ಮೋಶೆಯು ಹಾಗೆಯೇ ಮಾಡಿದನು. ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
Cross references
ಹಾಗೆಯೇ ನೋಹನು ಮಾಡಿದನು; ದೇವರು ಅವನಿಗೆ ಅಪ್ಪಣೆಕೊಟ್ಟ ಪ್ರಕಾರವೇ ಅವನು ಮಾಡಿದನು.
ಕರ್ತನು ತಮಗೆ ಆಜ್ಞಾಪಿಸಿದ ಪ್ರಕಾರವೆ ಮೋಶೆ ಆರೋನರು ಮಾಡಿದರು, ಅಂತಯೇ ಅವರು ಮಾಡಿ ದರು.
ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ.
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಇಸ್ರಾಯೇಲ್ ಮಕ್ಕಳು ಈ ಕೆಲಸಗಳನ್ನೆಲ್ಲಾ ಮಾಡಿ ದರು.ಮೋಶೆಯು ಆ ಕೆಲಸವನ್ನೆಲ್ಲಾ ನೋಡಿದಾಗ ಇಗೋ, ಕರ್ತನು ಆಜ್ಞಾಪಿಸಿದ ಪ್ರಕಾರವೇ ಅವರು ಅದನ್ನು ಮಾಡಿದ್ದರು. ಆಗ ಮೋಶೆಯು ಅವರನ್ನು ಆಶೀರ್ವದಿಸಿದನು.
ಎರಡನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಗುಡಾರವು ನಿಲ್ಲಿಸಲ್ಪಟ್ಟಿತು.
ಅವನ ತಲೆಯ ಮೇಲೆ ಮುಂಡಾಸವನ್ನು ಇಟ್ಟು ಆ ಮುಂಡಾ ಸದ ಮುಂಭಾಗದಲ್ಲಿ ಬಂಗಾರದ ಪಟ್ಟಿಯನ್ನೂ ಪವಿತ್ರ ವಾದ ಕಿರೀಟವನ್ನೂ ಕರ್ತನು ಮೋಶೆಗೆ ಆಜ್ಞಾಪಿಸಿ ದಂತೆಯೇ ಇಟ್ಟನು.
ಮೋಶೆಯು ಆರೋನನ ಮಕ್ಕಳನ್ನು ಕರತಂದು ಅವರ ಮೇಲೆ ಮೇಲಂಗಿಗಳನ್ನು ಹಾಕಿ ಅವರ ನಡುಗಳನ್ನು ಕಟ್ಟಿ ಕರ್ತನು ಮೋಶೆಗೆ ಆಜ್ಞಾಪಿಸಿದಂತೆ ಅವರ ಮೇಲೆ ಕುಲಾಯಿಗಳನ್ನು ಇಟ್ಟನು.
ಅವನು ಕರುಳುಗಳನ್ನೂ ಕಾಲುಗಳನ್ನೂ ನೀರಿನಲ್ಲಿ ತೊಳೆದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆ ಟಗರನ್ನು ಪೂರ್ಣ ವಾಗಿ ಯಜ್ಞವೇದಿಯ ಮೇಲೆ ಸುಟ್ಟನು. ಅದು ದಹನ ಬಲಿಯಾಗಿ ಕರ್ತನಿಗೆ ಬೆಂಕಿಯಿಂದ ಮಾಡಿದ ಸುವಾ ಸನೆಯ ಸಮರ್ಪಣೆಯಾಗಿತ್ತು.
ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು.
ಇಲ್ಲವೆ ಆ ಮೇಘವು ಎರಡು ದಿವಸಗಳಾದರೂ ಒಂದು ತಿಂಗಳಾದರೂ ಒಂದು ವರ್ಷವಾದರೂ ಗುಡಾರದ ಮೇಲೆ ನೆಲೆಸಿ ತಡಮಾಡಿದರೆ ಇಸ್ರಾ ಯೇಲ್ ಮಕ್ಕಳು ಪ್ರಯಾಣಮಾಡದೆ ಇಳುಕೊಂಡಿ ದ್ದರು. ಅದು ಮೇಲಕ್ಕೆತ್ತಲ್ಪಟ್ಟಾಗಲೇ ಅವರು ಪ್ರಯಾಣ ಮಾಡುತ್ತಿದ್ದರು.ಕರ್ತನ ಆಜ್ಞೆಯ ಪ್ರಕಾರ ಅವರು ಇಳುಕೊಳ್ಳುತ್ತಾ ಕರ್ತನ ಆಜ್ಞೆಯ ಪ್ರಕಾರ ಪ್ರಯಾಣ ಮಾಡುತ್ತಾ ಇದ್ದರು. ಮೋಶೆಗೆ ಕರ್ತನು ಆಜ್ಞಾಪಿಸಿ ದಂತೆ ಕರ್ತನ ಅಪ್ಪಣೆಯನ್ನು ಕಾಪಾಡುತ್ತಿದ್ದರು.
ಹೀಗಿರುವದರಿಂದ ಈಗ ಇಸ್ರಾಯೇಲೇ, ನೀವು ಬದುಕಿ ನಿಮ್ಮ ಪಿತೃಗಳ ದೇವರಾದ ಕರ್ತನು ನಿಮಗೆ ಕೊಡುವ ದೇಶವನ್ನು ಪ್ರವೇಶಿಸಿ ಸ್ವತಂತ್ರಿಸಿಕೊಳ್ಳುವ ಹಾಗೆ ನಾನು ನಿಮಗೆ ಬೋಧಿಸುವ ನಿಯಮಗಳನ್ನೂ ನ್ಯಾಯಗಳನ್ನೂ ಕೇಳಿ ಅವುಗಳನ್ನು ಮಾಡಿರಿ.
ನಾನು ನಿನಗೆ ಆಜ್ಞಾಪಿಸುವ ಮಾತುಗಳನ್ನೆಲ್ಲಾ ಲಕ್ಷಿಸಿ ಕೈಕೊಳ್ಳಬೇಕು; ಅದಕ್ಕೆ ಕೂಡಿಸಬೇಡ; ಇಲ್ಲವೆ ಅದರಿಂದ ಕಡಿಮೆಮಾಡಬೇಡ.
ನ್ಯಾಯಪ್ರಮಾಣ ಮತ್ತು ಸಾಕ್ಷಿಯ ವಿಷಯದಲ್ಲಿ ಈ ವಾಕ್ಯದ ಪ್ರಕಾರ ಹೇಳದಿರು ವದು ಅವರಲ್ಲಿ ಬೆಳಕಿಲ್ಲದ್ದರಿಂದಲೇ.
ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
ಹೀಗಿರಲು ಮನೆವಾರ್ತೆಯವನು ನಂಬಿಗಸ್ತನಾಗಿ ಕಂಡುಬರುವದು ಅವಶ್ಯವಾಗಿದೆ.