ಏಳನೆಯ ವರುಷದಲ್ಲಿ ಅದಕ್ಕೆ ವಿಶ್ರಾಂತಿಯನ್ನು ಕೊಟ್ಟು ಅದನ್ನು ಬೀಳು ಬಿಡಬೇಕು. ಆಗ ನಿನ್ನ ಜನರಲ್ಲಿರುವ ಬಡವರು ಅದರಲ್ಲಿ ಬೆಳೆದದ್ದನ್ನು ತಿನ್ನಲಿ; ಅವರು ಬಿಟ್ಟದ್ದನ್ನು ಹೊಲದ ಪಶುಗಳು ತಿನ್ನಲಿ. ಹೀಗೆ ನಿನ್ನ ದ್ರಾಕ್ಷೇ ತೋಟದಲ್ಲಿಯೂ ಎಣ್ಣೇಮರಗಳ ತೋಪಿನಲ್ಲಿಯೂ ಮಾಡಬೇಕು.
Cross references
ಇಸ್ರಾಯೇಲ್ ಮಕ್ಕಳೊಂದಿಗೆ ನೀನು ಮಾತನಾಡಿ ಅವರಿಗೆ ಹೀಗೆ ಹೇಳು--ನಾನು ನಿಮಗೆ ಕೊಡುವ ದೇಶದಲ್ಲಿ ನೀವು ಬಂದಾಗ ದೇಶವು ಕರ್ತನಿ ಗಾಗಿ ಸಬ್ಬತ್ತನ್ನು ಕೈಕೊಳ್ಳಬೇಕು.
ಆರು ವರುಷ ನೀವು ನಿಮ್ಮ ಹೊಲವನ್ನು ಬಿತ್ತಬೇಕು, ಆರು ವರುಷ ನೀವು ನಿಮ್ಮ ದ್ರಾಕ್ಷೇತೋಟವನ್ನು ಕತ್ತರಿಸಬೇಕು, ಅವು ಗಳಿಂದ ಫಲವನ್ನು ಕೂಡಿಸಬೇಕು.
ಐವತ್ತನೆಯ ಆ ವರುಷವು ನಿಮಗೆ ಸಂಭ್ರಮವಾಗಿ ರುವದು; ನೀವು ಬಿತ್ತಲೂಬಾರದು ಮತ್ತು ತನ್ನಷ್ಟಕ್ಕೆ ತಾನೇ ಬೆಳೆಯುವದನ್ನು ಕೊಯ್ಯಲೂಬಾರದು ಇಲ್ಲವೆ ಕತ್ತರಿಸದಿದ್ದ ದ್ರಾಕ್ಷೇ ಬಳ್ಳಿಗಳಲ್ಲಿ ದ್ರಾಕ್ಷೇ ಹಣ್ಣುಗಳನ್ನು ಕೂಡಿಸಲೂಬಾರದು.
ನೀವು--ಇಗೋ, ನಾವು ಬಿತ್ತುವದಿಲ್ಲ ಇಲ್ಲವೆ ನಮ್ಮ ಹುಟ್ಟುವಳಿಯಲ್ಲಿ ಕೂಡಿಸಿಕೊಳ್ಳುವದಿಲ್ಲ, ಏಳ ನೆಯ ವರುಷದಲ್ಲಿ ನಾವು ಏನು ತಿನ್ನೋಣ ಎಂದು ಅನ್ನುವಿರಿ.
ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.
ನೀವು ನಿಮ್ಮ ಶತ್ರುಗಳ ದೇಶದಲ್ಲಿ ಇರುವ ವರೆಗೂ ಭೂಮಿ ಹಾಳಾಗಿರುವ ಎಲ್ಲಾ ದಿನಗಳಲ್ಲಿಯೂ ತನ್ನ ಸಬ್ಬತ್ತುಗಳನ್ನು ಅನುಭವಿಸುವದು; ಆಗ ಭೂಮಿ ವಿಶ್ರಮಿಸಿಕೊಂಡು ತನ್ನ ಸಬ್ಬತ್ತುಗಳನ್ನು ಅನುಭವಿ ಸುವದು.
ಬಡವರು ದೇಶದಲ್ಲಿ ಇಲ್ಲದೆ ಹೋಗುವದಿಲ್ಲ: ಆದದರಿಂದನಿನ್ನ ಸಹೋದರನಿಗೂ ದರಿದ್ರನಿಗೂ ಬಡವನಿಗೂ ದೇಶದಲ್ಲಿ ನಿನ್ನ ಕೈಯನ್ನು ವಿಶಾಲವಾಗಿ ತೆರೆಯ ಬೇಕೆಂದು ನಾನು ನಿನಗೆ ಆಜ್ಞಾಪಿಸುತ್ತೇನೆ.
ಇದಲ್ಲದೆ ಸಮ್ಮುಖದ ರೊಟ್ಟಿಗೋಸ್ಕರವೂ ನಿತ್ಯ ಕಾಣಿಕೆಗೋಸ್ಕರವೂ ಸಬ್ಬತ್ತುಗಳಲ್ಲಿಯೂ ಅಮಾವಾಸ್ಯೆ ಗಳಲ್ಲಿಯೂ ಅರ್ಪಿಸುವ ನಿತ್ಯ ದಹನಬಲಿಗಳಿಗೋ ಸ್ಕರವೂ ನೇಮಿಸಿದ ಹಬ್ಬಗಳಿಗೋಸ್ಕರವೂ ಪರಿಶುದ್ಧ ವಾದವುಗಳಿಗೋಸ್ಕರವೂ