Home Bibles ನಿರ್ಗಮಕಾಂಡ 32:33 · ಕನ್ನಡ ಬೈಬಲ್
ನಿರ್ಗಮಕಾಂಡ 32:33 · ಕನ್ನಡ ಬೈಬಲ್

ಅದಕ್ಕೆ ಕರ್ತನು ಮೋಶೆಗೆ--ನನಗೆ ವಿರೋಧ ವಾಗಿ ಪಾಪಮಾಡಿದವನ ಹೆಸರನ್ನೇ ನಾನು ನನ್ನ ಪುಸ್ತಕದಿಂದ ಅಳಿಸಿಬಿಡುವೆನು.

Cross references

ಲೇವ್ಯಕಾಂಡ 23:30

ಆ ದಿವಸ ದಲ್ಲಿ ಯಾವನಾದರೂ ಯಾವದೇ ಕೆಲಸವನ್ನು ಮಾಡಿ ದರೆ ಅವನನ್ನು ನಾನು ಅವನ ಜನರ ಮಧ್ಯದಿಂದ ನಾಶಮಾಡುವೆನು.

ದ್ವಿತೀಯೋಪದೇಶಕಾಂಡ 29:20

ಅಂಥವನನ್ನು ಕರ್ತನು ಉಳಿಸುವದಿಲ್ಲ; ಆಗಲೇ ಕರ್ತನ ಕೋಪವೂ ರೋಷವೂ ಆ ಮನುಷ್ಯನ ಮೇಲೆ ಹೊಗೆ ಹಾಯುವವು. ಈ ಪುಸ್ತಕದಲ್ಲಿ ಬರೆದಿ ರುವ ಶಾಪವೆಲ್ಲಾ ಅವನ ಮೇಲೆ ನೆಲೆಯಾಗುವದು; ಕರ್ತನು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವನು.

ಕೀರ್ತನೆಗಳು 9:5

ನೀನು ಜನಾಂಗಗಳನ್ನು ಗದರಿಸಿ ದುಷ್ಟರನ್ನು ನಾಶ ಮಾಡಿದ್ದೀ; ಅವರ ಹೆಸರನ್ನು ಯುಗ ಯುಗಾಂತರ ಗಳ ವರೆಗೂ ಅಳಿಸಿ ಬಿಟ್ಟಿದ್ದೀ.

ಕೀರ್ತನೆಗಳು 69:28

ಜೀವದ ಪುಸ್ತಕದೊಳಗಿಂದ ಅವರು ಅಳಿಸಲ್ಪಡಲಿ; ನೀತಿವಂತರ ಸಂಗಡ ಅವರ ಹೆಸರು ಬರೆಯಲ್ಪಡದೆ ಇರಲಿ.

ಕೀರ್ತನೆಗಳು 69:29

ಆದರೆ ನಾನು ದೀನನಾಗಿಯೂ ವ್ಯಸನವುಳ್ಳವನಾಗಿಯೂ ಇದ್ದೇನೆ; ಓ ದೇವರೇ, ನಿನ್ನ ರಕ್ಷಣೆಯು ನನ್ನನ್ನು ಉನ್ನತದಲ್ಲಿರಿಸಲಿ.

ಕೀರ್ತನೆಗಳು 109:13

ಅವನ ಸಂತಾನವು ನಿರ್ನಾಮವಾಗಲಿ; ಎರಡನೇ ತಲಾಂತರದಲ್ಲಿ ಅವರ ಹೆಸರು ಅಳಿದು ಹೋಗಲಿ.

ಯೆಹೆಜ್ಕೇಲ 18:4

ಇಗೋ, ಎಲ್ಲಾ ಪ್ರಾಣಗಳು ನನ್ನವೇ; ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ; ಪಾಪ ಮಾಡುವವನೇ ತಾನಾ ಗಿಯೇ ಸಾಯುವನು.

ಯೆಹೆಜ್ಕೇಲ 18:20

ಪಾಪ ಮಾಡುವ ಪ್ರಾಣವು ತಾನಾಗಿ ಸಾಯುವದು; ಮಗನು ತಂದೆಯ ಅಕ್ರಮವನ್ನು ಹೊರುವದಿಲ್ಲ. ತಂದೆಯು ಮಗನ ಅಕ್ರಮವನ್ನು ಹೊರುವದಿಲ್ಲ. ನೀತಿವಂತನ ನೀತಿಯು ಅವನ ಮೇಲೆಯೇ ಇರುವದು. ದುಷ್ಟನ ದುಷ್ಟತ್ವವು ಅವನ ಮೇಲೆಯೇ ಇರುವದು.

ಫಿಲಿಪ್ಪಿಯವರಿಗೆ 4:3

ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್‌ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.

ಪ್ರಕಟನೆ 13:8

ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು.

ಪ್ರಕಟನೆ 20:12

ಇದಲ್ಲದೆ ಸತ್ತವರಾದ ಚಿಕ್ಕವರೂ ದೊಡ್ಡವರೂ ದೇವರ ಮುಂದೆ ನಿಂತಿರುವದನ್ನು ನಾನು ಕಂಡೆನು. ಆಗ ಪುಸ್ತಕಗಳು ತೆರೆಯಲ್ಪಟ್ಟವು; ಜೀವಗ್ರಂಥವೆಂಬ ಇನ್ನೊಂದು ಪುಸ್ತಕವು ತೆರೆಯಲ್ಪಟ್ಟಿತು; ಆ ಪುಸ್ತಕಗಳಲ್ಲಿ ಬರೆದ ಪ್ರಕಾರ ಅವರವರ ಕೃತ್ಯಗಳಿಗೆ ತಕ್ಕಂತೆ ಸತ್ತವರಿಗೆ

Interlinear

Choose Theme