ತರುವಾಯ ಕರ್ತನು ಮೋಶೆಗೆ-- ಫರೋಹನ ಬಳಿಗೆ ಹೋಗು. ನಾನು ನನ್ನ ಸೂಚಕಕಾರ್ಯಗಳನ್ನು ಅವನ ಮುಂದೆ ತೋರಿಸು ವದಕ್ಕಾಗಿ ಅವನ ಹೃದಯವನ್ನೂ ಅವನ ಸೇವಕರ ಹೃದಯಗಳನ್ನೂ ಕಠಿಣಮಾಡಿದ್ದೇನೆ.
Cross references
ಹೀಗಿರುವದರಿಂದ ನನ್ನ ಕೈಯನ್ನು ಚಾಚಿ ನಾನು ಅದರೊಳಗೆ ಮಾಡುವ ಎಲ್ಲಾ ಅದ್ಭುತಗಳಿಂದ ಐಗುಪ್ತವನ್ನು ಹೊಡೆಯುವೆನು. ತರು ವಾಯ ಅವನು ನಿಮ್ಮನ್ನು ಕಳುಹಿಸಿಬಿಡುವನು.
ಆಗ ಕರ್ತನು ಮೋಶೆಗೆ--ನೀನು ಐಗುಪ್ತದೇಶಕ್ಕೆ ಹಿಂತಿರುಗಿ ಹೋಗು ವಾಗ ನಾನು ನಿನ್ನ ಕೈಯಿಂದ ಮಾಡಿಸಿದ ಎಲ್ಲಾ ಸೂಚಕ ಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವದಿಲ್ಲ.
ಆದರೆ ಫರೋಹನು ನಿಮ್ಮ ಮಾತನ್ನು ಕೇಳುವದಿಲ್ಲ; ಆದಾಗ್ಯೂ ನನ್ನ ಕೈಯನ್ನು ಐಗುಪ್ತದ ಮೇಲೆ ಇಟ್ಟು ದೊಡ್ಡ ನ್ಯಾಯತೀರ್ಪು ಗಳಿಂದ ನನ್ನ ಜನರಾದ ಇಸ್ರಾಯೇಲ್ ಸೈನ್ಯವನ್ನೆಲ್ಲಾ ಐಗುಪ್ತದೇಶದೊಳಗಿಂದ ಹೊರಗೆ ಬರಮಾಡುವೆನು.
ಕರ್ತನು ಹೇಳಿದಂತೆಯೇ ಫರೋಹನ ಹೃದಯವು ಆಗ ಕಠಿಣವಾಯಿತು; ಅವನು ಅವರ ಮಾತನ್ನು ಕೇಳಲಿಲ್ಲ.
ಆಗ ಕರ್ತನು ಮೋಶೆಗೆ--ಫರೋಹನ ಹೃದಯವು ಕಠಿಣವಾಯಿತು. ಅವನು ಜನರನ್ನು ಕಳುಹಿಸಿಬಿಡುವದಕ್ಕೆ ನಿರಾಕರಿಸಿದನು.
ಆದರೆ ನಿಶ್ಚಯವಾಗಿ ನನ್ನ ಬಲವನ್ನು ನಿನಗೆ ತೋರಿಸುವ ಹಾಗೆಯೂ ನನ್ನ ಹೆಸರು ಭೂಲೋಕದಲ್ಲೆಲ್ಲಾ ತಿಳಿಸಲ್ಪಡುವಂತೆಯೂ ನಿನ್ನನ್ನು ಎಬ್ಬಿಸಿದ್ದೇನೆ.
ಆಗ ಫರೋಹನು ಮೋಶೆ ಆರೋನರನ್ನು ಕರೇ ಕಳುಹಿಸಿ ಅವರಿಗೆ--ಈ ಸಾರಿ ನಾನು ಪಾಪಮಾಡಿ ದ್ದೇನೆ. ಕರ್ತನು ನೀತಿವಂತನು, ನಾನೂ ನನ್ನ ಜನರೂ ದುಷ್ಟರಾಗಿದ್ದೇವೆ.
ಆನೆಕಲ್ಲಿನ ಮಳೆಯೂ ಗುಡುಗುಗಳೂ ನಿಂತುಹೋದದ್ದನ್ನು ಫರೋಹನು ನೋಡಿ ಅವನು ಇನ್ನೂ ಪಾಪಮಾಡಿ ತನ್ನ ಸೇವಕರ ಸಹಿತವಾಗಿ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು.ಫರೋಹನ ಹೃದಯವು ಕಠಿಣ ವಾಯಿತು; ಕರ್ತನು ಮೋಶೆಗೆ ಹೇಳಿದಂತೆ ಅವನು ಇಸ್ರಾಯೇಲ್ ಮಕ್ಕಳನ್ನು ಕಳುಹಿಸಲೇ ಇಲ್ಲ.
ಆದರೆ ಕರ್ತನು ಫರೋಹನ ಹೃದಯವನ್ನು ಕಠಿಣಮಾಡಿದ್ದರಿಂದ ಅವನು ಇಸ್ರಾಯೇಲ್ ಮಕ್ಕಳನ್ನು ಕಳುಹಿಸದೆ ಹೋದನು.
ಇಗೋ, ನಾನು ಐಗುಪ್ತ್ಯರ ಹೃದಯವನ್ನು ಕಠಿಣಮಾಡುತ್ತೇನೆ; ಅವರು ಇವರನ್ನು ಹಿಂದಟ್ಟುವರು. ಇದಲ್ಲದೆ ಫರೋಹನ ಮೇಲೆಯೂ ಅವನ ಎಲ್ಲಾ ಸೈನ್ಯದ ಮೇಲೆಯೂ ಅವನ ರಥಗಳ ಮೇಲೆಯೂ ಕುದುರೆಯ ಸವಾರರ ಮೇಲೆಯೂ ನನ್ನನ್ನು ಘನಪಡಿಸಿಕೊಳ್ಳುವೆನು.
ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.
ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.
ಭೂಮಿಯ ಜನರೆಲ್ಲಾ ಕರ್ತನ ಹಸ್ತವು ಬಲವುಳ್ಳದ್ದೆಂದು ತಿಳಿಯುವ ಹಾಗೆಯೂ ನೀವು ನಿರಂತರವೂ ನಿಮ್ಮ ಕರ್ತನಾದ ದೇವರಿಗೆ ಭಯಪಡುವ ಹಾಗೆಯೂನಿಮ್ಮ ದೇವರಾದ ಕರ್ತನು ಕೆಂಪು ಸಮುದ್ರವನ್ನು ನಾವು ದಾಟುವ ಪರಿಯಂತರ ನಮ್ಮ ಮುಂದೆ ಒಣಗಿ ಹೋಗಮಾಡಿದ ಹಾಗೆ ನೀವು ದಾಟಿ ಬರುವ ಪರಿಯಂತರ ದೇವರಾದ ಕರ್ತನು ಯೊರ್ದನಿನ ನೀರನ್ನು ಭಾಗ ಮಾಡಿದನು.
ನಮಗೆ ಅಯ್ಯೋ! ಆ ಪರಾಕ್ರಮಿಯಾದ ದೇವರುಗಳ ಕೈಯಿಂದ ನಮ್ಮನ್ನು ತಪ್ಪಿಸುವವನಾರು ಐಗುಪ್ತ್ಯರನ್ನು ಅರಣ್ಯದಲ್ಲಿ ಸಕಲ ಬಾಧೆಗಳಿಂದ ಹೊಡೆದ ದೇವರುಗಳು ಇವರೇ.
ದೇವರು ನೀತಿವಂತರಿಗೆ ನ್ಯಾಯತೀರಿಸುತ್ತಾನೆ. ದೇವರು ಪ್ರತಿದಿನ ದುಷ್ಟರ ಮೇಲೆ ರೋಷವುಳ್ಳ ವನಾಗಿದ್ದಾನೆ.
ಬರಹವು ಫರೋ ಹನಿಗೆ--ನನ್ನ ಬಲವನ್ನು ನಿನ್ನಲ್ಲಿ ತೋರಿಸುವ ಹಾಗೆಯೂ ನನ್ನ ನಾಮವು ಭೂಮಿಯ ಎಲ್ಲಾ ಕಡೆಯಲ್ಲಿ ಪ್ರಸಿದ್ಧಿ ಹೊಂದಬೇಕೆಂಬ ಉದ್ದೇಶದಿಂದಲೂ ನಾನು ನಿನ್ನನ್ನು ಉನ್ನತ ಸ್ಥಿತಿಗೆ ತಂದಿದ್ದೇನೆ ಎಂದು ಹೇಳುತ್ತದೆ.