Cross references
ಅದಕ್ಕೆ ಮೋಶೆಯು ದೇವರಿಗೆ--ಇಗೋ, ಇಸ್ರಾಯೇಲ್ ಮಕ್ಕಳ ಬಳಿಗೆ ಹೋಗಿ--ನಿಮ್ಮ ಪಿತೃಗಳ ದೇವರು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆಂದು ಹೇಳುವಾಗ ಅವರು ನನಗೆ--ಆತನ ಹೆಸರು ಏನು ಎಂದು ಕೇಳಿದರೆ ನಾನು ಅವರಿಗೆ ಏನು ಹೇಳಬೇಕು ಅಂದನು.
ಆಗ ದೇವರು ಮೋಶೆಗೆ--ಇರುವಾತನೇ ಆಗಿದ್ದೇನೆ, ಆ ಇರುವಾತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾನೆ ಎಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು ಅಂದನು.
ದೇವರು ಮೋಶೆಗೆ--ನಿಮ್ಮ ಪಿತೃಗಳಾದ ಅಬ್ರಹಾಮ ಇಸಾಕ ಯಾಕೋಬರ ದೇವರು ಆಗಿರುವ ಕರ್ತನು ನನ್ನನ್ನು ನಿಮ್ಮ ಬಳಿಗೆ ಕಳುಹಿಸಿ ದ್ದಾನೆಂದು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕು; ಇದೇ ಯುಗ ಯುಗಕ್ಕೆ ನನ್ನ ಹೆಸರೂ ತಲತಲಾಂತರಕ್ಕೆ ನನ್ನ ಸ್ಮರಣೆಯೂ ಆಗಿದೆ ಎಂದು ಹೇಳಿದನು.
ದೇವರು ಮೋಶೆಯ ಸಂಗಡ ಮಾತನಾಡಿ--ನಾನೇ ಕರ್ತನು;
ಆದದರಿಂದ ಇಸ್ರಾ ಯೇಲ್ ಮಕ್ಕಳಿಗೆ--ನಾನೇ ಕರ್ತನು, ನಾನು ನಿಮ್ಮನ್ನು ಐಗುಪ್ತದ ಬಿಟ್ಟೀಕೆಲಸಗಳಿಂದ ಹೊರಗೆ ಬರಮಾಡಿ ಅವರ ದಾಸತ್ವದಿಂದ ನಿಮ್ಮನ್ನು ಬಿಡಿಸಿ ನಾನು ಚಾಚಿದ ಬಾಹುವಿನಿಂದಲೂ ದೊಡ್ಡ ನ್ಯಾಯತೀರ್ಪುಗ ಳಿಂದಲೂ
ಕರ್ತನು ನಿಮ ಗೋಸ್ಕರ ಯುದ್ಧಮಾಡುವನು; ಆದರೆ ನೀವು ಸಮಾಧಾನವಾಗಿರ್ರಿ ಅಂದನು.
ಅವರ ರಥಗಳ ಚಕ್ರಗಳನ್ನು ತೆಗೆದುಬಿಟ್ಟದ್ದರಿಂದ ಐಗುಪ್ತ್ಯರು ಕಷ್ಟದಿಂದ ಹೋಗು ವಂತೆ ಮಾಡಿದನು. ಆಗ--ಇಸ್ರಾಯೇಲಿನ ಎದುರಿ ನಿಂದ ಓಡಿಹೋಗೋಣ. ಯಾಕಂದರೆ ಕರ್ತನು ಐಗುಪ್ತ್ಯರಿಗೆ ವಿರೋಧವಾಗಿ ಅವರಿಗೋಸ್ಕರ ಯುದ್ಧ ಮಾಡುತ್ತಾನೆಂದು ಹೇಳಿಕೊಂಡರು.
ಈ ಮಹಿಮೆಯ ಅರಸನು ಯಾರು? ಬಲವೂ ಪರಾಕ್ರಮವೂ ಉಳ್ಳ ಕರ್ತನು; ಯುದ್ಧದಲ್ಲಿ ಪರಾಕ್ರಮವುಳ್ಳ ಕರ್ತನು.
ಓ ಪರಾಕ್ರಮಿಯೇ, ನಿನ್ನ ಮಹಿಮೆಯಿಂದಲೂ ಘನತೆಯಿಂದಲೂ ನಿನ್ನ ಕತ್ತಿಯನ್ನು ಸೊಂಟಕ್ಕೆ ಬಿಗಿ ದುಕೋ.
ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.
ನಾನೇ ಕರ್ತನು, ಅದೇ ನನ್ನ ಹೆಸರು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತೋತ್ರ ವನ್ನು ಎರಕದ ವಿಗ್ರಹಗಳಿಗೂ ಕೊಡೆನು.
ಇಸ್ರಾಯೇಲಿನ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀನು ಹೋಗಿ ಯೆಹೂದದ ಅರಸನಾದ ಚಿದ್ಕೀಯನ ಸಂಗಡ ಮಾತನಾಡಿ ಅವನಿಗೆ ಹೇಳತಕ್ಕ ದ್ದೇನಂದರೆ--ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ಈ ಪಟ್ಟಣವನ್ನು ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸುತ್ತೇನೆ; ಅವನು ಅದನ್ನು ಬೆಂಕಿಯಿಂದ ಸುಡು ವನು.
ಪರಲೋಕವು ತೆರೆದಿರುವದನ್ನು ನಾನು ಕಂಡೆನು. ಆಗ ಬಿಳೀ ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದಾತನು ನಂಬಿಗಸ್ತನೂ ಸತ್ಯವಂತನೂ ಎಂದು ಕರೆಯಲ್ಪಟ್ಟನು. ಆತನು ನೀತಿಯಿಂದ ನ್ಯಾಯವಿಚಾರಣೆ ಮಾಡಿ ಯುದ್ಧ ಮಾಡುತ್ತಾನೆ;