ಆದರೆ ಕರ್ತನು ಐಗುಪ್ತ್ಯರಿಗೂ ಇಸ್ರಾಯೇಲ್ಯರಿಗೂ ಮಧ್ಯದಲ್ಲಿಟ್ಟಿರುವ ವ್ಯತ್ಯಾಸವನ್ನು ನೀವು ತಿಳಿದುಕೊಳ್ಳುವಂತೆ ಇಸ್ರಾಯೇಲ್ ಮಕ್ಕಳೆಲ್ಲರ ಮೇಲೆ ಮನುಷ್ಯರು ಮೊದಲುಗೊಂಡು ಪಶುಗಳ ವರೆಗೆ ಒಂದು ನಾಯಿಯಾದರೂ ತನ್ನ ನಾಲಿಗೆಯನ್ನು ಅಲ್ಲಾಡಿಸುವದಿಲ್ಲ.
Cross references
ಐಗುಪ್ತದ ಮಂತ್ರಗಾರರು ತಮ್ಮ ಮಂತ್ರಗಳಿಂದ ಹಾಗೆಯೇ ಮಾಡಿದ್ದರಿಂದ ಫರೋಹನ ಹೃದಯವು ಕಠಿಣವಾಯಿತು. ಕರ್ತನು ಹೇಳಿದಂತೆಯೇ ಅವನು ಅವರ ಮಾತನ್ನು ಕೇಳಲಿಲ್ಲ.
ಆಗ ಮಂತ್ರಗಾರರು ಫರೋಹ ನಿಗೆ--ಇದು ದೇವರ ಕೈಯಾಗಿದೆ ಅಂದರು. ಆದರೆ ಕರ್ತನು ಹೇಳಿದಂತೆ ಫರೋಹನ ಹೃದಯವು ಕಠಿಣ ವಾಯಿತು; ಆದದರಿಂದ ಅವನು ಅವರ ಮಾತನ್ನು ಕೇಳಲಿಲ್ಲ.
ಆದರೆ ಆ ದಿವಸದಲ್ಲಿ ನಾನೇ ಭೂಲೋಕದಲ್ಲಿ ಕರ್ತನೆಂದು ನೀನು ತಿಳಿದುಕೊಳ್ಳುವಂತೆ ನನ್ನ ಜನರು ವಾಸಿಸುವ ಗೋಷೆನ್ ಸೀಮೆಯಲ್ಲಿ ನೊಣಗಳು ಇರದ ಹಾಗೆ ಅದನ್ನು ನಾನು ಪ್ರತ್ಯೇಕಿಸುವೆನು.
ಇದಲ್ಲದೆ ಕರ್ತನು ಇಸ್ರಾಯೇಲ್ಯರ ಪಶುಗಳನ್ನು ವಿಂಗಡಿಸುವನು; ಇಸ್ರಾಯೇಲ್ ಮಕ್ಕಳಿಗಿರುವವು ಗಳಲ್ಲಿ ಒಂದೂ ಸಾಯುವದಿಲ್ಲ.
ಮೂರು ದಿನಗಳ ವರೆಗೆ ಅವರು ಒಬ್ಬರನ್ನೊಬ್ಬರು ನೋಡಲಿಲ್ಲ, ಯಾರೂ ತಮ್ಮ ಸ್ಥಳ ವನ್ನು ಬಿಟ್ಟು ಏಳಲೂ ಇಲ್ಲ. ಆದರೆ ಇಸ್ರಾಯೇಲ್ ಮಕ್ಕಳಿಗೆಲ್ಲಾ ಅವರು ವಾಸಿಸುವ ಸ್ಥಳದಲ್ಲಿ ಅವರಿಗೆ ಬೆಳಕಿತ್ತು.
ಜನರೆಲ್ಲಾ ಮಕ್ಕೇದದಲ್ಲಿರುವ ಪಾಳೆಯಕ್ಕೆ ಯೆಹೋಶುವನ ಬಳಿಗೆ ಸಮಾಧಾನದಿಂದ ಹಿಂತಿರುಗಿ ಬಂದರು; ಇಸ್ರಾಯೇಲ್ ಮಕ್ಕಳಿಗೆ ವಿರೋಧವಾಗಿ ಒಬ್ಬನೂ ತನ್ನ ನಾಲಿಗೆಯನ್ನು ಅಲ್ಲಾಡಿಸಲಿಲ್ಲ.
ಆದದರಿಂದ ದರಿದ್ರನಿಗೆ ನಿರೀಕ್ಷೆ ಯುಂಟು; ಅಪರಾಧವು ಬಾಯಿ ಮುಚ್ಚುವದು.
ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
ನಿನಗೂ ಇತರರಿಗೂ ತಾರತಮ್ಯ ಮಾಡಿ ದವರು ಯಾರು? ನೀನು ಹೊಂದದೆ ಇರುವಂಥದ್ದು ನಿನ್ನಲ್ಲಿ ಯಾವದು ಇದೆ? ಹೊಂದಿದ ಮೇಲೆ ಹೊಂದದವನಂತೆ ನೀನು ಯಾಕೆ ಹಿಗ್ಗಿಕೊಳ್ಳುತ್ತೀ?