುಗಳನ್ನೂ ದುಷ್ಟತನ ಮಾಡುವವರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ ಅವರನ್ನು ಬೆಂಕಿಯ ಆವಿಗೆಯಲ್ಲಿ ಹಾಕುವರು;
ಹಾಗೆಯೇ ಲೋಕಾಂತ್ಯ ದಲ್ಲಿ ಇರುವದು; ದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸುವರು.
ಇವೆಲ್ಲವುಗಳು ನೇರವೇರುವ ವರೆಗೆ ಈ ಸಂತತಿಯು ಅಳಿದುಹೋಗುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.