ನಿರ್ಗಮಕಾಂಡ 34:30 · ಕನ್ನಡ ಬೈಬಲ್
ಆದರೆ ಆರೋನನೂ ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆ ಯನ್ನು ನೋಡಿದಾಗ ಇಗೋ, ಅವನ ಮುಖವು ಪ್ರಕಾಶಿಸುತ್ತಿತ್ತು. ಆದದರಿಂದ ಅವರು ಅವನ ಹತ್ತಿರ ಬರುವದಕ್ಕೆ ಭಯಪಟ್ಟರು.
Cross references
ಅಂಕೆಗಳ ಪುಸ್ತಕ 12:8
ಗೂಢವಾಗಿ ಅಲ್ಲ, ಮುಖಾಮುಖಿಯಾಗಿ ಅಂದರೆ ಪ್ರತ್ಯಕ್ಷವಾಗಿ ನಾನು ಅವನ ಸಂಗಡ ಮಾತನಾ ಡುತ್ತೇನೆ. ಅವನು ಕರ್ತನ ರೂಪವನ್ನು ನೋಡುತ್ತಾನೆ; ಹೀಗಿರಲು ನೀವು ನನ್ನ ಸೇವಕನಾದ ಮೋಶೆಗೆ ವಿರೋಧವಾಗಿ ಮಾತನಾಡಲು ಯಾಕೆ ಭಯಪಡಲಿಲ್ಲ ಎಂದು ಹೇಳಿದನು.
ಮಾರ್ಕ 9:3
ಮತ್ತು ಆತನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷು ಹಿಮದಂತೆ ಹೆಚ್ಚು ಬೆಳ್ಳಗಾಗಿ ಹೊಳೆಯುತ್ತಿತ್ತು.
ಮಾರ್ಕ 9:15
ಕೂಡಲೆ ಜನರೆಲ್ಲರೂ ಆತನನ್ನು ನೋಡಿ ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಆತನನ್ನು ವಂದಿಸಿ ದರು.
ಲೂಕ 5:8
ಸೀಮೋನ್ ಪೇತ್ರನು ಅದನ್ನು ಕಂಡಾಗ ಯೇಸುವಿನ ಮೊಣಕಾಲಿಗೆ ಬಿದ್ದು--ನನ್ನನ್ನು ಬಿಟ್ಟು ಹೋಗು; ಓ ಕರ್ತನೇ, ನಾನು ಪಾಪಾತ್ಮನು ಅಂದನು.