Home Bibles ನಿರ್ಗಮಕಾಂಡ 29:30 · ಕನ್ನಡ ಬೈಬಲ್
ನಿರ್ಗಮಕಾಂಡ 29:30 · ಕನ್ನಡ ಬೈಬಲ್

ಅವನ ಬದಲಾಗಿ ಅವನ ಮಗನು ಯಾಜಕತ್ವವನ್ನು ನಡಿಸಿ ಪರಿಶುದ್ಧ ಸ್ಥಳದಲ್ಲಿ ಸೇವೆಮಾಡುವಂತೆ ಬರುವದಕ್ಕಿರುವವನು ಅವುಗಳನ್ನು ಏಳು ದಿನಗಳ ವರೆಗೆ ತೊಟ್ಟುಕೊಳ್ಳಬೇಕು.

Cross references

ಆದಿಕಾಂಡ 8:10

ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು.

ಆದಿಕಾಂಡ 8:12

ಇನ್ನೂ ಏಳು ದಿನಗಳು ತಡೆದು ಪಾರಿವಾಳವನ್ನು ಬಿಟ್ಟಾಗ ಅದು ತಿರಿಗಿ ಅವನ ಬಳಿಗೆ ಬರಲೇ ಇಲ್ಲ.

ನಿರ್ಗಮಕಾಂಡ 12:15

ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.

ನಿರ್ಗಮಕಾಂಡ 29:35

ಹೀಗೆ ಆರೋನನಿಗೂ ಅವನ ಕುಮಾರರಿಗೂ ನಾನು ನಿನಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರ ನಡಿಸಿ ಏಳು ದಿವಸ ಅವರನ್ನು ಪ್ರತಿಷ್ಠೆಮಾಡಬೇಕು.

ಲೇವ್ಯಕಾಂಡ 8:33

ಇದಲ್ಲದೆ ನಿಮ್ಮ ಪ್ರತಿಷ್ಠೆಯ ದಿನದ ಕೊನೆಯ ವರೆಗೆ ಅಂದರೆ ಏಳು ದಿವಸಗಳ ವರೆಗೆ ನೀವು ಸಭೆಯ ಗುಡಾರದ ಬಾಗಲಿನಿಂದ ಹೊರಗೆ ಹೋಗಬಾರದು; ಆತನು ನಿಮ್ಮನ್ನು ಏಳು ದಿವಸಗಳ ವರೆಗೆ ಪ್ರತಿಷ್ಠಿಸುವನು.

ಲೇವ್ಯಕಾಂಡ 9:1

ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು;

ಲೇವ್ಯಕಾಂಡ 9:8

ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.

ಲೇವ್ಯಕಾಂಡ 12:2

ಇಸ್ರಾಯೇಲ್ಯರ ಮಕ್ಕಳಿಗೆ ಹೇಳ ಬೇಕಾದದ್ದೇನಂದರೆ--ಒಬ್ಬ ಸ್ತ್ರೀಯು ಗರ್ಭಧರಿಸಿ ಗಂಡುಮಗುವನ್ನು ಹೆತ್ತರೆ, ಅವಳು ಏಳು ದಿನಗಳು ಅಶುದ್ಧಳಾಗಿರಬೇಕು; ತನ್ನ ಮುಟ್ಟಿಗಾಗಿ ಪ್ರತ್ಯೇಕಿಸಿದ ದಿನಗಳ ಪ್ರಕಾರ ಅವಳು ಅಶುದ್ಧಳಾಗಿರಬೇಕು.

ಲೇವ್ಯಕಾಂಡ 13:5

ಯಾಜಕನು ಏಳನೇ ದಿನದಲ್ಲಿ ಅವ ನನ್ನು ನೋಡಿದಾಗ ಇಗೋ, ಆ ವ್ಯಾಧಿ ನಿಂತ ಹಾಗೆ ಕಾಣಿಸಿದರೆ ಆ ವ್ಯಾಧಿ ಚರ್ಮದಲ್ಲಿ ಹರಡದಿದ್ದರೆ ಯಾಜಕನು ಅವನನ್ನು ಇನ್ನೂ ಏಳು ದಿನಗಳು ಮುಚ್ಚಿಡ ಬೇಕು.

ಲೇವ್ಯಕಾಂಡ 16:32

ಯಾವನು ತನ್ನ ತಂದೆಯ ಬದಲಾಗಿ ಯಾಜಕ ಉದ್ಯೋಗಕ್ಕೋಸ್ಕರ ಅಭಿಷೇಕಿಸಲ್ಪಟ್ಟವನಾಗಿ ಪ್ರತಿಷ್ಠಿಸ ಲ್ಪಟ್ಟಿದ್ದಾನೋ ಆ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು.

ಅಂಕೆಗಳ ಪುಸ್ತಕ 20:28

ಆಗ ಮೋಶೆಯು ಆರೋನನ ವಸ್ತ್ರಗಳನ್ನು ತೆಗೆದು ಅವನ ಮಗನಾದ ಎಲ್ಲಾಜಾರನಿಗೆ ತೊಡಿಸಿದನು; ಆಗ ಆರೋನನು ಅಲ್ಲೆ ಬೆಟ್ಟದ ತುದಿಯಲ್ಲಿ ಸತ್ತನು. ಮೋಶೆಯೂ ಎಲ್ಲಾಜಾರನೂ ಬೆಟ್ಟದಿಂದ ಇಳಿದು ಬಂದರು.ಆರೋನನು ತೀರಿಹೋದನೆಂದು ಸಭೆಯಲ್ಲಾ ನೋಡಿದಾಗ ಇಸ್ರಾಯೇಲ್ಯರ ಮನೆಯ ವರೆಲ್ಲರು ಆರೋನನಿಗೋಸ್ಕರ ಮೂವತ್ತು ದಿವಸದ ವರೆಗೂ ದುಃಖಿಸಿದರು.

ಯೆಹೋಶುವ 6:14

ಹೀಗೆ ಎರಡನೆ ದಿನದಲ್ಲಿ ಅವರು ಪಟ್ಟಣವನ್ನು ಒಂದು ಸಾರಿ ಸುತ್ತಿ ಬಂದು ಪಾಳೆಯಕ್ಕೆ ಹಿಂತಿರುಗಿದರು. ಹೀಗೆಯೇ ಆರು ದಿವಸ ಮಾಡಿದರು.

ಯೆಹೆಜ್ಕೇಲ 43:26

ಏಳು ದಿನಗಳ ತನಕ ಅವರು ಯಜ್ಞವೇದಿಯನ್ನು ಶುದ್ಧಮಾಡಿ ತಮ್ಮನ್ನು ತಾವೇ ಪ್ರತಿಷ್ಠಿಸಿಕೊಳ್ಳಬೇಕು.ಈ ದಿನಗಳು ತೀರಿದಾಗ ಎಂಟನೇ ದಿನದ ತರುವಾಯ ಯಾಜಕರು ಯಜ್ಞವೇದಿಯ ಮೇಲೆ ನಿಮ್ಮ ದಹನಬಲಿಗಳನ್ನೂ ನಿಮ್ಮ ಸಮಾಧಾನದ ಬಲಿಗಳನ್ನೂ ಕೊಡುವರು. ಆಗ ನಾನು ನಿಮ್ಮನ್ನು ಅಂಗೀಕರಿಸುವೆನೆಂದು ದೇವರಾದ ಕರ್ತನು ಹೇಳುತ್ತಾನೆ.

ಅಪೋಸ್ತಲರ ಕೃತ್ಯಗಳು 20:6

ಹುಳಿಯಿಲ್ಲದ ರೊಟ್ಟಿಯ ದಿವಸ ಗಳಾದ ಮೇಲೆ ನಾವು ಫಿಲಿಪ್ಪಿಯಿಂದ ಹೊರಟು ಹಡಗನ್ನು ಹತ್ತಿ ಐದು ದಿವಸಗಳಲ್ಲಿ ತ್ರೋವಕ್ಕೆ ಅವರ ಬಳಿಗೆ ಬಂದೆವು. ಅಲ್ಲಿ ಏಳು ದಿವಸಗಳಿದ್ದೆವು.

ಹೆಬ್ರಿಯರಿಗೆ 7:26

ಇಂಥವನೇ ನಮಗೆ ಬೇಕಾದ ಮಹಾ ಯಾಜಕನು. ಈತನು ಪರಿಶುದ್ಧನೂ ಕೇಡು ಮಾಡ ದವನೂ ನಿಷ್ಕಳಂಕನೂ ಪಾಪಿಗಳಲ್ಲಿ ಸೇರದೆ ಪ್ರತ್ಯೇಕವಾಗಿರುವಾತನು ಆಕಾಶಗಳಿಗಿಂತ ಉನ್ನತವಾಗಿ ಮಾಡಲ್ಪಟ್ಟಾತನೂ ಆಗಿದ್ದಾನೆ.

Interlinear

Choose Theme