Home Bibles ☰ Books ನಿರ್ಗಮಕಾಂಡ 1:10 · ಕನ್ನಡ ಬೈಬಲ್
ನಿರ್ಗಮಕಾಂಡ 1:10 · ಕನ್ನಡ ಬೈಬಲ್

ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು.

Cross references

ಅಂಕೆಗಳ ಪುಸ್ತಕ 22:6

ಈಗ ನೀನು ದಯಮಾಡಿ ಬಂದು ಈ ಜನವನ್ನು ನನಗಾಗಿ ಶಪಿಸು; ಅವರು ನನಗಿಂತ ಬಲಿಷ್ಠರಾಗಿದ್ದಾರೆ. ಒಂದು ವೇಳೆ ನಾನು ಗೆದ್ದೇನು, ನಾವು ಅವರನ್ನು ಹೊಡೆದೇವು; ನಾನು ಅವರನ್ನು ದೇಶದೊಳಗಿಂದ ಹೊರಡಿಸೇನು; ನೀನು ಯಾವನನ್ನು ಆಶೀರ್ವದಿಸು ತ್ತೀಯೋ ಅವನು ಆಶೀರ್ವದಿಸಲ್ಪಟ್ಟವನೇ; ನೀನು ಯಾವನನ್ನು ಶಪಿಸುತ್ತೀಯೋ ಅವನು ಶಪಿಸಲ್ಪಟ್ಟವನೇ ಎಂದು ನಾನು ಬಲ್ಲೆನು.

1 ಸಮುವೇಲ 29:4

ಆದರೆ ಫಿಲಿಷ್ಟಿಯರ ಅಧಿಪತಿಗಳು ಅವನ ಮೇಲೆ ರೌದ್ರವಾಗಿ ಅವನಿಗೆ--ಇವನು ಯುದ್ಧದಲ್ಲಿ ನಮಗೆ ಶತ್ರುವಾಗಿರದ ಹಾಗೆ ಯುದ್ಧಕ್ಕೆ ನಮ್ಮ ಸಂಗಡ ಇವನನ್ನು ಬರಗೊಡದೆ ನೀನು ಅವನಿಗೆ ನೇಮಿಸಿದ ತನ್ನ ಸ್ಥಳಕ್ಕೆ ತಿರಿಗಿ ಹೋಗುವ ಹಾಗೆ ಅವನನ್ನು ಕಳುಹಿಸಿಬಿಡು. ಇವನು ಯಾತರಿಂದ ತನ್ನ ದೊರೆಗೆ ತನ್ನನ್ನು ಇಷ್ಟನಾಗ ಮಾಡಿಕೊಳ್ಳುವನು. ಅದು ಈ ಮನುಷ್ಯರ ತಲೆಗಳಿಂದಲ್ಲವೇ?

ಯೋಬ 5:13

ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು.

ಕೀರ್ತನೆಗಳು 10:2

ದುಷ್ಟರು ಗರ್ವ ದಿಂದ ದೀನನನ್ನು ಹಿಂಸಿಸುತ್ತಾರೆ; ಅವರು ಕಲ್ಪಿಸಿದ ಯುಕ್ತಿಗಳಲ್ಲಿ ತಾವೇ ಹಿಡಿಯಲ್ಪಡಲಿ.

ಕೀರ್ತನೆಗಳು 83:3

ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ.

ಕೀರ್ತನೆಗಳು 105:25

ಆತನು ಆ ದೇಶದವರ ಹೃದಯವನ್ನು ಮಾರ್ಪ ಡಿಸಿದ್ದರಿಂದ ಅವರು ಆತನ ಜನರನ್ನು ದ್ವೇಷಿಸಿ ಆತನ ಸೇವಕರನ್ನು ಕುಯುಕ್ತಿಯಿಂದ ನಡಿಸಿದರು.

ಸಾಮೇತಿಗಳು 1:11

ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.

ಸಾಮೇತಿಗಳು 16:25

ಮನುಷ್ಯರಿಗೆ ಸರಿಯಾಗಿ ತೋರುವ ಒಂದು ಮಾರ್ಗ ಉಂಟು; ಅದರ ಅಂತ್ಯವು ಮರಣದ ಮಾರ್ಗವೇ.

ಸಾಮೇತಿಗಳು 21:30

ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.

ಅಪೋಸ್ತಲರ ಕೃತ್ಯಗಳು 7:19

ಈ ಅರಸನೇ ನಮ್ಮ ಜನರಲ್ಲಿ ಕುಯುಕ್ತಿ ಮಾಡಿ ಅವರ ಕೂಸುಗಳನ್ನು ಜೀವದಿಂದುಳಿಸಬಾರದೆಂದು ಹೊರಗೆ ಹಾಕಿಸಿ ನಮ್ಮ ಪಿತೃಗಳನ್ನು ಕ್ರೂರವಾಗಿ ನಡಿಸಿದನು.

ಅಪೋಸ್ತಲರ ಕೃತ್ಯಗಳು 23:12

ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು.

1 ಕೊರಿಂಥದವರಿಗೆ 3:18

ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.

Interlinear

Choose Theme