ನಿರ್ಗಮಕಾಂಡ 12:9 · ಕನ್ನಡ ಬೈಬಲ್
ಅದರಲ್ಲಿ ಯಾವದನ್ನೂ ಹಸಿಯಾದದ್ದಾಗಲಿ ನೀರಿ ನಲ್ಲಿ ಬೇಯಿಸಿದ್ದಾಗಲಿ ತಿನ್ನದೆ ಅದರ ತಲೆ ತೊಡೆ ಒಳಗಿನವುಗಳ ಸಹಿತವಾಗಿ ಬೆಂಕಿಯಲ್ಲಿ ಸುಟ್ಟೇ ಅದನ್ನು ತಿನ್ನಬೇಕು.
Cross references
ನಿರ್ಗಮಕಾಂಡ 12:8
ಆ ರಾತ್ರಿಯಲ್ಲಿಯೇ ಆ ಮಾಂಸವನ್ನು ತಿನ್ನಬೇಕು. ಬೆಂಕಿಯಲ್ಲಿ ಸುಟ್ಟು ಅದನ್ನೂ ಹುಳಿಯಿಲ್ಲದ ರೊಟ್ಟಿಗ ಳನ್ನೂ ಕಹಿಯಾದ ಪಲ್ಯಗಳ ಸಂಗಡ ತಿನ್ನಬೇಕು.
ದ್ವಿತೀಯೋಪದೇಶಕಾಂಡ 16:7
ನಿನ್ನ ದೇವರಾದ ಕರ್ತನು ಆದು ಕೊಳ್ಳುವ ಸ್ಥಳದಲ್ಲಿ ಅದನ್ನು ಬೇಯಿಸಿ ತಿನ್ನಬೇಕು; ಮರುದಿವಸದಲ್ಲಿ ತಿರುಗಿಕೊಂಡು ನಿನ್ನ ಗುಡಾರಗಳಿಗೆ ಹೋಗಬೇಕು;
2 ದಿನವೃತ್ತಾಂತ 35:13
ಹೀಗೆ ಕಟ್ಟಳೆಯ ಪ್ರಕಾರ ಪಸ್ಕವನ್ನು ಬೆಂಕಿಯಿಂದ ಬೇಯಿಸಿದರು. ಆದರೆ ಪರಿಶುದ್ಧವಾದ ವುಗಳನ್ನು ಗಡಿಗೆಗಳಲ್ಲಿಯೂ ತಪ್ಪಲೆಗಳಲ್ಲಿಯೂ ಕೊಪ್ಪರಿಗೆಗಳಲ್ಲಿಯೂ ಬೇಯಿಸಿ ಶೀಘ್ರವಾಗಿ ಜನರೆ ಲ್ಲರಿಗೆ ಕಳುಹಿಸಿದರು.
ವಿಲಾಪಗಳು 1:13
ಆತನು ಮೇಲಿನಿಂದ ನನ್ನ ಎಲುಬುಗಳಿಗೆ ಬೆಂಕಿಯನ್ನು ಕಳುಹಿಸಿ ದ್ದಾನೆ, ಅದು ಅವುಗಳನ್ನು ವಶಪಡಿಸಿಕೊಂಡಿದೆ; ನನ್ನ ಪಾದದ ಮೇಲೆ ಒಂದು ಬಲೆಯನ್ನು ಬೀಸಿ ನನ್ನನ್ನು ಹಿಂದಕ್ಕೆ ತಿರುಗಿಸಿದ್ದಾನೆ; ನನ್ನನ್ನು ದಿನವೆಲ್ಲಾ ಹಾಳಾಗಿಯೂ ಮೂರ್ಛೆ ಹೋಗುವಂತೆಯೂ ಮಾಡಿದ್ದಾನೆ.