Home Bibles ಯೆಹೆಜ್ಕೇಲ 1:23 · ಕನ್ನಡ ಬೈಬಲ್
ಯೆಹೆಜ್ಕೇಲ 1:23 · ಕನ್ನಡ ಬೈಬಲ್

ಆ ಗಗನಮಂಡಲದ (ರೂಪದ) ಕೆಳಗೆ ಅವುಗಳ ರೆಕ್ಕೆಗಳು ನೆಟ್ಟಗೆ (ನೇರ ವಾಗಿ) ಒಂದಕ್ಕೊಂದು ಸರಿಯಾಗಿದ್ದವು; ಅವುಗಳ ಶರೀರಗಳನ್ನು ಮುಚ್ಚಿಕೊಳ್ಳುವ ಎರಡೆರೆಡು ರೆಕ್ಕೆಗಳು ಎರಡು ಕಡೆಗಳಲ್ಲೂ ಇರುವ ಪ್ರತಿಯೊಂದನ್ನು ಮುಚ್ಚಿ ಕೊಂಡಿದ್ದವು.

Cross references

ಯೋಬ 4:18

ಇಗೋ, ತನ್ನ ಸೇವಕರಲ್ಲಿ ಆತನು ನಂಬಿಕೆ ಇಡುವದಿಲ್ಲ; ತನ್ನ ದೂತರಲ್ಲಿ ತಪ್ಪನ್ನೆಣಿಸುತ್ತಾನೆ.

ಕೀರ್ತನೆಗಳು 89:7

ದೇವರು ಪರಿಶುದ್ಧರ ಸಭೆಯಲ್ಲಿ ಬಹಳ ಭೀಕರನೂ ತನ್ನ ಸುತ್ತಲಿರುವವರೆಲ್ಲರಿಗೆ ಭಯಂ ಕರನೂ ಆಗಿದ್ದಾನೆ.

ಯೆಹೆಜ್ಕೇಲ 1:11

ಅವುಗಳ ಮುಖಗಳು ಹೀಗಿದ್ದವು; ಅವುಗಳ ರೆಕ್ಕೆಗಳು ಮೇಲಕ್ಕೆ ಚಾಚಲ್ಪಟ್ಟು ಪ್ರತಿಯೊಂದಕ್ಕೂ ಎರಡು ರೆಕ್ಕೆಗಳಿದ್ದು ಒಂದಕ್ಕೊಂದು ಅಂಟಿಕೊಂಡಿದ್ದವು; ಮಿಕ್ಕ ಎರಡು ಅವುಗಳ ದೇಹವನ್ನು ಮುಚ್ಚಿಕೊಂಡಿದ್ದವು.

ಯೆಹೆಜ್ಕೇಲ 1:24

ಅವು ಹೋದಾಗ ನಾನು ಅವುಗಳ ರೆಕ್ಕೆಗಳ ಶಬ್ದವನ್ನು ಕೇಳಿದೆನು; ಅದು ಜಲಪ್ರವಾಹದ ಶಬ್ದದಂತೆಯೂ ಸರ್ವಶಕ್ತನ ಶಬ್ದದ ಹಾಗೆಯೂ ಸಂದಣಿಯ ಶಬ್ದದಂತೆಯೂ ಸೈನ್ಯದ ಶಬ್ದದ ಹಾಗೆಯೂ ಇತ್ತು; ಅವು ನಿಲ್ಲುವಾಗ ತಮ್ಮ ರೆಕ್ಕೆಗಳನ್ನು ಕೆಳಗೆ ಇಳಿಸುತ್ತಿದ್ದವು.

ಲೂಕ 17:10

ಅದೇ ರೀತಿಯಾಗಿ ನಿಮಗೆ ಆಜ್ಞಾಪಿಸಿದವುಗಳನ್ನೆಲ್ಲಾ ನೀವು ಮಾಡಿದ ಮೇಲೆ-- ನಾವು ನಿಷ್ಪ್ರಯೋಜಕರಾದ ಆಳುಗಳು; ಯಾಕಂದರೆ ನಾವು ಮಾಡಬೇಕಾದದ್ದನ್ನೇ ಮಾಡಿದ್ದೇವೆ ಎಂದು ನೀವು ಅನ್ನಿರಿ ಎಂದು ಹೇಳಿದನು.

Interlinear

Choose Theme