ನಿರ್ಗಮಕಾಂಡ 33:15 · ಕನ್ನಡ ಬೈಬಲ್
ಮೋಶೆಯು ಆತನಿಗೆ--ನಿನ್ನ ಸನ್ನಿಧಾನವು ನನ್ನೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರ ಕೊಂಡು ಹೋಗಬೇಡ.
Cross references
ನಿರ್ಗಮಕಾಂಡ 33:3
ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು, ನಾನು ನಿಮ್ಮ ಮಧ್ಯದಲ್ಲಿ ಹೋಗು ವದಿಲ್ಲ. ನೀವು ಬಗ್ಗದ ಕುತ್ತಿಗೆಯುಳ್ಳ ಜನವಾಗಿದ್ದೀರಿ; ಮಾರ್ಗದಲ್ಲಿ ನಿಮ್ಮನ್ನು ನಾನು ಸಂಹರಿಸೇನು ಅಂದನು.
ನಿರ್ಗಮಕಾಂಡ 34:9
ಅವನು--ಈಗ ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಿದ್ದಾದರೆ ಓ ಕರ್ತನೇ, ನನ್ನ ಕರ್ತನು ನಮ್ಮ ಮಧ್ಯದಲ್ಲಿ ಬರಲಿ ಅದು ಬಗ್ಗದ ಕುತ್ತಿಗೆಯುಳ್ಳ ಜನಾಂಗವೇ ಹೌದು. ಆದಾಗ್ಯೂ ನಮ್ಮ ದೋಷವನ್ನೂ ಪಾಪವನ್ನೂ ಮನ್ನಿಸಿ ನಮ್ಮನ್ನು ನಿನ್ನ ಸ್ವಾಸ್ಥ್ಯವಾಗಿ ತೆಗೆದುಕೋ ಅಂದನು.
2 ಅರಸುಗಳು 6:3
ಆಗ ಅವರಲ್ಲಿ ಒಬ್ಬನು--ನೀನು ದಯಮಾಡಿ ನಿನ್ನ ಸೇವಕರ ಸಂಗಡ ಬಾ ಅಂದನು. ಅದಕ್ಕವನು--ನಾನು ಬರುತ್ತೇನೆ ಅಂದನು.
ಕೀರ್ತನೆಗಳು 4:6
ನಮಗೆ ಒಳ್ಳೇದನ್ನು ಮಾಡುವವರು ಯಾರೆಂದು ಹೇಳುವವರು ಅನೇಕರು. ಕರ್ತನೇ, ನಿನ್ನ ಮುಖದ ಬೆಳಕನ್ನು ನಮ್ಮ ಮೇಲೆ ಪ್ರಕಾಶಗೊಳಿಸು.