ತರುವಾಯ ಇಸ್ರಾ ಯೇಲ್ ಮಕ್ಕಳೆಲ್ಲರೂ ಹತ್ತಿರ ಬಂದರು. ಅವನು ತನಗೆ ಕರ್ತನು ಸೀನಾಯಿ ಬೆಟ್ಟದಲ್ಲಿ ಹೇಳಿದವುಗಳ ನ್ನೆಲ್ಲಾ ಅವರಿಗೆ ಆಜ್ಞಾಪಿಸಿ ಹೇಳಿದನು.
Cross references
ಈಗ ಅವರ ಮುಂದೆ ನೀನು ಇಡತಕ್ಕನ್ಯಾಯವಿಧಿಗಳು ಇವೇ.
ಮೋಶೆಯು ಬಂದು ಕರ್ತನ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನೂ ಜನರಿಗೆ ತಿಳಿಯಪಡಿ ಸಿದನು; ಆಗ ಜನರೆಲ್ಲಾ ಒಂದೇ ಸ್ವರದಿಂದ--ಕರ್ತನು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ ಎಂದು ಉತ್ತರಕೊಟ್ಟರು.
ಮೋಶೆಯು ಇಸ್ರಾಯೇಲ್ ಮಕ್ಕಳ ಸಭೆಯನ್ನು ಒಟ್ಟುಗೂಡಿಸಿ ಅವರಿಗೆ--ನೀವು ಮಾಡುವದಕ್ಕೆ ಕರ್ತನು ಆಜ್ಞಾಪಿಸಿದ ವಾಕ್ಯಗಳು ಇವೇ.
ನನ್ನ ಆಜ್ಞೆಗಳನ್ನೆಲ್ಲಾ ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ದೇವರಿಗೆ ಪರಿಶುದ್ಧರಾಗಿರುವಿರಿ.ನಾನು ನಿಮ್ಮ ದೇವರಾಗಿರುವ ಹಾಗೆ ನಿಮ್ಮನ್ನು ಐಗುಪ್ತ ದೇಶ ದೊಳಗಿಂದ ಹೊರಗೆ ತಂದ ನಿಮ್ಮ ಕರ್ತನಾಗಿರುವ ದೇವರು ನಾನೇ. ನಿಮ್ಮ ದೇವರಾಗಿರುವ ಕರ್ತನು ನಾನೇ.
ಅದಕ್ಕೆ ವಿಾಕಾಯೆಹು--ಕರ್ತನ ಜೀವ ದಾಣೆ, ಕರ್ತನು ನನಗೆ ಏನು ಹೇಳುವನೋ ಅದನ್ನು ಮಾತನಾಡುವೆನು ಅಂದನು. ಹೀಗೆ ಅವನು ಅರಸನ ಬಳಿಗೆ ಬಂದನು.
ಇದಲ್ಲದೆ ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಕೈಕೊಳ್ಳುವ ಹಾಗೆ ಅವರಿಗೆ ಬೋಧಿಸಿರಿ; ಮತ್ತು ಇಗೋ, ಲೋಕಾಂತ್ಯದ ವರೆಗೂ ಯಾವಾಗಲೂ ನಾನು ನಿಮ್ಮ ಸಂಗಡ ಇದ್ದೇನೆ ಅಂದನು. ಆಮೆನ್.
ನಾನು ನಿಮಗೆ ಒಪ್ಪಿಸಿಕೊಟ್ಟ ಉಪದೇಶವನ್ನು ಕರ್ತನಿಂದ ಹೊಂದಿದೆನು. ಅದೇನಂದರೆ, ಕರ್ತನಾದ ಯೇಸು ತಾನು ಹಿಡಿದುಕೊಡಲ್ಪಟ್ಟ ರಾತ್ರಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು
ನಾನು ಸಹ ಎಲ್ಲಾದಕ್ಕಿಂತಲೂ ಮೊದಲು ಹೊಂದಿದ್ದನ್ನು ನಿಮಗೆ ತಿಳಿಸಿದ್ದೇನೆ. ಅದೇನಂದರೆ, ಬರಹದ ಪ್ರಕಾರ ಕ್ರಿಸ್ತನು ನಮ್ಮ ಪಾಪಗಳಿಗಾಗಿ ಸತ್ತನು.