Home Bibles ನಿರ್ಗಮಕಾಂಡ 31:15 · ಕನ್ನಡ ಬೈಬಲ್
ನಿರ್ಗಮಕಾಂಡ 31:15 · ಕನ್ನಡ ಬೈಬಲ್

ಆರು ದಿವಸ ಕೆಲಸಮಾಡಬೇಕು; ಆದರೆ ಏಳನೆಯ ದಿನವು ಕರ್ತನಿಗೆ ಪರಿಶುದ್ಧವಾದ ವಿಶ್ರಾಂತಿಯ ಸಬ್ಬತ್ತು. ಸಬ್ಬತ್‌ ದಿನದಲ್ಲಿ ಕೆಲಸ ಮಾಡು ವವರೆಲ್ಲಾ ಖಂಡಿತವಾಗಿ ಸಾಯಬೇಕು.

Cross references

ಆದಿಕಾಂಡ 2:2

ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.

ನಿರ್ಗಮಕಾಂಡ 16:23

ಅವನು ಅವರಿಗೆ--ಕರ್ತನು ಹೇಳಿದ ಮಾತು ಇದೇ--ನಾಳೆ ಕರ್ತನಿಗೆ ವಿಶ್ರಾಂತಿಯ ಪರಿಶುದ್ಧ ಸಬ್ಬತ್‌ ದಿನವಾಗಿದೆ, ಇಂದೇ ಸುಡಬೇಕಾ ದದ್ದನ್ನು ಸುಡಿರಿ, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನ ವರೆಗೆ ಇಟ್ಟು ಕೊಳ್ಳಿರಿ ಅಂದನು.

ನಿರ್ಗಮಕಾಂಡ 16:26

ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್‌ ದಿನವಾಗಿರುವ ದರಿಂದ ಅಂದು (ರೊಟ್ಟಿಯು) ಇರುವದಿಲ್ಲ ಅಂದನು.

ನಿರ್ಗಮಕಾಂಡ 20:8

ಸಬ್ಬತ್‌ ದಿನವನ್ನು ಪರಿಶುದ್ಧವಾಗಿ ಇರುವಂತೆ ಜ್ಞಾಪಕದಲ್ಲಿಟ್ಟುಕೋ.

ನಿರ್ಗಮಕಾಂಡ 31:14

ಹೀಗಿರುವದರಿಂದ ನೀವು ಸಬ್ಬತ್ತನ್ನು ಕೈಕೊಳ್ಳ ಬೇಕು, ಅದು ನಿಮಗೆ ಪರಿಶುದ್ಧವಾದದ್ದು. ಅದನ್ನು ಅಪವಿತ್ರಮಾಡುವ ಪ್ರತಿಯೊಬ್ಬನು ಖಂಡಿತವಾಗಿ ಸಾಯಬೇಕು. ಆ ದಿನದಲ್ಲಿ ಯಾರಾದರೂ ಕೆಲಸ ಮಾಡಿದರೆ ಅವರನ್ನು ತನ್ನ ಜನರೊಳಗಿಂದ ತೆಗೆದು ಹಾಕಬೇಕು.

ನಿರ್ಗಮಕಾಂಡ 31:17

ನನಗೂ ಇಸ್ರಾಯೇಲ್‌ ಮಕ್ಕ ಳಿಗೂ ಇದೇ ಶಾಶ್ವತವಾದ ಗುರುತು. ಯಾಕಂದರೆ ಆರು ದಿವಸಗಳಲ್ಲಿ ಕರ್ತನು ಆಕಾಶವನ್ನೂ ಭೂಮಿ ಯನ್ನೂ ಉಂಟುಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿ ಕೊಂಡು ಉಲ್ಲಾಸಗೊಂಡನು ಎಂದು ಹೇಳು ಅಂದನು.ಆತನು ಮೋಶೆಯ ಸಂಗಡ ಸೀನಾಯಿ ಬೆಟ್ಟದಲ್ಲಿ ಮಾತನಾಡಿ ಮುಗಿಸಿದ ಮೇಲೆ ಅವನಿಗೆ ಆ ಎರಡು ಸಾಕ್ಷಿ ಹಲಗೆಗಳನ್ನೂ ಕೊಟ್ಟನು. ಅವು ದೇವರ ಕೈಯಿಂದ ಕೆತ್ತಲ್ಪಟ್ಟ ಕಲ್ಲಿನ ಹಲಗೆಗಳಾಗಿದ್ದವು.

ನಿರ್ಗಮಕಾಂಡ 34:21

ಆರು ದಿನಗಳು ಕೆಲಸಮಾಡಿ ಏಳನೆಯ ದಿನದಲ್ಲಿ ವಿಶ್ರಮಿಸಿಕೊಳ್ಳಬೇಕು. ಬಿತ್ತುವ ಕಾಲದಲ್ಲಿಯೂ ಕೊಯ್ಯುವ ಕಾಲದಲ್ಲಿಯೂ (ಏಳನೆಯ ದಿನದಲ್ಲಿ) ವಿಶ್ರಮಿಸಿಕೊಳ್ಳಬೇಕು.

ನಿರ್ಗಮಕಾಂಡ 35:2

ಆರು ದಿನಗಳು ಕೆಲಸ ಮಾಡಬೇಕು. ಆದರೆ ಏಳನೆಯ ದಿನವು ನಿಮಗೆ ಪರಿಶುದ್ಧದಿನವಾಗಿಯೂ ಕರ್ತನಿಗೆ ವಿಶ್ರಾಂತಿಯ ಸಬ್ಬತ್ತಾಗಿಯೂ ಇರಬೇಕು. ಆ ದಿನದಲ್ಲಿ ಕೆಲಸ ಮಾಡುವವನು ಕೊಲ್ಲಲ್ಪಡಬೇಕು.

ಲೇವ್ಯಕಾಂಡ 23:3

ಆರು ದಿವಸ ಕೆಲಸಮಾಡಬೇಕು, ಆದರೆ ಏಳನೆಯ ದಿವಸವು ವಿಶ್ರಾಂತಿಯ ಸಬ್ಬತ್‌ ದಿವಸವಾಗಿ ಪರಿಶುದ್ಧ ಸಭಾಕೂಟವಾಗಿರುವದು; ನೀವು ಆ ದಿನ ದಲ್ಲಿ ಕೆಲಸಮಾಡಬಾರದು; ನಿಮ್ಮ ಎಲ್ಲಾ ನಿವಾಸಗಳಲ್ಲಿ ಅದು ಕರ್ತನ ಸಬ್ಬತ್ತಾಗಿರುವದು.

ಲೇವ್ಯಕಾಂಡ 23:32

ಇದು ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿ ರುವದು; ನೀವು ನಿಮ್ಮ ಪ್ರಾಣಗಳನ್ನು ಕುಂದಿಸಬೇಕು; ಆ ತಿಂಗಳಿನ ಒಂಭತ್ತನೆಯ ದಿವಸದ ಸಾಯಂಕಾಲ ದಿಂದ ಮರುದಿನದ ಸಾಯಂಕಾಲದ ವರೆಗೆ ನಿಮ್ಮ ಸಬ್ಬತ್ತನ್ನು ನೀವು ಆಚರಿಸಬೇಕು ಎಂಬದೇ.

ಅಂಕೆಗಳ ಪುಸ್ತಕ 15:32

ಇಸ್ರಾಯೇಲ್‌ ಮಕ್ಕಳು ಅರಣ್ಯದಲ್ಲಿದ್ದಾಗ ಸಬ್ಬತ್‌ ದಿನದಲ್ಲಿ ಕಟ್ಟಿಗೆಗಳನ್ನು ಕೂಡಿಸುವ ಮನುಷ್ಯನನ್ನು ಕಂಡರು.

ಯೆಹೆಜ್ಕೇಲ 46:1

ದೇವರಾದಕರ್ತನು ಹೀಗೆ ಹೇಳುತ್ತಾನೆ--ಒಳಗಿನ ಅಂಗಳದ ಪೂರ್ವದಿಕ್ಕಿಗೆ ಎದುರಾಗಿರುವ ಬಾಗಲು ಕೆಲಸ ನಡೆಯುವ ಆರು ದಿವಸಗಳಲ್ಲಿ ಮುಚ್ಚಲ್ಪಡಬೇಕು; ಆದರೆ ಸಬ್ಬತ್‌ ದಿವಸದಲ್ಲಿ ಅದು ತೆರೆಯಲ್ಪಡಬೇಕು, ಅಮಾವಾಸ್ಯೆಯ ದಿನದಲ್ಲೂ ಅದು ತೆರೆಯಲ್ಪಡಬೇಕು.

ಲೂಕ 13:14

ಯೇಸು ಸಬ್ಬತ್‌ ದಿನದಲ್ಲಿ ಸ್ವಸ್ಥಪಡಿಸಿದ ಕಾರಣ ಸಭಾಮಂದಿರದ ಅಧಿಕಾರಿಯು ಕೋಪದಿಂದ ಜನರಿಗೆ--ಆರು ದಿವಸಗಳಲ್ಲಿ ಮನು ಷ್ಯರು ಕೆಲಸ ಮಾಡತಕ್ಕದ್ದು. ಆದದರಿಂದ ಅವುಗಳಲ್ಲಿ ಅವರು ಬಂದು ಸ್ವಸ್ಥತೆ ಹೊಂದಲಿ; ಸಬ್ಬತ್‌ ದಿನದಲ್ಲಿ ಬೇಡ ಅಂದನು.

ಲೂಕ 23:56

ಅವರು ಹಿಂತಿರುಗಿದವರಾಗಿ ಪರಿಮಳ ದ್ಯವ್ಯವನ್ನು ಸುಗಂಧ ತೈಲವನ್ನೂ ಸಿದ್ಧಪಡಿಸಿಕೊಂಡು ಆಜ್ಞಾನು ಸಾರವಾಗಿ ಸಬ್ಬತ್ತಿನ ದಿನದಲ್ಲಿ ವಿಶ್ರಮಿಸಿಕೊಂಡರು.

ಹೆಬ್ರಿಯರಿಗೆ 4:9

ಆದದರಿಂದ ದೇವಜನರಿಗೆ ವಿಶ್ರಾಂತಿಯು ಇನ್ನೂ ಉಂಟು.

Interlinear

Choose Theme