Home Bibles ನಿರ್ಗಮಕಾಂಡ 32:20 · ಕನ್ನಡ ಬೈಬಲ್
ನಿರ್ಗಮಕಾಂಡ 32:20 · ಕನ್ನಡ ಬೈಬಲ್

ಅವರು ಮಾಡಿದ ಕರುವನ್ನು ಅವನು ತೆಗೆದುಕೊಂಡು ಅದನ್ನು ಬೆಂಕಿಯಲ್ಲಿ ಸುಟ್ಟು ಪುಡಿಯಾಗುವ ವರೆಗೆ ಅರೆಸಿ ನೀರಿನ ಮೇಲೆ ಚೆಲ್ಲಿ ಆ ನೀರನ್ನು ಇಸ್ರಾಯೇಲ್‌ ಮಕ್ಕಳು ಕುಡಿಯುವಂತೆ ಮಾಡಿದನು.

Cross references

ದ್ವಿತೀಯೋಪದೇಶಕಾಂಡ 7:5

ಅವರಿಗೆ ಮಾಡಬೇಕಾದ ದ್ದೇನಂದರೆ ಅವರ ಬಲಿಪೀಠಗಳನ್ನು ಒಡೆದುಹಾಕ ಬೇಕು; ಅವರ ವಿಗ್ರಹಗಳನ್ನು ಮುರಿದುಹಾಕಬೇಕು; ಅವರ ತೋಪುಗಳನ್ನು ಕಡಿದುಹಾಕಬೇಕು; ಅವರು ಕೆತ್ತಿದ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು.

ದ್ವಿತೀಯೋಪದೇಶಕಾಂಡ 7:25

ಅವರ ದೇವರುಗಳ ವಿಗ್ರಹಗಳನ್ನು ಬೆಂಕಿಯಿಂದ ಸುಡಬೇಕು; ಅವುಗಳ ಮೇಲಿರುವ ಬೆಳ್ಳಿ ಬಂಗಾರವನ್ನು ಆಶಿಸಿ ನೀನು ತಕ್ಕೊಳ್ಳಬಾರದು; ಅದು ನಿನಗೆ ಉರ್ಲಾ ದೀತು; ಅದು ನಿನ್ನ ದೇವರಾದ ಕರ್ತನಿಗೆ ಅಸಹ್ಯವೇ.ನೀನು ಅದರಂತೆ ಶಾಪಕ್ಕೊಳಗಾಗದ ಹಾಗೆ ಅಸಹ್ಯವಾದದ್ದನ್ನು ನಿನ್ನ ಮನೆಗೆ ತಕ್ಕೊಂಡು ಬರ ಬಾರದು; ಅದನ್ನು ಸಂಪೂರ್ಣವಾಗಿ ಅಸಹ್ಯಿಸಬೇಕು; ಸಂಪೂರ್ಣವಾಗಿ ಹೇಸಿಕೊಳ್ಳಬೇಕು; ಯಾಕಂದರೆ ಅದು ಶಪಿಸಲ್ಪಟ್ಟದ್ದೇ.

ದ್ವಿತೀಯೋಪದೇಶಕಾಂಡ 9:21

ಇದಲ್ಲದೆ ನೀವು ಮಾಡಿದ ಪಾಪವಾಗಿರುವ ಆ ಕರುವನ್ನು ತಕ್ಕೊಂಡು ಬೆಂಕಿಯಲ್ಲಿ ಸುಟ್ಟು ತುಳಿದು ಅದು ಧೂಳಿ ನಂತೆ ಪುಡಿಯಾಗುವ ವರೆಗೆ ಚೆನ್ನಾಗಿ ಅರೆದು ಅದರ ಧೂಳನ್ನು ಬೆಟ್ಟದಿಂದ ಹರಿಯುವ ಹಳ್ಳದಲ್ಲಿ ನಾನು ಹಾಕಿದೆನು.

2 ಅರಸುಗಳು 23:6

ಕರ್ತನ ಆಲಯದೊ ಳಗಿಂದ ವಿಗ್ರಹದ ತೋಪನ್ನು ಯೆರೂಸಲೇಮಿನ ಹೊರಗೆ ಕಿದ್ರೋನ್‌ ಹಳ್ಳಕ್ಕೆ ಅದನ್ನು ತರಿಸಿ ಅವನು ಕಿದ್ರೋನ್‌ ಹಳ್ಳದ ಬಳಿಯಲ್ಲಿ ಸುಟ್ಟು ಧೂಳಾಗಿ ಪುಡಿಮಾಡಿ ಆ ಧೂಳಿನ ಪುಡಿಯನ್ನು ಜನರ ಸಮಾಧಿ ಗಳ ಮೇಲೆ ಹಾಕಿಸಿದನು.

2 ಅರಸುಗಳು 23:15

ಇದಲ್ಲದೆ ಬೇತೇಲಿನಲ್ಲಿದ್ದ ಬಲಿಪೀಠವನ್ನೂ ಇಸ್ರಾಯೇಲ್ಯರು ಪಾಪಮಾಡಲು ಪ್ರೇರೇಪಿಸಿದ ನೆಬಾ ಟನ ಮಗನಾದ ಯಾರೊಬ್ಬಾಮನು ಮಾಡಿದ ಉನ್ನತ ಸ್ಥಳವನ್ನೂ ಅವನು ಕೆಡವಿಹಾಕಿ ಸುಟ್ಟ್ಟು ಅದನ್ನು ಧೂಳಾ ಗಲು ಪುಡಿಮಾಡಿ ವಿಗ್ರಹದ ತೋಪನ್ನು ಸುಡಿಸಿದನು.

ಸಾಮೇತಿಗಳು 1:31

ಅವರು ತಮ್ಮ ಸ್ವಂತ ನಡತೆಯ ಫಲವನ್ನು ಅನುಭವಿಸಿ ತಮ್ಮ ಸ್ವಂತ ಕುಯುಕ್ತಿಗಳಿಂದಲೇ ತುಂಬಿಕೊಳ್ಳುವರು.

ಸಾಮೇತಿಗಳು 14:14

ಹೃದಯದಲ್ಲಿ ಹಿಂಜರಿಯುವವನು ತನ್ನ ಸ್ವಂತ ಮಾರ್ಗಗಳಿಂದ ತುಂಬಿಕೊಳ್ಳುವನು; ಒಳ್ಳೆಯವನು ತನ್ನಲ್ಲಿ ತಾನೇ ತೃಪ್ತಿಹೊಂದುವನು.

Interlinear

Choose Theme