Home Bibles ನಿರ್ಗಮಕಾಂಡ 8:12 · ಕನ್ನಡ ಬೈಬಲ್
ನಿರ್ಗಮಕಾಂಡ 8:12 · ಕನ್ನಡ ಬೈಬಲ್

ಮೋಶೆ ಆರೋನರು ಫರೋಹನನ್ನು ಬಿಟ್ಟು ಹೊರಗೆ ಹೋದಾಗ ಮೋಶೆ ಫರೋಹನ ಮೇಲೆ ಬರಮಾಡಿದ ಕಪ್ಪೆಗಳ ನಿಮಿತ್ತ ಕರ್ತನಿಗೆ ಮೊರೆಯಿಟ್ಟನು.

Cross references

ನಿರ್ಗಮಕಾಂಡ 8:8

ಆಗ ಫರೋಹನು ಮೋಶೆ ಆರೋನರನ್ನು ಕರೆ ಯಿಸಿ--ನೀವು ಕರ್ತನನ್ನು ಬೇಡಿಕೊಂಡು ಈ ಕಪ್ಪೆ ಗಳನ್ನು ನನ್ನ ಬಳಿಯಿಂದಲೂ ನನ್ನ ಪ್ರಜೆಗಳ ಬಳಿ ಯಿಂದಲೂ ತೊಲಗಿಸಬೇಕು. ಹಾಗೆ ಮಾಡಿದರೆ ನಿಮ್ಮ ಜನರು ಕರ್ತನಿಗೋಸ್ಕರ ಯಜ್ಞಮಾಡುವಂತೆ ಅವರಿಗೆ ನಾನು ಅಪ್ಪಣೆ ಕೊಡುವೆನು ಅಂದನು.

ನಿರ್ಗಮಕಾಂಡ 8:30

ತರುವಾಯ ಮೋಶೆಯು ಫರೋಹನನ್ನು ಬಿಟ್ಟು ಹೋಗಿ ಕರ್ತನನ್ನು ಬೇಡಿಕೊಂಡನು.

ನಿರ್ಗಮಕಾಂಡ 9:33

ಮೋಶೆಯು ಫರೋಹನನ್ನು ಬಿಟ್ಟು ಪಟ್ಟಣದ ಹೊರಗೆ ಬಂದು ತನ್ನ ಕೈಗಳನ್ನು ಕರ್ತನ ಕಡೆಗೆ ಚಾಚಿದನು. ಆಗ ಗುಡುಗುಗಳೂ ಆನೆಕಲ್ಲಿನ ಮಳೆಯೂ ನಿಂತುಹೋದವು. ಇನ್ನು ಮಳೆಯು ಭೂಮಿಯ ಮೇಲೆ ಬೀಳಲಿಲ್ಲ.

ನಿರ್ಗಮಕಾಂಡ 10:18

ಆಗ ಅವನು ಫರೋಹನನ್ನು ಬಿಟ್ಟುಹೋಗಿ ಕರ್ತನನ್ನು ಬೇಡಿಕೊಂಡನು.

ನಿರ್ಗಮಕಾಂಡ 32:11

ಅದಕ್ಕೆ ಮೋಶೆಯು ತನ್ನ ದೇವರಾದ ಕರ್ತನ ಸನ್ನಿಧಿಯಲ್ಲಿ ಬೇಡಿಕೊಂಡು ಹೇಳಿದ್ದೇನಂದರೆ--ಕರ್ತನೇ, ನೀನು ಮಹಾಶಕ್ತಿಯಿಂದಲೂ ಬಲವುಳ್ಳ ಕೈಯಿಂದಲೂ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡಿದ ನಿನ್ನ ಜನರ ಮೇಲೆ ನಿನ್ನ ಕೋಪವು ಯಾಕೆ ಉರಿಯುವದು?

1 ಸಮುವೇಲ 12:23

ಉತ್ತಮವಾದ ಸರಿಯಾದ ಮಾರ್ಗವನ್ನು ನಿಮಗೆ ಬೋಧಿಸುವೆನು.

ಕೀರ್ತನೆಗಳು 105:31

ಆತನು ಹೇಳಲು ನೊಣದ ಗುಂಪುಗಳೂ ಅವರ ಮೇರೆಗಳಲ್ಲೆಲ್ಲಾ ಹೇನುಗಳೂ ಬಂದವು.

ಯೆಹೆಜ್ಕೇಲ 36:37

ದೇವರಾದ ಕರ್ತನು ಹೀಗೆ ಹೇಳುತ್ತಾನೆ; ಇದನ್ನು ಅವರಿಗೆ ಮಾಡಲು ನಾನಿನ್ನೂ ಇಸ್ರಾಯೇಲನ ಮನೆ ತನದವರಿಂದ ವಿಚಾರಿಸುವೆನು; ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.ಪರಿ ಶುದ್ಧ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು; ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವವು; ನಾನೇ ಕರ್ತನೆಂದು ಅವರಿಗೆ ತಿಳಿಯುವದು.

ಯಾಕೋಬ 5:16

ನೀವು ಸ್ವಸ್ಥವಾಗಬೇಕಾದರೆ ನಿಮ್ಮ ತಪ್ಪುಗಳನ್ನು ಒಬ್ಬರಿಗೊಬ್ಬರು ಅರಿಕೆಮಾಡಿ ಒಬ್ಬರಿ ಗೋಸ್ಕರ ಒಬ್ಬರು ಪ್ರಾರ್ಥಿಸಿರಿ; ನೀತಿವಂತನ ಅತ್ಯಾಸಕ್ತಿಯುಳ್ಳ ಪ್ರಾರ್ಥನೆಯು ಬಹು ಫಲಕಾರಿಯಾಗುತ್ತದೆ.

Interlinear

Choose Theme