Home Bibles ನಿರ್ಗಮಕಾಂಡ 13:17 · ಕನ್ನಡ ಬೈಬಲ್
ನಿರ್ಗಮಕಾಂಡ 13:17 · ಕನ್ನಡ ಬೈಬಲ್

ಫರೋಹನು ಜನರನ್ನು ಕಳುಹಿಸಿಬಿಟ್ಟಾಗ ಫಿಲಿಷ್ಟಿಯರ ದೇಶದ ದಾರಿಯು ಸವಿಾಪವಿದ್ದರೂ ದೇವರು ಅವರನ್ನು ಅದರಲ್ಲಿ ನಡಿಸಲಿಲ್ಲ; ಯಾಕಂದರೆ ದೇವರು--ಜನರು ಯುದ್ಧವನ್ನು ನೋಡಿ ಮನಸ್ಸನ್ನು ಬೇರೆ ಮಾಡಿಕೊಂಡು ಅವರು ಐಗುಪ್ತಕ್ಕೆ ಹಿಂದಿರುಗಾರು ಎಂದು ಅಂದುಕೊಂಡನು.

Cross references

ನಿರ್ಗಮಕಾಂಡ 14:10

ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್‌ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್‌ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು.

ನಿರ್ಗಮಕಾಂಡ 14:11

ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?

ನಿರ್ಗಮಕಾಂಡ 16:2

ಆಗ ಇಸ್ರಾಯೇಲ್‌ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು.

ಅಂಕೆಗಳ ಪುಸ್ತಕ 14:1

ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ಆ ರಾತ್ರಿಯೆಲ್ಲಾ ಅತ್ತರು.

ದ್ವಿತೀಯೋಪದೇಶಕಾಂಡ 17:16

ಆದರೆ ಅವನು ತನಗೆ ಕುದುರೆಗಳನ್ನು ಹೆಚ್ಚಿಸಿ ಕೊಳ್ಳಬಾರದು; ಕುದುರೆಗಳನ್ನು ಹೆಚ್ಚಿಸಿಕೊಳ್ಳುವ ಹಾಗೆ ಜನಗಳನ್ನು ಐಗುಪ್ತ ದೇಶಕ್ಕೆ ತಿರುಗಿಸಬಾರದು; ಆ ಮಾರ್ಗವಾಗಿ ನೀವು ಇನ್ನು ತಿರುಗಿ ಹೋಗ ಬಾರದೆಂದು ಕರ್ತನು ನಿಮಗೆ ಹೇಳಿದನಲ್ಲಾ.

ದ್ವಿತೀಯೋಪದೇಶಕಾಂಡ 20:8

ಇದಲ್ಲದೆ ಅಧಿಕಾರಿಗಳು ಜನಕ್ಕೆ ಮತ್ತೆ--ಭಯಸ್ತನಾಗಿ ಬಳಲಿಹೋದ ಹೃದಯವುಳ್ಳ ಮನುಷ್ಯನು ಯಾವನು? ತನ್ನ ಹೃದಯದಂತೆ ತನ್ನ ಸಹೋದರರ ಹೃದಯವು ಬಳಲಿಹೋಗದ ಹಾಗೆ ಅವನು ತಿರುಗಿಕೊಂಡು ತನ್ನ ಮನೆಗೆ ಹೋಗಲಿ ಎಂದು ಹೇಳಬೇಕು.

ದ್ವಿತೀಯೋಪದೇಶಕಾಂಡ 28:68

ಇದಲ್ಲದೆ ಕರ್ತನು--ನೀನು ಇನ್ನು ಮೇಲೆ ನೋಡುವದಿಲ್ಲವೆಂದು ನಾನು ಹೇಳಿದ ಮಾರ್ಗದಿಂದ ಹಡಗುಗಳಲ್ಲಿ ನಿನ್ನನ್ನು ಐಗುಪ್ತ್ಯಕ್ಕೆ ತಿರಿಗಿ ಬರಮಾಡುವೆನು; ಅಲ್ಲಿ ದಾಸ ರಾಗಿಯೂ ದಾಸಿಗಳಾಗಿಯೂ ನಿಮ್ಮ ಶತ್ರುಗಳಿಗೆ ಮಾರಲ್ಪಡುವಿರಿ. ಆದರೆ ಕೊಂಡುಕೊಳ್ಳುವವ ನೊಬ್ಬನೂ ಇರುವದಿಲ್ಲ.

ನ್ಯಾಯಾಧಿಪತಿಗಳು 7:3

ಆದದರಿಂದ ನೀನು ಹೋಗಿ ಜನರು ಕೇಳುವ ಹಾಗೆ--ಯಾವನಿಗೆ ಭಯವೂ ಹೆದರಿ ಕೆಯೂ ಉಂಟೋ ಅವನು ತಿರಿಗಿ ತ್ವರೆಯಾಗಿ ಗಿಲ್ಯಾದ್‌ ಬೆಟ್ಟದಿಂದ ಹೋಗಲಿ ಎಂದು ಪ್ರಕಟಮಾಡು ಅಂದನು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ತಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು.

1 ಅರಸುಗಳು 8:47

ಅವರು ಸೆರೆ ಒಯ್ಯಲ್ಪಟ್ಟ ದೇಶದಲ್ಲಿ ಪಶ್ಚಾತ್ತಾಪಪಟ್ಟು ತಿರುಗಿ ಕೊಂಡು ತಾವು ಪಾಪಮಾಡಿ ವಕ್ರಬುದ್ಧಿಯಿಂದ ನಡೆದು ದ್ರೋಹಮಾಡಿದೆವೆಂದು ತಮ್ಮನ್ನು ಸೆರೆಯಾಗಿ ಒಯ್ಯುವವರ ದೇಶದಲ್ಲಿ ನಿನಗೆ ವಿಜ್ಞಾಪನೆಮಾಡಿ ಅವರನ್ನು ಸೆರೆಯಾಗಿ ಒಯ್ದ ಶತ್ರುಗಳ ದೇಶದಲ್ಲಿ ತಮ್ಮ ಪೂರ್ಣಹೃದಯದಿಂದಲೂ

ನೆಹೆಮ್ಯ 9:17

ಕೇಳದೆಯೂ ನೀನು ಅವರ ಮಧ್ಯದಲ್ಲಿ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕ ಮಾಡದೆಯೂ ತಮ್ಮ ಕುತ್ತಿಗೆಯನ್ನು ಕಠಿಣ ಮಾಡಿ ಎದುರುಬಿದ್ದು ತಮ್ಮ ದಾಸತ್ವಕ್ಕೆ ತಿರಿಗಿ ಹೋಗುವ ಹಾಗೆ ಅಧಿಪತಿಯನ್ನು ನೇಮಿಸಿದರು. ಆದರೆ ನೀನು ಮನ್ನಿಸುವ ದೇವರಾಗಿಯೂ ಕೃಪಾಪೂರ್ಣನೂ ಅಂತಃ ಕರಣವೂ ದೀರ್ಘಶಾಂತಿಯೂ ಮಹಾದಯೆಯೂ ಆಗಿರುವವನಾಗಿಯೂ ಇರುವದರಿಂದ ಅವರನ್ನು ಕೈ ಬಿಡಲಿಲ್ಲ.

ಲೂಕ 14:27

ಯಾವನಾದರೂ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನ ಹಿಂದೆಬಾರದಿದ್ದರೆ ಅವನು ನನ್ನ ಶಿಷ್ಯನಾಗಿರಲಾರನು.

ಅಪೋಸ್ತಲರ ಕೃತ್ಯಗಳು 7:39

ಆದರೆ ನಮ ಪಿತೃಗಳು ಅವನ ಮಾತುಗಳಿಗೆ ವಿಧೇಯರಾಗದೆ ಅವನನ್ನು ತಳ್ಳಿಬಿಟ್ಟು ತಮ್ಮ ಹೃದಯಗಳಲ್ಲಿ ಹಿಂದಕ್ಕೆ ಐಗುಪ್ತದ ಕಡೆಗೆ ತಿರುಗಿಕೊಂಡು

ಅಪೋಸ್ತಲರ ಕೃತ್ಯಗಳು 15:38

ಆದರೆ ಪೌಲನು ತಮ್ಮೊಂದಿಗೆ ಕೆಲಸಕ್ಕೆ ಬಾರದೆ ಪಂಫುಲ್ಯದಿಂದ ತಮ್ಮನ್ನು ಬಿಟ್ಟು ಹೋದವನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವದು ತಕ್ಕದ್ದಲ್ಲ ವೆಂದು ನೆನಸಿದನು.

Interlinear

Choose Theme