Home Bibles ನಿರ್ಗಮಕಾಂಡ 6:23 · ಕನ್ನಡ ಬೈಬಲ್
ನಿರ್ಗಮಕಾಂಡ 6:23 · ಕನ್ನಡ ಬೈಬಲ್

ಆರೋನನು ಅವ್ಮೆಾನಾದಾಬನ ಮಗಳೂ ನಹಶೋನನ ಸಹೋದರಿಯೂ ಆದ ಎಲೀಶೇಬ ಳನ್ನು ತನ್ನ ಹೆಂಡತಿಯಾಗಿ ತಕ್ಕೊಂಡನು. ಆಕೆಯು ಅವನಿಗೆ--ನಾದಾಬ್‌ ಅಬೀಹೂ ಎಲ್ಲಾಜಾರ್‌ ಈತಾಮಾರ್‌ ಇವರನ್ನು ಹೆತ್ತಳು.

Cross references

ನಿರ್ಗಮಕಾಂಡ 24:1

ಆತನು ಮೋಶೆಗೆ--ನೀನೂ ಆರೋನನೂ ನಾದಾಬನೂ ಅಬೀಹೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಕರ್ತನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.

ನಿರ್ಗಮಕಾಂಡ 24:9

ಆಗ ಮೋಶೆಯೂ ಅರೋನನೂ ನಾದಾಬನೂ ಅಬೀಹುವೂ ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಜನರೂ ಏರಿಹೋದರು.

ನಿರ್ಗಮಕಾಂಡ 28:1

ಇದಲ್ಲದೆ ನನಗೆ ಯಾಜಕನ ಸೇವೆಮಾಡುವದಕ್ಕೆ ನೀನು ನಿನ್ನ ಅಣ್ಣನಾದ ಆರೋನನನ್ನೂ ಅವನ ಮಕ್ಕಳಾದ ನಾದಾಬ್‌ ಅಬೀಹೂ ಎಲಿಯೇಜರ್‌ ಈತಾಮಾರ್‌ ಎಂಬವರನ್ನೂ ಇಸ್ರಾಯೇಲ್‌ ಮಕ್ಕಳಿಂದ ನಿನ್ನ ಹತ್ತಿರ ಬರಮಾಡ ಬೇಕು.

ಲೇವ್ಯಕಾಂಡ 10:1

ಇದಲ್ಲದೆ ಆರೋನನ ಕುಮಾರರಾದ ನಾದಾಬ್‌ ಅಬೀಹು ಅವರವರ ಅಗ್ನಿ ಪಾತ್ರೆಗಳನ್ನು ತೆಗೆದುಕೊಂಡು ಅದರಲ್ಲಿ ಬೆಂಕಿಯನ್ನಿಟ್ಟು ಅದರ ಮೇಲೆ ಸುವಾಸನೆಯ ಧೂಪವನ್ನು ಹಾಕಿ ಕರ್ತನು ಆಜ್ಞಾಪಿಸದೆ ಇದ್ದ ಬೇರೆ ಬೆಂಕಿಯನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸಿದರು.

ಲೇವ್ಯಕಾಂಡ 10:6

ಮೋಶೆಯು ಆರೋನನಿಗೂ ಅವನ ಕುಮಾರ ರಾದ ಎಲ್ಲಾಜಾರ್‌ನಿಗೂ ಈತಾಮಾರ್‌ನಿಗೂ ಹೇಳಿದ್ದೇ ನಂದರೆ--ನೀವು ಸಾಯದಂತೆಯೂ ಕೋಪವು ಜನ ರೆಲ್ಲರ ಮೇಲೆ ಬಾರದಂತೆಯೂ ನಿಮ್ಮ ತಲೆಗಳನ್ನು ಮುಚ್ಚಿಕೊಳ್ಳಿರಿ, ಇಲ್ಲವೆ ನಿಮ್ಮ ಬಟ್ಟೆಗಳನ್ನು ಹರಿದು ಕೊಳ್ಳಬೇಡಿರಿ; ಆದರೆ ಕರ್ತನು ಉರಿಸಿದ ನಿಮ್ಮ ಉರಿಯ ನಿಮಿತ್ತ ಸಹೋದರರಾಗಿರುವ ಇಸ್ರಾಯೇಲಿನ ಮನೆ ತನದವರೆಲ್ಲರೂ ಗೋಳಾಡಲಿ.

ಅಂಕೆಗಳ ಪುಸ್ತಕ 1:7

ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್‌,

ಅಂಕೆಗಳ ಪುಸ್ತಕ 2:3

ಪೂರ್ವ ದಿಕ್ಕಿನಲ್ಲಿ ಸೂರ್ಯೋದಯದ ಕಡೆಗೆ ಇಳುಕೊಳ್ಳುವವರು ಅವರವರ ಸೈನ್ಯಗಳ ಪ್ರಕಾರ ಯೆಹೂದನ ದಂಡಿನ ಧ್ವಜವು; ಯೆಹೂದನ ಮಕ್ಕಳಿಗೆ ಅವ್ಮೆಾನಾದಾಬನ ಮಗನಾದ ನಹಶೋನನು ಸೈನ್ಯಾಧಿಪತಿ.

ಅಂಕೆಗಳ ಪುಸ್ತಕ 3:2

ಆರೋನನ ಮಕ್ಕಳ ಹೆಸರುಗಳು ಇವೇ; ಚೊಚ್ಚಲ ಮಗನು ನಾದಾಬನು, ತರುವಾಯ ಅಬೀಹೂ, ಎಲ್ಲಾಜಾರನು, ಈತಾಮಾರನು.

ಅಂಕೆಗಳ ಪುಸ್ತಕ 20:25

ಆರೋನ ನನ್ನೂ ಅವನ ಮಗನಾದ ಎಲ್ಲಾಜಾರನನ್ನೂ ಹೋರ್‌ ಬೆಟ್ಟಕ್ಕೆ ಕರಕೊಂಡು ಬಂದು.

ಅಂಕೆಗಳ ಪುಸ್ತಕ 20:28

ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.

ಅಂಕೆಗಳ ಪುಸ್ತಕ 26:60

ಆರೋನನಿಗೆ ನಾದಾಬ್‌ ಅಬೀಹೂ ಎಲ್ಲಾಜರನೂ ಈತಾಮಾರ್‌ ಹುಟ್ಟಿದರು.

ಯೆಹೋಶುವ 24:33

ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್‌ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.

ರೂತ 4:19

ರಾಮನು ಅವ್ಮೆಾನಾದಾಬನನ್ನು ಪಡೆದನು;

1 ದಿನವೃತ್ತಾಂತ 2:10

ರಾಮನು ಅವ್ಮೆಾನಾದಾಬನನ್ನು ಪಡೆದನು. ಅವ್ಮೆಾನಾದಾಬನು ಯೆಹೂದನ ಮಕ್ಕಳಿಗೆ ಪ್ರಭು ವಾದ ನಹಶೋನನನ್ನು ಪಡೆದನು,

1 ದಿನವೃತ್ತಾಂತ 6:3

ಅಮ್ರಾಮನ ಮಕ್ಕಳು--ಆರೋ ನನು, ಮೋಶೆಯು, ಮಿರ್ಯಾಮಳು.

1 ದಿನವೃತ್ತಾಂತ 24:1

ಆರೋನನ ಕುಮಾರರಲ್ಲಿ ವರ್ಗಗಳಾಗಿ ವಿಭಾಗಿಸಿದವರು ಇವರೇ. ಆರೋನನ ಕುಮಾರರು--ನಾದಾಬನೂ ಅಬೀಹುವೂ ಎಲ್ಲಾಜಾ ರನೂ ಈತಾಮಾರನೂ;

ಮತ್ತಾಯ 1:4

ಅರಾಮನಿಂದ ಅವ್ಮೆಾನಾದಾಬನು ಹುಟ್ಟಿ ದನು; ಅವ್ಮೆಾನಾದಾಬನಿಂದ ನಹಶೋನನು ಹುಟ್ಟಿ ದನು; ನಹಶೋನನಿಂದ ಸಲ್ಮೋನನು ಹುಟ್ಟಿದನು;

ಲೂಕ 1:5

ಯೂದಾಯದ ಅರಸನಾದ ಹೆರೋದನ ದಿನ ಗಳಲ್ಲಿ ಅಬೀಯನ ವರ್ಗಕ್ಕೆ ಸೇರಿದ ಜಕರಿಯನೆಂದು ಹೆಸರಿದ್ದ ಒಬ್ಬ ಯಾಜಕನಿದ್ದನು. ಅವನ ಹೆಂಡತಿಯು ಆರೋನನ ಕುಮಾರ್ತೆಯರಿಗೆ ಸಂಬಂಧಪಟ್ಟವಳು. ಆಕೆಯ ಹೆಸರು ಎಲಿಸಬೇತ್‌.

Interlinear

Choose Theme