ಒಬ್ಬನು ತನ್ನ ನೆರೆಯವನಿಗೆ ತನ್ನ ಹಣವನ್ನಾಗಲಿ ಸಾಮಾನುಗಳನ್ನಾಗಲಿ ಇಟ್ಟುಕೊಳ್ಳುವದಕ್ಕೆ ಕೊಟ್ಟಾಗ ಅದು ಅವನ ಮನೆಯಿಂದ ಕಳ್ಳತನವಾಗಿ ಆ ಕಳ್ಳನು ಸಿಕ್ಕಿದರೆ ಅವನು ಎರಡರಷ್ಟು ಕೊಡಬೇಕು.
Cross references
ಕಳ್ಳತನ ಮಾಡಿದ ಎತ್ತಾಗಲಿ ಕತ್ತೆಯಾಗಲಿ ಕುರಿಯಾಗಲಿ ಕದ್ದವನ ಬಳಿಯಲ್ಲಿ ಜೀವವುಳ್ಳದ್ದಾಗಿ ನಿಜವಾಗಿ ಸಿಕ್ಕಿದರೆ ಅವನು ಎರಡರಷ್ಟು ತಿರಿಗಿ ಕೊಡಬೇಕು.
ಅಥವಾ ಅವನು ಸುಳ್ಳಾಗಿ ಪ್ರಮಾಣಮಾಡಿ ಪಡೆದವುಗಳೆಲ್ಲವುಗಳನ್ನೂ ಅಲ್ಲದೆ ಅವನು ಅದರ ಅಸಲಿಗೆ ಐದನೇ ಪಾಲನ್ನೂ ಕೂಡಿಸಿ ಹಿಂದಕ್ಕೆ ಕೊಡಬೇಕು. ಅತಿಕ್ರಮ ಬಲಿ ಅರ್ಪಿಸುವ ದಿನದಲ್ಲಿ ಅದರ ಯಜಮಾನನು ಯಾವ ನಾಗಿರುವನೋ ಅವನಿಗೆ ಕೊಡಬೇಕು.
ಹಸಿದಾಗ ಕಳ್ಳನು ತನ್ನ ಪ್ರಾಣವನ್ನು ತೃಪ್ತಿಪಡಿಸುವದಕ್ಕೆ ಕಳವು ಮಾಡಿದರೆ ಜನರು ಅವನನ್ನು ಹೀಯಾಳಿಸುವದಿಲ್ಲ.
ಕಳ್ಳನು ಸಿಕ್ಕಿದ ಮೇಲೆ ನಾಚಿಕೆಪಡುವ ಪ್ರಕಾರ ಇಸ್ರಾಯೇಲಿನ ಮನೆತನ ದವರಿಗೆ ನಾಚಿಕೆಯಾಯಿತು; ಅವರಿಗೂ ಅವರ ಅರಸರಿಗೂ ಸಾಮಂತರಿಗೂ ಯಾಜಕರಿಗೂ ಅವರ ಪ್ರವಾದಿಗಳಿಗೂ ನಾಚಿಕೆಯಾಯಿತು.
ಅವನು ಬಡವರಿಗೋಸ್ಕರ ಚಿಂತಿಸಿದ್ದಕ್ಕಾಗಿ ಅಲ್ಲ , ಅವನು ಕಳ್ಳನಾಗಿದ್ದು ಹಣದ ಚೀಲವನ್ನು ಇಟ್ಟು ಕೊಂಡು ಅದರಲ್ಲಿ ಹಾಕಿದ್ದನ್ನು ತಕ್ಕೊಳ್ಳುವವನಾಗಿದ್ದ ದರಿಂದಲೇ ಇದನ್ನು ಹೇಳಿದನು.
ಕಳ್ಳರು ಲೋಭಿಗಳು ಕುಡುಕರು ಬೈಯುವವರು ಸುಲು ಕೊಳ್ಳುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.