Home Bibles ನಿರ್ಗಮಕಾಂಡ 39:28 · ಕನ್ನಡ ಬೈಬಲ್
ನಿರ್ಗಮಕಾಂಡ 39:28 · ಕನ್ನಡ ಬೈಬಲ್

ನಾರಿನ ಮುಂಡಾಸವನ್ನೂ ಸೌಂದರ್ಯವುಳ್ಳ ನಾರಿನ ಕುಲಾವಿಗಳನ್ನೂ ನಾರು ಗಳಿಂದ ಮಾಡಿದ ಇಜಾರುಗಳನ್ನೂ

Cross references

ನಿರ್ಗಮಕಾಂಡ 28:4

ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು.

ನಿರ್ಗಮಕಾಂಡ 28:32

ಅದರ ಮಧ್ಯದಲ್ಲಿ ಮೇಲ್ಗಡೆ (ತಲೆದೂರಿಸುವದಕ್ಕೆ) ರಂಧ್ರವಿರಬೇಕು. ಆ ರಂಧ್ರದ ಸುತ್ತಲೂ ಹೆಣಿಗೆಯ ಕೆಲಸದ ಗೋಟಿರ ಬೇಕು. ಅದು ಹರಿಯದ ಹಾಗೆ ಅದಕ್ಕೆ ರಂಧ್ರದ ಕವಚವಿರಬೇಕು.

ನಿರ್ಗಮಕಾಂಡ 28:39

ನಯವಾದ ನಾರಿನಿಂದ ಕಸೂತಿ ಮಾಡಿದ ಮೇಲಂಗಿಯನ್ನೂ ನಯವಾದ ನಾರಿನ ಮುಂಡಾಸ ವನ್ನೂ ಹೆಣಿಗೆಯ ಕೆಲಸದ ನಡುಕಟ್ಟನ್ನೂ ಮಾಡಿಸ ಬೇಕು.

ನಿರ್ಗಮಕಾಂಡ 28:42

ಅವರ ಬೆತ್ತಲೆಯನ್ನು ಮುಚ್ಚುವ ಹಾಗೆ ನಾರಿನ ಇಜಾರುಗಳನ್ನು ಮಾಡಿಸು. ಅವು ಸೊಂಟದಿಂದ ತೊಡೆಯ ವರೆಗೆ ಇರಬೇಕು.ಆರೋನನೂ ಅವನ ಕುಮಾರರೂ ಸಭೆಯ ಗುಡಾರಕ್ಕೆ ಹೋಗುವಾಗಲೂ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವದಕ್ಕೆ ಯಜ್ಞವೇದಿಯ ಸವಿಾಪಕ್ಕೆ ಬರುವಾಗಲೂ ತಮ್ಮ ಅಕ್ರಮವನ್ನು ಹೊತ್ತು ಸಾಯದ ಹಾಗೆ ಇವುಗಳನ್ನು ಹಾಕಿಕೊಂಡಿರಬೇಕು. ಇದೇ ಅವನಿಗೂ ಅವನ ತರುವಾಯ ಅವನ ಸಂತತಿಯ ವರಿಗೂ ಇರಬೇಕಾದ ನಿತ್ಯವಾದ ಕಟ್ಟಳೆ.

ಯೆಹೆಜ್ಕೇಲ 44:18

ಅವರ ತಲೆಗಳ ಮೇಲೆ ನಾರಿನ ರುಮಾಲುಗಳೂ ಅವರ ಸೊಂಟಗಳ ಮೇಲೆ ನಾರಿನ ಇಜಾರುಗಳು ಇರಬೇಕು; ಅವರು ಬೆವರು ಬರುವಂತವುಗಳನ್ನು ಕಟ್ಟಿಕೊಳ್ಳಬಾರದು.

Interlinear

Choose Theme