Home Bibles ನಿರ್ಗಮಕಾಂಡ 34:23 · ಕನ್ನಡ ಬೈಬಲ್
ನಿರ್ಗಮಕಾಂಡ 34:23 · ಕನ್ನಡ ಬೈಬಲ್

ವರುಷಕ್ಕೆ ಮೂರುಸಾರಿ ನಿಮ್ಮ ಗಂಡು ಮಕ್ಕಳೆಲ್ಲಾ ಕರ್ತನಾದ ದೇವರ ಮುಂದೆ ಅಂದರೆ ಇಸ್ರಾಯೇಲಿನ ದೇವರ ಮುಂದೆ ಬರಬೇಕು.

Cross references

ಆದಿಕಾಂಡ 32:28

ಅದಕ್ಕೆ ಆತನುನಿನ್ನ ಹೆಸರು ಇನ್ನು ಮೇಲೆ ಯಾಕೋಬನೆಂದು ಕರೆಯಲ್ಪಡದೆ ಇಸ್ರಾಯೇಲ ಎಂದು ಕರೆಯಲ್ಪಡು ವದು. ಯಾಕಂದರೆ ನೀನು ದೇವರ ಸಂಗಡಲೂ ಮನುಷ್ಯರ ಸಂಗಡಲೂ ಹೋರಾಡಿ ಜಯಿಸಿದ್ದೀ ಅಂದನು.

ಆದಿಕಾಂಡ 33:20

ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್‌ ಎಂದು ಹೆಸರಿಟ್ಟನು.

ನಿರ್ಗಮಕಾಂಡ 23:14

ವರುಷಕ್ಕೆ ಮೂರು ಸಾರಿ ನನಗೆ ಹಬ್ಬ ಮಾಡ ಬೇಕು.

ನಿರ್ಗಮಕಾಂಡ 23:17

ವರುಷಕ್ಕೆ ಮೂರು ಸಾರಿ ನಿಮ್ಮ ಲ್ಲಿರುವ ಎಲ್ಲಾ ಪುರುಷರು ದೇವರಾದ ಕರ್ತನ ಸನ್ನಿಧಿಯಲ್ಲಿ ಕಾಣಿಸಿಕೊಳ್ಳಬೇಕು.

ದ್ವಿತೀಯೋಪದೇಶಕಾಂಡ 16:16

ವರುಷಕ್ಕೆ ಮೂರು ಸಾರಿ ನಿನ್ನ ಗಂಡಸರೆಲ್ಲರು ನಿನ್ನ ದೇವರಾದ ಕರ್ತನ ಮುಂದೆ ಆತನು ಆದುಕೊಳ್ಳುವ ಸ್ಥಳದಲ್ಲಿ ಕಾಣಿಸಿಕೊಳ್ಳಬೇಕು, ಅಂದರೆ ಹುಳಿಯಿಲ್ಲದ ರೊಟ್ಟಿಯ ಹಬ್ಬದಲ್ಲಿ, ವಾರಗಳ ಹಬ್ಬದಲ್ಲಿ, ಗುಡಾರ ಗಳ ಹಬ್ಬದಲ್ಲಿ ಕಾಣಿಸಿಕೊಳ್ಳಬೇಕು. ಇದಲ್ಲದೆ ಅವರು ಕರ್ತನ ಸಮ್ಮುಖಕ್ಕೆ ಬರಿ ಕೈಯಾಗಿ ಬರಬಾರದು.

ಕೀರ್ತನೆಗಳು 84:7

ಅವರು ಬಲದಿಂದ ಬಲಕ್ಕೆ ಹೋಗಿ, ಚೀಯೋನಿನಲ್ಲಿ ದೇವರ ಮುಂದೆ ಕಾಣಿಸಿಕೊಳ್ಳುತ್ತಾರೆ.

Interlinear

Choose Theme