Home Bibles ನಿರ್ಗಮಕಾಂಡ 19:12 · ಕನ್ನಡ ಬೈಬಲ್
ನಿರ್ಗಮಕಾಂಡ 19:12 · ಕನ್ನಡ ಬೈಬಲ್

ಜನರಿಗೋಸ್ಕರ ಸುತ್ತಲೂ ಮೇರೆಗಳನ್ನು ಮಾಡಿಸಿ ಅವರಿಗೆ--ನೀವು ಬೆಟ್ಟವನ್ನು ಏರದಂತೆಯೂ ಅದರ ಮೇರೆಯನ್ನು ಮುಟ್ಟದಂತೆಯೂ ಜಾಗ್ರತೆಯಾಗಿರ್ರಿ; ಬೆಟ್ಟವನ್ನು ಮುಟ್ಟಿದವರೆಲ್ಲಾ ಖಂಡಿತವಾಗಿ ಸಾಯ ಬೇಕು.

Cross references

ನಿರ್ಗಮಕಾಂಡ 10:28

ಆಗ ಫರೋಹನು ಅವನಿಗೆ--ನನ್ನನ್ನು ಬಿಟ್ಟು ಹೋಗು, ಇನ್ನು ನನ್ನ ಮುಖವನ್ನು ನೋಡದಂತೆ ಎಚ್ಚರಿಕೆಯಾಗಿರು; ಯಾಕಂದರೆ ನೀನು ನನ್ನ ಮುಖವನ್ನು ನೋಡಿದ ದಿನದಲ್ಲಿ ನೀನು ಸಾಯುವಿ ಅಂದನು.ಮೋಶೆಯು ಅವನಿಗೆ--ನೀನು ಸರಿಯಾಗಿ ಹೇಳಿದ್ದೀ. ಇನ್ನು ಮೇಲೆ ನಾನು ನಿನ್ನ ಮುಖವನ್ನು ನೋಡುವದಿಲ್ಲ ಅಂದನು.

ನಿರ್ಗಮಕಾಂಡ 19:21

ಕರ್ತನು ಮೋಶೆಗೆ--ನೀನು ಇಳಿದು ಹೋಗಿ ಜನರನ್ನು ಎಚ್ಚರಿಸಬೇಕು. ಅವರು ಕರ್ತನನ್ನು ನೋಡುವದಕ್ಕಾಗಿ ಮುಂದೆ ಬಂದು ಅವರಲ್ಲಿ ಬಹಳ ಜನರು ಸತ್ತಾರು.

ನಿರ್ಗಮಕಾಂಡ 19:23

ಮೋಶೆಯು ಕರ್ತನಿಗೆ--ಜನರು ಸೀನಾಯಿ ಬೆಟ್ಟವನ್ನು ಏರಲಾರರು. ಬೆಟ್ಟಕ್ಕೆ ಮೇರೆಗಳನ್ನು ಹಾಕಿ ಅದನ್ನು ಶುದ್ಧಮಾಡೆಂದು ನೀನೇ ನಮ್ಮನ್ನು ಎಚ್ಚರಿಸಿದ್ದೀ ಅಂದನು.

ನಿರ್ಗಮಕಾಂಡ 24:2

ಮೋಶೆ ಒಬ್ಬನೇ ಕರ್ತನ ಸವಿಾಪಕ್ಕೆ ಬರಲಿ; ಆದರೆ ಅವರು ಸವಿಾಪಕ್ಕೆ ಬರಬಾರದು. ಇಲ್ಲವೆ ಜನರು ಅವನ ಸಂಗಡ ಬರಬಾರದು ಎಂದು ಹೇಳಿದನು.

ನಿರ್ಗಮಕಾಂಡ 34:3

ಆದರೆ ಯಾರೂ ನಿನ್ನ ಸಂಗಡ ಮೇಲಕ್ಕೆ ಬರಬಾರದು, ಇಲ್ಲವೆ ಬೆಟ್ಟದ ಮೇಲೆ ಎಲ್ಲಿಯೂ ಯಾರೂ ಕಾಣಿಸಬಾರದು, ಇಲ್ಲವೆ ಆ ಬೆಟ್ಟದ ಎದುರಿನಲ್ಲಿ ಕುರಿ ದನಗಳು ಸಹ ಮೇಯ ಬಾರದು.

ನಿರ್ಗಮಕಾಂಡ 34:12

ನೀನು ಹೋಗುವ ದೇಶದ ನಿವಾಸಿಗಳ ಸಂಗಡ ಒಡಂಬಡಿಕೆಯನ್ನು ಮಾಡದಂತೆ ನೋಡಿಕೋ. ಒಂದು ವೇಳೆ ಮಾಡಿದರೆ ಅದು ನಿಮ್ಮ ಮಧ್ಯದಲ್ಲಿ ಉರುಲಾಗಿರುವದು.

ದ್ವಿತೀಯೋಪದೇಶಕಾಂಡ 2:4

ನೀನು ಜನರಿಗೆ ಆಜ್ಞಾಪಿಸಬೇಕಾದದ್ದೇ ನಂದರೆ--ನೀವು ಸೇಯಾರಿನಲ್ಲಿ ವಾಸಮಾಡುವ ನಿಮ್ಮ ಸಹೋದರರಾದ ಏಸಾವನ ಕುಮಾರರ ಮೇರೆಯನ್ನು ದಾಟಬೇಕು; ಅವರು ನಿಮಗೆ ಭಯಪಡುವರು; ಆದದರಿಂದ ನೀವು ಬಹಳ ಜಾಗ್ರತೆಯಿಂದಿರಬೇಕು.

ದ್ವಿತೀಯೋಪದೇಶಕಾಂಡ 4:9

ನಿನ್ನ ಕಣ್ಣುಗಳು ನೋಡಿದ ಕಾರ್ಯಗಳನ್ನು ನೀನು ಮರೆಯದ ಹಾಗೆಯೂ ನೀನು ಬದುಕುವ ದಿನಗಳೆಲ್ಲಾ ಅವು ನಿನ್ನ ಹೃದಯಕ್ಕೆ ದೂರವಾಗದ ಹಾಗೆಯೂ ಬಹು ಜಾಗ್ರತೆಯಾಗಿದ್ದು ನಿನ್ನ ಪ್ರಾಣ ವನ್ನು ಬಹಳವಾಗಿ ಕಾಪಾಡು; ಅವುಗಳನ್ನು ನಿನ್ನ ಮಕ್ಕಳಿಗೂ ನಿನ್ನ ಮಕ್ಕಳ ಮಕ್ಕಳಿಗೂ ಬೋಧಿಸು.

ಯೆಹೋಶುವ 3:4

ಆದರೆ ನಿಮಗೂ ಅದಕ್ಕೂ ಸುಮಾರು ಎರಡು ಸಾವಿರ ಮೊಳ ದೂರ ಇರಬೇಕು. ನೀವು ಹೋಗುವ ಮಾರ್ಗವನ್ನು ತಿಳಿಯುವ ಹಾಗೆ ಅದರ ಹತ್ತಿರ ಬರಬೇಡಿರಿ. ನೀವು ಎಂದಾದರೂ ಆ ಮಾರ್ಗದಲ್ಲಿ ದಾಟಿ ಹೋಗಿರು ವದಿಲ್ಲ ಅಂದರು.

ಹೆಬ್ರಿಯರಿಗೆ 12:20

(ಯಾಕಂದರೆ ಯಾವ ಮೃಗವಾ ದರೂ ಬೆಟ್ಟವನ್ನು ಮುಟ್ಟಿದರೆ ಅದನ್ನು ಕಲ್ಲೆಸೆದು ಕೊಲ್ಲ ಬೇಕು, ಇಲ್ಲವೆ ಈಟಿಯಿಂದ ತಿವಿಯಬೇಕೆಂದು ಅವರು ಆಜ್ಞಾಪಿಸಿದ್ದನ್ನು ತಾಳಲಾರದೆ ಇದ್ದರು.

Interlinear

Choose Theme