ನಿರ್ಗಮಕಾಂಡ 30:28 · ಕನ್ನಡ ಬೈಬಲ್
ದಹನಬಲಿಯ ವೇದಿಯನ್ನೂ ಅದರ ಎಲ್ಲಾ ಸಾಮಾನುಗಳನ್ನೂ ಗಂಗಾ ಳವನ್ನೂ ಅದರ ಪೀಠವನ್ನೂ ಅಭಿಷೇಕಿಸು.
Cross references
ನಿರ್ಗಮಕಾಂಡ 29:36
ಪಾಪದ ಯಜ್ಞವಾದ ಹೋರಿಯನ್ನು ಪ್ರತಿದಿನ ಪ್ರಾಯಶ್ಚಿತ್ತಕ್ಕಾಗಿ ತಂದು ಯಜ್ಞವೇದಿಗಾಗಿ ಪ್ರಾಯ ಶ್ಚಿತ್ತ ಮಾಡಿದ ಮೇಲೆ ಅದರ ದೋಷವನ್ನು ಪರಿ ಹರಿಸಿ ಅದನ್ನು ಪವಿತ್ರಮಾಡುವದಕ್ಕೆ ಅದನ್ನು ಅಭಿಷೇಕಿಸಬೇಕು.
ನಿರ್ಗಮಕಾಂಡ 29:37
ಏಳು ದಿವಸ ಯಜ್ಞವೇದಿಗೋಸ್ಕರ ಪ್ರಾಯಶ್ಚಿತ್ತ ಮಾಡಿ ಅದನ್ನು ಪವಿತ್ರಮಾಡಬೇಕು. ಆಗ ಯಜ್ಞ ವೇದಿಯು ಅತಿಪರಿಶುದ್ಧವಾಗಿರುವದು. ಯಜ್ಞವೇದಿ ಯನ್ನು ಮುಟ್ಟುವದೆಲ್ಲಾ ಪವಿತ್ರವಾಗಿರಬೇಕು.
ನಿರ್ಗಮಕಾಂಡ 35:8
ದೀಪಕ್ಕೋಸ್ಕರ ಎಣ್ಣೆ, ಅಭಿಷೇಕಿಸುವ ತೈಲಕ್ಕೋಸ್ಕರ ಮತ್ತು ಪರಿಮಳ ಧೂಪಕ್ಕೋಸ್ಕರ ಸುಗಂಧತೈಲ,
ನಿರ್ಗಮಕಾಂಡ 40:11
ಗಂಗಾಳವನ್ನೂ ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ ಅದನ್ನು ಪರಿಶುದ್ಧ ಮಾಡಬೇಕು.
1 ಅರಸುಗಳು 7:38
ಹತ್ತು ತಾಮ್ರದ ತೊಟ್ಟಿಗಳನ್ನು ಮಾಡಿದನು. ಒಂದೊಂದು ತೊಟ್ಟಿಯು ನಾಲ್ವತ್ತು ಕೊಳಗ ಹಿಡಿಯಿತು; ಒಂದೊಂದು ತೊಟ್ಟಿಯು ನಾಲ್ಕು ಮೊಳವು; ಆ ಹತ್ತು ಆಧಾರ ಗಳಲ್ಲಿಯೂ ಒಂದೊಂದರ ಮೇಲೆ ಒಂದೊಂದು ತೊಟ್ಟಿಯನ್ನು ಇಟ್ಟನು.