ಈ ಮಗುವು ಬೆಳೆದಾಗ ಅವನನ್ನು ಫರೋಹನ ಮಗಳ ಬಳಿಗೆ ತಕ್ಕೊಂಡುಹೋದಳು. ಅವನು ಆಕೆಗೆ ಮಗನಾದನು. ಆಕೆಯು--ಇವನನ್ನು ನೀರಿನೊಳಗಿಂದ ಎಳೆದೆನೆಂದು ಹೇಳಿ ಅವನಿಗೆ ಮೋಶೆ ಎಂದು ಹೆಸರಿಟ್ಟಳು.
Cross references
ಇದಲ್ಲದೆ ಆದಾಮನು ತಿರಿಗಿ ತನ್ನ ಹೆಂಡತಿಯನ್ನು ಕೂಡಿದ್ದರಿಂದ ಅವಳು ಮಗನನ್ನು ಹೆತ್ತು ಅವನಿಗೆ ಸೇತನೆಂದು ಹೆಸರಿಟ್ಟಳು. ಯಾಕಂದರೆ--ಕಾಯಿನನು ಕೊಂದುಹಾಕಿದ ಹೇಬೆಲನಿಗೆ ಬದಲಾಗಿ ದೇವರು ನನಗೆ ಬೇರೆ ಸಂತತಿಯನ್ನು ಕೊಟ್ಟನೆಂದು ಆಕೆಯು ಹೇಳಿದಳು.ಸೇತನಿಗೂ ಒಬ್ಬ ಮಗನು ಹುಟ್ಟಿದನು; ಅವನಿಗೆ ಎನೋಷ್ ಎಂದು ಹೆಸರಿಟ್ಟನು; ತರುವಾಯ ಮನುಷ್ಯರು ಕರ್ತನ ಹೆಸರನ್ನು ಕರೆದು ಆರಾಧಿಸುವದಕ್ಕೆ ಆರಂಭಿಸಿದರು.
ಕರ್ತನ ದೂತನು ಅವಳಿಗೆ--ಇಗೋ, ನೀನು ಗರ್ಭಿಣಿ ಯಾಗಿದ್ದೀ, ನೀನು ಒಬ್ಬ ಮಗನನ್ನು ಹೆರುವಿ; ಅವನಿಗೆ ಇಷ್ಮಾಯೇಲ ಎಂದು ಹೆಸರಿಡಬೇಕು. ಯಾಕಂದರೆ ಕರ್ತನು ನಿನ್ನ ವ್ಯಥೆಯನ್ನು ಕೇಳಿದ್ದಾನೆ.
ಈಗ ನಾನು ನಿನ್ನ ಬಳಿಗೆ ಐಗುಪ್ತಕ್ಕೆ ಬರುವ ಮೊದಲು ಐಗುಪ್ತದಲ್ಲಿ ನಿನಗೆ ಹುಟ್ಟಿದ ಇಬ್ಬರು ಕುಮಾರರಾದ ಎಫ್ರಾಯಾಮ್ ಮನಸ್ಸೆಯರು ನನ್ನ ವರು ಮತ್ತು ಅವರು ರೂಬೇನ್ ಸಿಮೆಯೋನ್ ಇವ ರಂತೆ ನನ್ನವರಾಗಿರಬೇಕು.
ಹನ್ನಳು ಗರ್ಭವತಿ ಯಾಗಿ ಕಾಲವು ಪೂರ್ತಿಯಾದ ತರುವಾಯ ಆದದ್ದೇ ನಂದರೆ, ಅವಳು ಮಗನನ್ನು ಹೆತ್ತು--ನಾನು ಅವನನ್ನು ಕರ್ತನ ಬಳಿಯಲ್ಲಿ ಕೇಳಿಕೊಂಡೆನು ಎಂದು ಹೇಳಿ ಅವನಿಗೆ ಸಮುವೇಲನೆಂದು ಹೆಸರಿಟ್ಟಳು.
ಆಕೆಯು ಒಬ್ಬ ಮಗನನ್ನು ಹೆರುವಳು; ನೀನು ಆತನಿಗೆ ಯೇಸು ಎಂದು ಕರೆಯಬೇಕು; ಯಾಕೆಂದರೆ ಆತನು ತನ್ನ ಜನರನ್ನು ಅವರ ಪಾಪಗಳಿಂದ ರಕ್ಷಿಸುವನು ಅಂದನು.
ಆಮೇಲೆ ಅವನನ್ನು ಹೊರಗೆ ಹಾಕಿ ದಾಗ ಫರೋಹನ ಮಗಳು ಅವನನ್ನು ಎತ್ತಿಕೊಂಡು ಹೋಗಿ ತನ್ನ ಮಗನಾಗಿ ಸಾಕಿದಳು.
ನ್ಯಾಯಪ್ರಮಾಣಾಧೀನರನ್ನು ವಿಮೋಚಿಸುವದಕ್ಕೂ ನಾವು ದತ್ತುಪುತ್ರರ ಸ್ವೀಕಾರವನ್ನು ಹೊಂದುವಂತೆಯೂ ಕಳುಹಿಸಿಕೊಟ್ಟನು.
ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ.
ಇಗೋ, ನಾವು ದೇವರ ಪುತ್ರರೆಂದು ಕರೆಯಲ್ಪಡುವದರಲ್ಲಿ ತಂದೆಯು ಎಂಥಾ ಪ್ರೀತಿಯನ್ನು ನಮ್ಮ ಮೇಲೆ ಇಟ್ಟಿದ್ದಾನಲ್ಲಾ; ಈ ಕಾರಣದಿಂದ ಲೋಕವು ನಮ್ಮನ್ನು ತಿಳಿದುಕೊಳ್ಳು ವದಿಲ್ಲ; ಯಾಕಂದರೆ ಅದು ಆತನನ್ನು ತಿಳಿದು ಕೊಳ್ಳಲಿಲ್ಲ.