ಅವನ ಸಂಗಡ ನೀನು ಮಾತನಾಡಿ ಹೇಳಬೇಕಾದ ಮಾತು ಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಗೂ ಅವನ ಬಾಯಿಗೂ ಸಹಾಯವಾಗಿದ್ದು ನೀನು ಮಾಡತಕ್ಕದ್ದನ್ನು ಕಲಿಸುವೆನು.
Cross references
ಹಾಗಾದರೆ ಈಗ ಹೋಗು, ನಾನೇ ನಿನ್ನ ಬಾಯಿ ಯಾಗಿದ್ದು ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು ಅಂದನು.
ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಕರ್ತನ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
ಆಗ ಕರ್ತನು ಮೋಶೆಗೆ--ಇಗೋ, ನಿನ್ನನ್ನು ಫರೋಹನಿಗೆ ದೇವರಂತೆ ಮಾಡಿದ್ದೇನೆ; ನಿನ್ನ ಸಹೋದರನಾದ ಆರೋನನ್ನು ನಿನ್ನಗೋಸ್ಕರ ಪ್ರವಾದಿಯನ್ನಾಗಿ ಮಾಡಿದ್ದೇನೆ.
ಬಿಳಾಮನು ಬಾಲಾಕನಿಗೆ ಹೇಳಿದ್ದು--ಇಗೋ, ನಾನು ನಿನ್ನ ಬಳಿಗೆ ಬಂದಿದ್ದೇನೆ; ಈಗ ಏನಾದರೂ ಹೇಳುವದಕ್ಕೆ ನನಗೆ ಯಾವ ಶಕ್ತಿಯಾದರೂ ಇದೆಯೋ? ನನ್ನಿಂದಾಗುವದೋ? ದೇವರು ನನ್ನಿಂದ ಆಡಿಸಿದ ಮಾತನ್ನೇ ಹೇಳುವೆನು.
ಕರ್ತನು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆನೀನು ಬಾಲಾಕನ ಬಳಿಗೆ ತಿರಿಗಿ ಹೋಗಿ ಈ ಪ್ರಕಾರ ಮಾತನಾಡಬೇಕು ಅಂದನು.
ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನು ನನ್ನ ಬಾಯೊಳಗೆ ಇಡುವದನ್ನು ಹೇಳುವದಕ್ಕೆ ನಾನು ಜಾಗ್ರತೆಯಾಗಿರ ಬೇಕಲ್ಲವೋ ಅಂದನು.
ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು.
ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.
ನಿನ್ನ ಹಾಗಿರುವ ಪ್ರವಾದಿಯನ್ನು ಅವರ ಸಹೋದರರಲ್ಲಿಂದ ಅವರಿಗೆ ಎಬ್ಬಿಸುವೆನು; ನನ್ನ ವಾಕ್ಯಗಳನ್ನು ಅವನ ಬಾಯಲ್ಲಿ ಇಡುವೆನು; ನಾನು ಅವನಿಗೆ ಆಜ್ಞಾಪಿಸುವದನ್ನೆಲ್ಲಾ ಅವನು ಅವರಿಗೆ ಹೇಳುವನು.
ತಲೆಗೆ ಎಣ್ಣೆಹಚ್ಚಿಕೊಳ್ಳದೆ ಸತ್ತವರಿ ಗೋಸ್ಕರ ಅನೇಕ ದಿವಸಗಳಿಂದ ದುಃಖಿಸುವವಳ ಹಾಗಿದ್ದು ಅರಸನ ಬಳಿಗೆ ಹೋಗಿ ಅವನ ಸಂಗಡ ಈ ಪ್ರಕಾರ ಮಾತನಾಡು ಎಂದು ಹೇಳಿ ಯೋವಾ ಬನು ಅವಳಿಗೆ ಕಲಿಸಿಕೊಟ್ಟನು.
ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.
ಆಕಾಶಗಳನ್ನು ನಿಲ್ಲಿಸುವದಕ್ಕೂ ಭೂಮಿಗೆ ಅಸ್ತಿವಾರವನ್ನು ಹಾಕುವ ದಕ್ಕೂ ಚೀಯೋನಿಗೆ ನೀನು ನನ್ನ ಜನರೆಂದು ಹೇಳುವ ದಕ್ಕೂ ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿಟ್ಟು ನನ್ನ ಕೈ ನೆರಳಿನಿಂದ ನಿನ್ನನ್ನು ಮುಚ್ಚಿದ್ದೇನೆ.
ಕರ್ತನು ಹೇಳುವದೇ ನಂದರೆ--ನಾನಾದರೋ ಅವರ ಸಂಗಡ ಮಾಡುವ ಒಡಂಬಡಿಕೆ ಇದೇ--ನಿನ್ನ ಮೇಲಿರುವ ನನ್ನ ಆತ್ಮನೂ ನಾನು ನಿನ್ನ ಬಾಯಲ್ಲಿ ಇಟ್ಟಿರುವ ನನ್ನ ವಾಕ್ಯಗಳೂ ಇಂದಿನಿಂದ ಸದಾಕಾಲಕ್ಕೆ ನಿನ್ನ ಬಾಯಿಂದಲೂ ನಿನ್ನ ಸಂತಾನದ ಬಾಯಿಂದಲೂ ನಿನ್ನ ಸಂತತಿಯ ಸಂತಾ ನದ ಬಾಯಿಂದಲೂ ತೊಲಗುವದಿಲ್ಲವೆಂದು ಕರ್ತನು ಹೇಳುತ್ತಾನೆ.
ಆಗ ಕರ್ತನು ಕೈಚಾಚಿ ನನ್ನ ಬಾಯಿಯನ್ನು ಮುಟ್ಟಿದನು; ನನಗೆ--ಇಗೋ, ನನ್ನ ವಾಕ್ಯಗಳನ್ನು ನಿನ್ನ ಬಾಯಲ್ಲಿ ಇಟ್ಟಿದ್ದೇನೆ.
ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
ಯಾಕ ಂದರೆ ನಿಮ್ಮ ವಿರೋಧಿಗಳೆಲ್ಲರೂ ಪ್ರತಿವಾದ ಮಾಡ ದಂಥ ಇಲ್ಲವೆ ವಿರೋಧಿಸದಂಥ ಬಾಯನ್ನೂ ಜ್ಞಾನ ವನ್ನೂ ನಾನು ನಿಮಗೆ ಕೊಡುವೆನು.
ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ, ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು
ಇದಲ್ಲದೆ ಸಹೋದರರೇ, ನಾನು ನಿಮಗೆ ಸಾರಿದ ಸುವಾರ್ತೆಯನ್ನು ತಿಳಿಯಪಡಿ ಸುತ್ತೇನೆ; ನೀವು ಅದನ್ನು ಅಂಗೀಕರಿಸಿದಿರಿ ಮತ್ತು ಅದರಲ್ಲಿ ನಿಂತಿದ್ದೀರಿ.