ಹೀಗೆ ಆರೋನನು ಪರಿಶುದ್ಧ ಸ್ಥಳಕ್ಕೆ ಬರುವಾಗ ಇಸ್ರಾಯೇಲ್ ಮಕ್ಕಳ ಹೆಸರುಗಳನ್ನು ಯಾವಾಗಲೂ ಕರ್ತನ ಮುಂದೆ ಜ್ಞಾಪಕಮಾಡುವದಕ್ಕಾಗಿ ನ್ಯಾಯದ ಎದೆ ಪದಕವನ್ನು ತನ್ನ ಹೃದಯದ ಮೇಲೆ ಹೊರಬೇಕು.
Cross references
ಆ ಎರಡು ಕಲ್ಲುಗಳನ್ನು ಎಫೋದಿನ ಹೆಗಲು ಭಾಗದ ಮೇಲೆ ಇಸ್ರಾಯೇಲ್ ಮಕ್ಕಳ ಜ್ಞಾಪಕಾರ್ಥವಾದ ಕಲ್ಲುಗಳಾಗಿ ಇಡಬೇಕು. ಆರೋನನು ತನ್ನ ಎರಡು ಹೆಗಲುಗಳ ಮೇಲೆ ಅವರ ಹೆಸರುಗಳನ್ನು ಕರ್ತನ ಸನ್ನಿಧಿಯಲ್ಲಿ ಜ್ಞಾಪಕಾರ್ಥವಾಗಿ ಹೊರಬೇಕು.
ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.
ನ್ಯಾಯದ ಎದೆಪದಕದಲ್ಲಿ ಊರೀಮ್ ತುವ್ಮೆಾಮ್ ಗಳನ್ನು ಇಡಬೇಕು. ಆರೋನನು ಕರ್ತನ ಸನ್ನಿಧಿಗೆ ಬರುವ ಸಮಯದಲ್ಲಿ ಅವು ಅವನ ಹೃದಯದ ಮೇಲೆ ಇರಬೇಕು. ಹೀಗೆ ಆರೋನನು ಕರ್ತನ ಮುಂದೆ ಯಾವಾಗಲೂ ಇಸ್ರಾಯೇಲ್ ಮಕ್ಕಳ ನ್ಯಾಯವನ್ನು ತನ್ನ ಹೃದಯದ ಮೇಲೆ ಹೊರಬೇಕು.
ನಿನ್ನ ಹೃದಯದ ಮೇಲೆ ಒಂದು ಮುದ್ರೆಯ ಹಾಗೆಯೂ ನಿನ್ನ ಕೈಮೇಲೆ ಒಂದು ಮುದ್ರೆಯ ಹಾಗೆಯೂ ನನ್ನನ್ನು ಹಾಕು; ಪ್ರೀತಿಯು ಮರಣದ ಹಾಗೆ ಬಲವಾಗಿರುವದು; ರೋಷವು ಸಮಾಧಿಯ ಹಾಗೆ ಕ್ರೂರವಾಗಿರುವದು; ಅದರ ಕಲ್ಲಿದ್ದಲುಗಳ ಬೆಂಕಿಯು ಪ್ರಜ್ವಲಿಸುವ ಜ್ವಾಲೆಯ ಕಿಡಿಗಳಾಗಿ ಇರುವವು.
ತನ್ನ ಗರ್ಭದ ಮಗನ ಮೇಲೆ ಕರುಣಿಸದೆ ಒಬ್ಬ ಹೆಂಗಸು ತನ್ನ ಮೊಲೇ ಕೂಸನ್ನು ಮರೆತಾಳೇ? ಹೌದು, ಅವಳು ಮರೆಯಬಹುದು, ಆದರೂ ನಾನು ನಿನ್ನನ್ನು ಮರೆ ಯುವದಿಲ್ಲ.
ನಿನಗೋಸ್ಕರ ದಾರಿಗುರುತುಗಳನ್ನು ನಿಲ್ಲಿಸು; ಎತ್ತರವಾದ ಗುಡ್ಡಗಳನ್ನು ಇರಿಸು; ಹೆದ್ದಾರಿಯ ಕಡೆಗೆ ನೀನು ಹೋದದಾರಿಗೆ ನಿನ್ನ ಹೃದಯವನ್ನು ಇಟ್ಟುಕೋ; ಇಸ್ರಾಯೇಲಿನ ಕನ್ಯಾಸ್ತ್ರೀಯೇ, ತಿರುಗಿಕೋ, ಈ ಪಟ್ಟಣಗಳಿಗೆ ತಿರುಗು.
ಸಹೊದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬದೇ ನನ್ನ ಮನೋಭಿ ಲಾಷೆಯೂ ದೇವರಿಗೆ ನಾನು ಮಾಡುವ ಪ್ರಾರ್ಥನೆ ಯೂ ಆಗಿದೆ;