Home Bibles ನಿರ್ಗಮಕಾಂಡ 16:14 · ಕನ್ನಡ ಬೈಬಲ್
ನಿರ್ಗಮಕಾಂಡ 16:14 · ಕನ್ನಡ ಬೈಬಲ್

ಬಿದ್ದಿದ್ದ ಮಂಜು ಹೋದ ಮೇಲೆ ಇಗೋ, ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು.

Cross references

ನಿರ್ಗಮಕಾಂಡ 16:31

ಆಗ ಇಸ್ರಾಯೇಲ್‌ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.

ಅಂಕೆಗಳ ಪುಸ್ತಕ 11:7

ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದರ ಬಣ್ಣವು ಬದೋಲಖ ಬಣ್ಣದ ಹಾಗಿತ್ತು.

ದ್ವಿತೀಯೋಪದೇಶಕಾಂಡ 8:3

ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.

ನೆಹೆಮ್ಯ 9:15

ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ.

ಕೀರ್ತನೆಗಳು 78:24

ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.

ಕೀರ್ತನೆಗಳು 105:40

ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.

ಕೀರ್ತನೆಗಳು 147:16

ಆತನು ಹಿಮವನ್ನು ಉಣ್ಣೆಯ ಹಾಗೆ ಕೊಡುತ್ತಾನೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

Interlinear

Choose Theme