Home Bibles ನಿರ್ಗಮಕಾಂಡ 26:36 · ಕನ್ನಡ ಬೈಬಲ್
ನಿರ್ಗಮಕಾಂಡ 26:36 · ಕನ್ನಡ ಬೈಬಲ್

ಗುಡಾರದ ಬಾಗಲಿಗೆ ನೀಲಿ ಧೂಮ್ರ ರಕ್ತವರ್ಣ ಗಳಿರುವ ನಯವಾಗಿ ಹೊಸೆದ ನಾರುಗಳಿಂದ ಕಸೂತಿ ಕೆಲಸದ ತೆರೆಯನ್ನು ತೂಗುಹಾಕಬೇಕು.ಆ ತೆರೆಗೆ ಜಾಲೀ ಮರದ ಐದು ಸ್ತಂಭಗಳನ್ನು ಮಾಡಿ ಅವುಗಳನ್ನು ಬಂಗಾರದಿಂದ ಹೊದಿಸಬೇಕು. ಅವುಗಳ ಕೊಂಡಿಗಳು ಬಂಗಾರದವುಗಳಾಗಿರಬೇಕು. ಅವುಗಳಿಗೆ ಹಿತ್ತಾಳೆಯ ಐದು ಕುಳಿಗಳನ್ನು ಎರಕ ಹೊಯ್ಯಬೇಕು.

Cross references

ನಿರ್ಗಮಕಾಂಡ 26:31

ನೀಲಿ ಧೂಮ್ರ ರಕ್ತವರ್ಣಗಳಿರುವ ನಯವಾದ ನಾರುಗಳಿಂದ ಹೊಸೆದ ತೆರೆಯನ್ನು ಮಾಡಬೇಕು. ಕೌಶಲ್ಯದಿಂದ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಬೇಕು.

ನಿರ್ಗಮಕಾಂಡ 27:16

ಅಂಗಳದ ಬಾಗಲಿಗಾಗಿ ನೀಲಿ ಧೂಮ್ರ ರಕ್ತ ವರ್ಣದ ಹೊಸೆದ ನಯವಾದ ನಾರಿನಿಂದ ಕಸೂತಿಯ ಕೆಲಸ ಮಾಡಿದ ಇಪ್ಪತ್ತು ಮೊಳದ ತೆರೆಯೂ ಅದಕ್ಕೆ ನಾಲ್ಕು ಸ್ತಂಭಗಳೂ ನಾಲ್ಕು ಕುಳಿಗಳೂ ಇರಬೇಕು.

ನಿರ್ಗಮಕಾಂಡ 28:15

ನ್ಯಾಯದ ಎದೆ ಪದಕವನ್ನು ಕುಶಲ ಕಲೆಯ ಕೆಲಸದಿಂದ ಅಂದರೆ ಎಫೋದಿನ ಕೆಲಸದ ಹಾಗೆಯೇ ಚಿನ್ನದಿಂದಲೂ ನೀಲಿ ಧೂಮ್ರ ರಕ್ತವರ್ಣದ ನೂಲಿ ನಿಂದಲೂ ನಯವಾದ ಹೊಸೆದ ನಾರಿನಿಂದಲೂ ನೀನು ಮಾಡಿಸಬೇಕು.

ನಿರ್ಗಮಕಾಂಡ 35:11

ಅವು ಯಾವವಂದರೆ: ಗುಡಾರವನ್ನೂ ಅದರ ಡೇರೆಯನ್ನೂ ಅದರ ಹೊದಿಕೆಯನ್ನೂ ಅದರ ಕೊಂಡಿಗಳನ್ನೂ ಅದರ ಹಲಗೆಗಳನ್ನೂ ಅದರ ಅಗುಳಿಗಳನ್ನೂ ಅದರ ಸ್ತಂಭ ಗಳನ್ನೂ ಅದರ ಕುಳಿಗಳನ್ನೂ

ನಿರ್ಗಮಕಾಂಡ 35:15

ಧೂಪ ವೇದಿಯನ್ನೂ ಅದರ ಕೋಲುಗಳನ್ನೂ ಅಭಿಷೇಕಿಸುವ ಎಣ್ಣೆಯನ್ನೂ ಪರಿಮಳ ಧೂಪವನ್ನೂ ಗುಡಾರದಲ್ಲಿ ಪ್ರವೇಶಿಸುವ ಬಾಗಲಿನ ತೆರೆಯನ್ನೂ

ನಿರ್ಗಮಕಾಂಡ 36:37

ಬಾಗಲಿಗೆ ನೀಲಿ, ಧೂಮ್ರ, ರಕ್ತವರ್ಣದ ಹೊಸೆದ ನಯವಾದ ನಾರುಗಳಿಂದ ಕಸೂತಿ ಹಾಕಿ ತೆರೆಯನ್ನು ಮಾಡಿದನು;ಕೊಂಡಿ ಇರುವ ಐದು ಕಂಬಗಳನ್ನು ಮಾಡಿ ಅವುಗಳ ತಲೆಗಳನ್ನೂ ಕಂಬ ಗಳನ್ನೂ ಚಿನ್ನದಿಂದ ಹೊದಿಸಿದನು. ಆದರೆ ಅವುಗಳ ಐದು ಕಾಲುಗಳು ಹಿತ್ತಾಳೆಯದ್ದಾಗಿದ್ದವು.

ನಿರ್ಗಮಕಾಂಡ 39:33

ಆಗ ಅವರು ಗುಡಾರವನ್ನು ಮೋಶೆಯ ಬಳಿಗೆ ತಂದರು. ಅದರ ಎಲ್ಲಾ ಸಾಮಾನುಗಳನ್ನು ಹಲಗೆಗಳನ್ನು ಅಗುಳಿಗಳನ್ನು ಸ್ತಂಭಗಳನ್ನು ಕುಣಿಕೆಗಳನ್ನು;

ನಿರ್ಗಮಕಾಂಡ 40:5

ನೀನು ಧೂಪಕ್ಕೋಸ್ಕರ ಮಾಡಿದ ಚಿನ್ನದ ಬಲಿಪೀಠವನ್ನು ಮಂಜೂಷದ ಸಾಕ್ಷಿಯ ಪೆಟ್ಟಿಗೆಗೆ ಎದುರಾಗಿ ಇಟ್ಟು, ಗುಡಾರದ ಬಾಗಿಲಿಗೆ ತೆರೆಯನ್ನು ಹಾಕಬೇಕು.

ನಿರ್ಗಮಕಾಂಡ 40:28

ಗುಡಾರದ ಬಾಗಿಲಿನ ತೆರೆಯನ್ನು ತೂಗುಹಾಕಿ ದನು. ಸಭೆ ಡೇರೆಯ ಗುಡಾರದ ಬಳಿಯಲ್ಲಿ ದಹನ ಬಲಿಪೀಠವನ್ನು ಇಟ್ಟನು.

ಅಂಕೆಗಳ ಪುಸ್ತಕ 3:25

ಸಭೆಯ ಗುಡಾರದಲ್ಲಿ ಗೇರ್ಷೋನನ ಕುಮಾರರು ಕಾಪಾಡಿಕೊಳ್ಳಬೇಕಾದವುಗಳು ಗುಡಾ ರವೂ ಅದರ ಹೊದಿಕೆಯೂ ಸಭೆಯ ಗುಡಾರದ ಬಾಗಲಿನ ತೆರೆಯೂ

ಅಂಕೆಗಳ ಪುಸ್ತಕ 9:15

ಗುಡಾರವನ್ನು ಎತ್ತಿದ ದಿವಸದಲ್ಲಿ ಮೇಘವು ನಿವಾಸದ ಕಡೆಗೆ ಅಂದರೆ, ಸಾಕ್ಷೀ ಗುಡಾರವನ್ನು ಮುಚ್ಚಿತು. ಸಾಯಂಕಾಲದಿಂದ ಉದಯದ ವರೆಗೆ ಅದು ಬೆಂಕಿಯಂತೆ ಗುಡಾರದ ಮೇಲೆ ಇತ್ತು.

2 ಸಮುವೇಲ 7:6

ನಿಶ್ಚಯವಾಗಿ ನಾನು ಐಗುಪ್ತದಿಂದ ಇಸ್ರಾಯೇಲ್‌ ಮಕ್ಕಳನ್ನು ಬರಮಾಡಿದ ಕಾಲ ಮೊದಲುಗೊಂಡು ಇಂದಿನ ವರೆಗೂ ಮನೆ ಯಲ್ಲಿ ವಾಸಮಾಡದೆ ಡೇರೆಯಲ್ಲಿಯೂ ಗುಡಾರ ದಲ್ಲಿಯೂ ವಾಸಮಾಡಿಕೊಂಡಿದ್ದೆನು.

ಕೀರ್ತನೆಗಳು 78:60

ಸಿಲೋವಿನ ಗುಡಾರವನ್ನೂ ಮನುಷ್ಯರೊಳಗೆ ಆತನು ಹಾಕಿದ ಗುಡಾರವನ್ನೂ ಬಿಟ್ಟು,

ಯೋಹಾನ 10:9

ನಾನೇ ಆಬಾಗಲು; ನನ್ನ ಮೂಲಕವಾಗಿ ಯಾವನಾದರೂ ಪ್ರವೇಶಿಸಿದರೆ ಅವನು ರಕ್ಷಣೆ ಹೊಂದುವನು; ಇದ ಲ್ಲದೆ ಅವನು ಒಳಗೆ ಹೋಗುತ್ತಾನೆ, ಹೊರಗೆ ಬರು ತ್ತಾನೆ ಮತ್ತು ಮೇವನ್ನು ಕಂಡುಕೊಳ್ಳುತ್ತಾನೆ.

ಯೋಹಾನ 14:6

ಯೇಸು ಅವನಿಗೆ--ನಾನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದೇನೆ; ನನ್ನ ಮೂಲಕವಾಗಿ ಹೊರತು ಯಾರೂ ತಂದೆಯ ಬಳಿಗೆ ಬರುವದಿಲ್ಲ.

Interlinear

Choose Theme