ಮೊರ್ದೆಕೈಯು ಈ ವರ್ತಮಾನಗಳನ್ನು ಬರೆದು ಅಹಷ್ವೇರೋಷನ ಸಕಲ ಪ್ರಾಂತ್ಯಗಳಲ್ಲಿ ಸವಿಾಪ ವಾಗಿಯೂ ದೂರವಾಗಿಯೂ ಇರುವ ಸಕಲ ಯೆಹೂ ದ್ಯರಿಗೆ ಪತ್ರಗಳನ್ನು ಕಳುಹಿಸಿದನು.
Cross references
ಅರಸ ನಾದ ದಾರ್ಯಾವೆಷನ ಆಳಿಕೆಯ ಆರನೇ ವರುಷದ ಅಡಾರ್ ತಿಂಗಳ ಮೂರನೇ ದಿವಸದಲ್ಲಿ ಈ ಆಲಯವು ಕಟ್ಟಿ ತೀರಿಸಲ್ಪಟ್ಟಿತು.
ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು.
ಅಡಾರ್ ತಿಂಗಳ ಹದಿಮೂರನೇ ದಿವಸ ಇದು ಆಯಿತು. ಅದರ ಹದಿನಾಲ್ಕನೇ ದಿವಸದಲ್ಲಿ ಅವರು ವಿಶ್ರಾಂತಿಯಾಗಿದ್ದು ಅದನ್ನು ಹಬ್ಬದ ಸಂತೋಷದ ದಿವಸವಾಗಿ ಮಾಡಿದರು.
ಆದರೆ ಶೂಷನಿನಲ್ಲಿರುವ ಯೆಹೂದ್ಯರು ಅದರ ಹದಿಮೂರನೇ ದಿವಸದಲ್ಲಿಯೂ ಹದಿನಾಲ್ಕನೇ ದಿವಸದಲ್ಲಿಯೂ ಕೂಡಿಕೊಂಡರು. ಅದರ ಹದಿನೈದನೇ ದಿವಸದಲ್ಲಿ ಅವರು ವಿಶ್ರಾಂತಿ ಯಾಗಿದ್ದು ಅದನ್ನು ಹಬ್ಬದ ಸಂತೋಷದ ದಿವಸವಾಗಿ ಮಾಡಿದರು;
ಆದದರಿಂದ ಈ ಪತ್ರದ ಸಮಸ್ತ ವಾರ್ತೆಗಳಿಗೋಸ್ಕರವೂ ಅವರು ಈ ಕಾರ್ಯ ವನ್ನು ಕುರಿತು ನೋಡಿದ್ದಕ್ಕೋಸ್ಕರವೂ ತಮಗೆ ಸಂಭ ವಿಸಿದ್ದಕ್ಕೊಸ್ಕರವೂ ಯೆಹೂದ್ಯರು, ತಾವೂ ತಮ್ಮ ಸಂತಾನದವರೂ ತಮಗೆ ಸೇರಿದವರೆಲ್ಲರೂ ತಪ್ಪದೇ ಪ್ರತಿ ವರುಷ ನೇಮಕದ ಕಾಲದಲ್ಲಿ ಬರೆದಿರುವ ಪ್ರಕಾರ ಈ ಎರಡು ದಿವಸಗಳನ್ನು ಆಚರಿಸಲು ಒಪ್ಪಿ ಕೊಂಡು ಸ್ಥಿರಮಾಡಿದರು.