ಮನೆಯಲ್ಲಿ ಹುಟ್ಟಿದವನಿಗೂ ನಿಮ್ಮಲ್ಲಿ ಪ್ರವಾಸಿ ಯಾಗಿರುವ ಅನ್ಯನಿಗೂ ಒಂದೇ ನ್ಯಾಯಪ್ರಮಾಣ ವಿರಬೇಕು ಎಂದು ಹೇಳಿದನು.
Cross references
ಆದರೆ ನಿಮ್ಮಲ್ಲಿ ವಾಸವಾಗಿರುವ ಪರಕೀಯನು ನಿಮ್ಮೊಳಗೆ ಹುಟ್ಟಿದವನಂತಿರಲಿ, ನೀವು ಅವನನ್ನು ನಿಮ್ಮಂತೆಯೇ ಪ್ರೀತಿಸಬೇಕು. ಯಾಕಂದರೆ ನೀವು ಐಗುಪ್ತದೇಶದಲ್ಲಿ ಪರಕೀಯರಾಗಿದ್ದಿರಿ; ನಿಮ್ಮ ದೇವರಾ ಗಿರುವ ಕರ್ತನು ನಾನೇ.
ನಿಮಗೆ ಒಂದೇ ವಿಧವಾದ ನ್ಯಾಯಪ್ರಮಾಣವಿರ ಬೇಕು. ಸ್ವದೇಶಸ್ಥನಿಗೆ ಇರುವಂತೆಯೇ ಪರಕೀಯನಿಗೂ ಇರಬೇಕು. ನಿಮ್ಮ ದೇವರಾಗಿರುವ ಕರ್ತನು ನಾನೇ.ಶಪಿಸಿದವನನ್ನು ಪಾಳೆಯದ ಹೊರಗೆ ತಂದು ಅವನನ್ನು ಕಲ್ಲೆಸೆಯುವಂತೆ ಮೋಶೆಯು ಇಸ್ರಾಯೇಲ್ ಮಕ್ಕಳೊಂದಿಗೆ ಮಾತನಾಡಿದನು. ಆಗ ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಇಸ್ರಾಯೇಲ್ ಮಕ್ಕಳು ಮಾಡಿದರು.
ಪರದೇಶಿಯಾದವನು ನಿಮ್ಮ ಸಂಗಡ ವಾಸಮಾಡಿ ಕರ್ತನಿಗೆ ಹಬ್ಬವನ್ನು ಆಚರಿಸಿದರೆ ಪಸ್ಕದ ಆಜ್ಞಾವಿಧಿಯ ಪ್ರಕಾರವಾಗಿಯೂ ನ್ಯಾಯದ ಪ್ರಕಾರವಾಗಿಯೂ ಮಾಡಬೇಕು; ನಿಮಗೂ ಪರದೇಶಸ್ತನಿಗೂ ಒಂದೇ ಕಟ್ಟಳೆ ಇರಬೇಕು ಎಂದು ಹೇಳಿದನು.
ಸಭೆಗೂ ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯ ನಿಗೂ ಒಂದೇ ಕಟ್ಟಳೆ; ಇದು ನಿಮ್ಮ ಸಂತಾನಗಳಿಗೆ ನಿತ್ಯವಾದ ಕಟ್ಟಳೆ; ಕರ್ತನ ಎದುರಿನಲ್ಲಿ ನೀವು ಇರುವ ಪ್ರಕಾರ ಪರಕೀಯನೂ ಇರಬೇಕು.
ನಿಮಗೂ ನಿಮ್ಮ ಕೂಡ ಪ್ರಯಾಣಮಾಡುವ ಪರಕೀಯನಿಗೂ ಒಂದೇ ಪ್ರಮಾಣವೂ ಒಂದೇ ನ್ಯಾಯವೂ ಇರಬೇಕು ಎಂದು ಹೇಳಿದನು.
ಇಸ್ರಾಯೇಲ್ ಮಕ್ಕಳಲ್ಲಿ ಹುಟ್ಟಿದವ ರಿಗೂ ಅವರಲ್ಲಿ ಪ್ರವಾಸಿಯಾಗಿರುವ ಪರಕೀಯನಿಗೂ ನಿಮ್ಮೆಲ್ಲರಿಗೂ ತಿಳಿಯದೆ ಪಾಪಮಾಡಿದವನಿಗೂ ಒಂದೇ ಆಜ್ಞೆ ಇರಬೇಕು.
ಕೈತಪ್ಪಿ ಪ್ರಾಣಹತ್ಯ ಮಾಡುವವರೆಲ್ಲರು ಅಲ್ಲಿಗೆ ಓಡಿಹೋಗುವದಕ್ಕೆ ಈ ಆರು ಪಟ್ಟಣಗಳು ಇಸ್ರಾಯೇಲ್ ಮಕ್ಕಳಿಗೂ ಪರಕೀಯರಿಗೂ ಅವರಲ್ಲಿ ವಾಸಮಾಡುವವರಿಗೂ ಆಶ್ರಯಕ್ಕಾಗಿ ಇರಬೇಕು.
ನೀವೆಲ್ಲರು ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವದರಿಂದ ಯೆಹೂದ್ಯನು ಗ್ರೀಕನು ಎಂದೂ ದಾಸನು ಸ್ವತಂತ್ರನು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ.ನೀವು ಕ್ರಿಸ್ತನವರಾಗಿದ್ದರೆ ಅಬ್ರಹಾಮನ ಸಂತತಿಯವರು ವಾಗ್ದಾನಕ್ಕನುಸಾರವಾಗಿ ಬಾಧ್ಯರೂ ಆಗಿದ್ದೀರಿ.
ಇದರಲ್ಲಿ ಗ್ರೀಕನು ಯೆಹೂದ್ಯನು ಎಂಬ ಭೇದವಿಲ್ಲ; ಸುನ್ನತಿ ಮಾಡಿಸಿ ಕೊಂಡವರು ಸುನ್ನತಿ ಮಾಡಿಸಿಕೊಳ್ಳದವರು ಎಂಬ ಭೇದವಿಲ್ಲ, ಮ್ಲೇಚ್ಛ ಹೂನರೆಂದಿಲ್ಲ; ದಾಸನು ಸ್ವತಂತ್ರನು ಎಂಬ ಭೇದವಿಲ್ಲ; ಆದರೆ ಕ್ರಿಸ್ತನೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾನೆ.