ಅವರು ನಿನ್ನನ್ನು ನಂಬದೆ ಮೊದಲನೆಯ ಮಹ ತ್ಕಾರ್ಯವನ್ನು ತಿರಸ್ಕರಿಸಿದರೂ ಎರಡನೆಯದನ್ನು ಲಕ್ಷ್ಯವಿಟ್ಟು ನಂಬುವರು.
Cross references
ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
ಕರ್ತನು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಹೇಳಿ ಜನರ ಕಣ್ಣುಗಳ ಮುಂದೆ ಸೂಚಕ ಕಾರ್ಯಗಳನ್ನು ಮಾಡಲು. ಜನರು ನಂಬಿದರು.ಕರ್ತನು ಇಸ್ರಾಯೇಲ್ ಮಕ್ಕಳನ್ನು ದರ್ಶಿಸಿ ಅವರ ಸಂಕಟವನ್ನು ನೋಡಿದ್ದಾನೆಂದು ಅವರು ಕೇಳಿದಾಗ ತಲೆಬಾಗಿಸಿ ಆರಾಧಿಸಿದರು.
ನಾನು ಆತನೇ ಎಂದೂ ನನ್ನ ಹಾಗೆ ಬೇರೆ ದೇವರಿಲ್ಲವೆಂದೂ ಈಗ ನೋಡಿರಿ; ನಾನೇ ಸಾಯಿಸು ತ್ತೇನೆ, ಬದುಕಿಸುತ್ತೇನೆ; ಗಾಯ ಮಾಡುತ್ತೇನೆ, ನಾನೇ ಸ್ವಸ್ಥ ಮಾಡುತ್ತೇನೆ. ನನ್ನ ಕೈಯಿಂದ ತಪ್ಪಿಸುವವನು ಯಾರೂ ಇಲ್ಲ.
ಅದಕ್ಕವನುಈಗ ನಿನ್ನ ಸಮ್ಮುಖದಲ್ಲಿ ನನಗೆ ದಯೆ ದೊರಕಿದ್ದರೆ ನನ್ನ ಸಂಗಡ ಮಾತಾಡುವಾತನು ನೀನೇ ಎಂಬದಕ್ಕೆ ನನಗೆ ಒಂದು ಗುರುತನ್ನು ತೋರಿಸಬೇಕು.
ಇಸ್ರಾಯೇಲ್ಯರ ಅರಸನು ಆ ಪತ್ರವನ್ನು ಓದಿದ ಮೇಲೆ ತನ್ನ ವಸ್ತ್ರಗಳನ್ನು ಹರಿದುಕೊಂಡು--ಕೊಲ್ಲು ವದಕ್ಕೂ ಬದುಕಿಸುವದಕ್ಕೂ ನಾನು ದೇವರೋ? ಇವನ ಕುಷ್ಠರೋಗವನ್ನು ತಪ್ಪಿಸಿ ವಾಸಿಮಾಡುವದಕ್ಕೆ ನನ್ನ ಬಳಿಗೆ ಕಳುಹಿಸಿದ್ದೇನು? ಇವನು ನನಗೆ ವಿರೋಧ ವಾಗಿ ಜಗಳಕ್ಕೆ ಕಾರಣ ಹುಡುಕುವದನ್ನು ನೀವು ನೋಡಿ ತಿಳುಕೊಳ್ಳಿರಿ ಅಂದನು.
ಆತನೇ ನೋಯಿಸುತ್ತಾನೆ, ಕಟ್ಟುವವನು ಆತನೇ; ಆತನು ಗಾಯ ಮಾಡುತ್ತಾನೆ; ಆತನ ಕೈಗಳು ಸ್ವಸ್ಥಮಾಡುತ್ತವೆ.
ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ. ಇಲ್ಲಿ ಸ್ವಲ್ಪ.
ಆದರೆ ಆತನು ಅನೇಕ ಅದ್ಭುತಕಾರ್ಯಗಳನ್ನು ಅವರ ಮುಂದೆ ಮಾಡಿದಾಗ್ಯೂ ಅವರು ಆತನನ್ನು ನಂಬಲಿಲ್ಲ.