Home Bibles ಎಸ್ತೇರ್ 9:19 · ಕನ್ನಡ ಬೈಬಲ್
ಎಸ್ತೇರ್ 9:19 · ಕನ್ನಡ ಬೈಬಲ್

ಆದಕಾರಣ ಗ್ರಾಮಗಳಲ್ಲಿಯೂ ಬೈಲು ಪ್ರಾಂತ್ಯಗಳ ಪಟ್ಟಣಗಳಲ್ಲಿಯೂ ವಾಸವಾಗಿ ರುವ ಯೆಹೂದ್ಯರು ಅಡಾರ್‌ ತಿಂಗಳ ಹದಿನಾಲ್ಕನೇ ದಿವಸವನ್ನು ಸಂತೋಷದ ದಿವಸವಾಗಿಯೂ ಹಬ್ಬದ ದಿವಸವಾಗಿಯೂ ಸುದಿನವಾಗಿಯೂ ಒಬ್ಬರಿಗೊಬ್ಬರು ಭಾಗಗಳನ್ನು ಕಳುಹಿಸುವ ದಿವಸವಾಗಿಯೂ ಮಾಡಿದರು.

Cross references

ದ್ವಿತೀಯೋಪದೇಶಕಾಂಡ 3:5

ಆ ಪಟ್ಟಣಗಳೆಲ್ಲಾ ಎತ್ತರವಾದ ಗೋಡೆಬಾಗಲು ಅಗುಳಿಗಳಿಂದ ಭದ್ರವಾಗಿದ್ದವು; ಅವುಗಳಲ್ಲದೆ ಬೈಲು ಸೀಮೆಯ ಪಟ್ಟಣಗಳು ಬಹಳ ಇದ್ದವು.

ದ್ವಿತೀಯೋಪದೇಶಕಾಂಡ 15:7

ನಿನ್ನ ದೇವರಾದ ಕರ್ತನು ನಿನಗೆ ಕೊಡುವ ನಿನ್ನ ದೇಶದಲ್ಲಿ ನಿನ್ನ ಬಾಗಲುಗಳ ಒಂದರಲ್ಲಿ ನಿನ್ನ ಸಹೋದರರಲ್ಲಿ ಒಬ್ಬನಾಗಿರುವ ಬಡವನು ನಿನ್ನಲ್ಲಿದ್ದರೆ ನಿನ್ನ ಹೃದಯವನ್ನು ಕಠಿಣಮಾಡಿಕೊಳ್ಳಬೇಡ. ನಿನ್ನ ಕೈಯನ್ನು ನಿನ್ನ ಬಡ ಸಹೋದರನಿಗೆ ಮುಚ್ಚಿಕೊಳ್ಳ ಬೇಡ.

ದ್ವಿತೀಯೋಪದೇಶಕಾಂಡ 16:11

ಆಗ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಬಾಗಲು ಗಳಲ್ಲಿರುವ ಲೇವಿಯನೂ ನಿನ್ನ ಮಧ್ಯದಲ್ಲಿರುವ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ನಿನ್ನ ದೇವರಾದ ಕರ್ತನು ತನ್ನ ಹೆಸರನ್ನು ಸ್ಥಾಪಿಸುವದಕ್ಕೆ ಆದುಕೊಳ್ಳುವ ಸ್ಥಳದಲ್ಲಿ ನಿನ್ನ ದೇವರಾದ ಕರ್ತನ ಮುಂದೆ ಸಂತೋಷ ಪಡಬೇಕು.

ದ್ವಿತೀಯೋಪದೇಶಕಾಂಡ 16:14

ಆ ಹಬ್ಬದಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ನಿನ್ನ ಬಾಗಲುಗಳಲ್ಲಿರುವ ಲೇವಿಯನೂ ಅನ್ಯನೂ ದಿಕ್ಕಿಲ್ಲದವನೂ ವಿಧವೆಯೂ ಸಂತೋಷಪಡಬೇಕು.

ನೆಹೆಮ್ಯ 8:10

ಇದಲ್ಲದೆ ಅವನು ಅವರಿಗೆ--ನೀವು ಹೋಗಿ ಕೊಬ್ಬಿದ್ದನ್ನು ತಿಂದು ಸಿಹಿ ಯಾದದ್ದನ್ನು ಕುಡಿದು ಯಾರಿಗೆ ಸಿದ್ಧಮಾಡಿದ್ದು ಏನೂ ಇಲ್ಲವೋ ಅವರಿಗೆ ಭಾಗಗಳನ್ನು ಕಳುಹಿಸಿ ಕೊಡಿರಿ. ಯಾಕಂದರೆ ಈ ದಿನವು ನಮ್ಮ ಕರ್ತನಿಗೆ ಪರಿಶುದ್ಧ ವಾಗಿದೆ. ಕರ್ತನ ಆನಂದವು ನಿಮ್ಮ ಬಲವಾಗಿರು ವದರಿಂದ ನೀವು ವ್ಯಥೆಪಡಬೇಡಿರಿ.

ಎಸ್ತೇರ್ 8:17

ಪ್ರತಿ ಪ್ರಾಂತ್ಯದಲ್ಲಿಯೂ ಪ್ರತಿ ಪಟ್ಟಣ ದಲ್ಲಿಯೂ ಅರಸನ ಮಾತೂ ಅವನ ಆಜ್ಞೆಯೂ ಎಲ್ಲಿಗೆ ಬಂತೋ ಅಲ್ಲಿ ಯೆಹೂದ್ಯರಿಗೆ ಸಂತೋಷವೂ ಆನಂದವೂ ಹಬ್ಬವೂ ಸುದಿನವೂ ಉಂಟಾಗಿದ್ದವು. ಇದಲ್ಲದೆ ಆ ದೇಶದ ಅನೇಕ ಜನರು ಯೆಹೂದ್ಯ ರಾದರು. ಯಾಕಂದರೆ ಯೆಹೂದ್ಯರ ಭಯವು ಅವರ ಮೇಲೆ ಇತ್ತು.

ಎಸ್ತೇರ್ 9:22

ಏನಂದರೆ, ಆ ದಿವಸಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಂದ ತಪ್ಪಿಸಿಕೊಂಡು ವಿಶ್ರಾಂತಿ ಹೊಂದಿದರು. ಆ ತಿಂಗಳು ದುಃಖದಿಂದ ಸಂತೋಷಕ್ಕೂ ಗೋಳಾಡುವಿಕೆಯಿಂದ ಸುದಿನಕ್ಕೂ ಅವರಿಗೆ ಬದಲಾಯಿತು. ಆದದರಿಂದ ಅವರು ಆ ದಿವಸಗಳನ್ನು ಹಬ್ಬದ ದಿವಸಗಳಾಗಿಯೂ ಸಂತೋಷದ ದಿವಸಗಳಾಗಿಯೂ ಒಬ್ಬರಿಗೊಬ್ಬರು ಭಾಗಗಳನ್ನು ಕಳುಹಿಸುವ ದಿವಸಗಳಾಗಿಯೂ ಬಡವ ರಿಗೆ ದಾನಗಳನ್ನು ಕೊಡುವ ದಿವಸಗಳಾಗಿಯೂ ಮಾಡಬೇಕು ಎಂಬದು.

ಕೀರ್ತನೆಗಳು 118:11

ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.

ಜೆಕರ್ಯ 2:4

ಇವನು ಅವನಿಗೆ ಹೀಗಂದನು--ಓಡಿಹೋಗಿ ಈ ಯೌವನಸ್ಥನಿಗೆ ಹೀಗೆ ಹೇಳು, ಏನಂದರೆ--ಯೆರೂಸಲೇಮು ಅದರಲ್ಲಿರುವ ಮನು ಷ್ಯರ ಮತ್ತು ದನಗಳ ಸಂಖ್ಯೆ ಹೆಚ್ಚಾದದ್ದರಿಂದ ಗೋಡೆ ಇಲ್ಲದ ಊರುಗಳಂತೆ ನಿವಾಸವಾಗುವದು.

ಲೂಕ 11:41

ಆದರೆ ನಿಮಗೆ ಇರುವವುಗಳಲ್ಲಿ ನೀವು ದಾನಾಕೊಡಿರಿ; ಆಗ ಇಗೋ, ನಿಮಗೆ ಎಲ್ಲವು ಗಳು ಶುದ್ಧವಾಗಿರುವವು.

ಪ್ರಕಟನೆ 11:10

ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು.

Interlinear

Choose Theme