Home Bibles ಎಸ್ತೇರ್ 2:18 · ಕನ್ನಡ ಬೈಬಲ್
ಎಸ್ತೇರ್ 2:18 · ಕನ್ನಡ ಬೈಬಲ್

ಆಗ ಅರಸನು ತನ್ನ ಸಮಸ್ತ ಪ್ರಧಾನರಿಗೂ ಸೇವಕರಿಗೂ ಎಸ್ತೇರಳ ಔತಣವೆಂದು ದೊಡ್ಡ ಔತಣವನ್ನು ಮಾಡಿಸಿ ಪ್ರಾಂತ್ಯ ಗಳಿಗೆ ಬಿಡುಗಡೆಯನ್ನು ಕೊಟ್ಟು ಅರಸನ ಸ್ಥಿತಿಗೆ ತಕ್ಕಂಥ ಬಹುಮಾನಗಳನ್ನು ಕೊಟ್ಟನು.

Cross references

ಆದಿಕಾಂಡ 29:22

ಆಗ ಲಾಬಾನನು ಆ ಸ್ಥಳದ ಮನುಷ್ಯರನ್ನೆಲ್ಲಾ ಕೂಡಿಸಿ ಔತಣವನ್ನು ಮಾಡಿಸಿದನು.

ನ್ಯಾಯಾಧಿಪತಿಗಳು 14:10

ಅವನ ತಂದೆಯು ಆ ಸ್ತ್ರೀ ಇರುವ ಸ್ಥಳಕ್ಕೆ ಬಂದಾಗ ಯೌವನಸ್ಥರು ಮಾಡುವ ಮರ್ಯಾದೆಯ ಹಾಗೆ, ಸಂಸೋನನು ಅಲ್ಲಿ ಔತಣಮಾಡಿಸಿದನು.

1 ಸಮುವೇಲ 25:8

ನಿನ್ನ ಯೌವನಸ್ಥರನ್ನು ಕೇಳು, ಅವರೇ ನಿನಗೆ ಹೇಳುವರು. ಆದದರಿಂದ ಈಗ ಈ ಯುವಕರಿಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ; ಒಳ್ಳೇ ದಿವಸದಲ್ಲಿ ನಾವು ಬಂದೆವು. ನಿನ್ನ ಕೈಯಲ್ಲಿ ದೊರಕುವದನ್ನು ನಿನ್ನ ಸೇವಕರಿಗೂ ನಿನ್ನ ಕುಮಾರನಾದ ದಾವೀದನಿಗೂ ದಯಪಾಲಿಸು ಅಂದನು.

ನೆಹೆಮ್ಯ 8:11

ಹೀಗೆಯೇ ಲೇವಿಯರು--ಈ ದಿನವು ಪರಿಶುದ್ಧವಾದದರಿಂದ ನೀವು ಮೌನವಾಗಿದ್ದು ವ್ಯಥೆಪಡಬೇಡಿರೆಂದು ಹೇಳಿ ಜನರನ್ನು ಸುಮ್ಮನಿರಿಸಿದರು.

ಎಸ್ತೇರ್ 1:3

ತನ್ನ ಆಳಿಕೆಯ ಮೂರನೇ ವರುಷ ದಲ್ಲಿ ಅವನು ತನ್ನ ಸಮಸ್ತ ಪ್ರಧಾನರಿಗೂ ಸೇವಕ ರಿಗೂ ಔತಣವನ್ನು ಮಾಡಿಸಿದನು. ಪಾರಸಿಯ, ಮೇದ್ಯರ ಬಲವಾದ ಸೈನ್ಯವೂ ಪ್ರಾಂತ್ಯಗಳ ಶ್ರೇಷ್ಠರೂ ಪ್ರಧಾನರೂ ಅವನ ಬಳಿಯಲ್ಲಿದ್ದರು.

ಎಸ್ತೇರ್ 1:7

ಅರಸನ ಸ್ಥಿತಿಗೆ ತಕ್ಕಂತೆ ರಾಜರ ದ್ರಾಕ್ಷಾರಸ ವನ್ನು ನಾನಾವಿಧವಾದ ಬಂಗಾರದ ಪಾತ್ರೆಗಳಲ್ಲಿ ಸಮೃದ್ಧಿಯಾಗಿ ಕುಡಿಯಲು ಕೊಟ್ಟರು.

ಎಸ್ತೇರ್ 9:22

ಏನಂದರೆ, ಆ ದಿವಸಗಳಲ್ಲಿ ಯೆಹೂದ್ಯರು ತಮ್ಮ ಶತ್ರುಗಳಿಂದ ತಪ್ಪಿಸಿಕೊಂಡು ವಿಶ್ರಾಂತಿ ಹೊಂದಿದರು. ಆ ತಿಂಗಳು ದುಃಖದಿಂದ ಸಂತೋಷಕ್ಕೂ ಗೋಳಾಡುವಿಕೆಯಿಂದ ಸುದಿನಕ್ಕೂ ಅವರಿಗೆ ಬದಲಾಯಿತು. ಆದದರಿಂದ ಅವರು ಆ ದಿವಸಗಳನ್ನು ಹಬ್ಬದ ದಿವಸಗಳಾಗಿಯೂ ಸಂತೋಷದ ದಿವಸಗಳಾಗಿಯೂ ಒಬ್ಬರಿಗೊಬ್ಬರು ಭಾಗಗಳನ್ನು ಕಳುಹಿಸುವ ದಿವಸಗಳಾಗಿಯೂ ಬಡವ ರಿಗೆ ದಾನಗಳನ್ನು ಕೊಡುವ ದಿವಸಗಳಾಗಿಯೂ ಮಾಡಬೇಕು ಎಂಬದು.

ಪರಮಗೀತ 3:11

ಚೀಯೋನಿನ ಕುಮಾರ್ತೆಯರೇ, ನೀವು ಹೊರಟು ಹೋಗಿ ಅವನ ಮದುವೆಯ ದಿವಸದಲ್ಲಿಯೂ ಹೃದ ಯದ ಸಂತೋಷದ ದಿವಸದಲ್ಲಿಯೂ ತನ್ನ ತಾಯಿ ತನಗೆ ಧರಿಸಿದ ಕಿರೀಟ ಇರುವ ಅರಸನಾದ ಸೊಲೊ ಮೋನನನ್ನು ನೋಡಿರಿ.

ಪರಮಗೀತ 5:1

ನನ್ನ ತೋಟಕ್ಕೆ ಬಂದೆನು, ನನ್ನ ಸಹೋದರಿಯೇ, ವಧುವೇ; ನನ್ನ ರಕ್ತಬೋಳ ವನ್ನೂ ನನ್ನ ಸುಗಂಧಗಳನ್ನೂ ಕೂಡಿಸಿದ್ದೇನೆ; ನನ್ನ ಜೇನು ಗೂಡನ್ನೂ ಜೇನು ತುಪ್ಪವನ್ನೂ ತಿಂದಿದ್ದೇನೆ; ನನ್ನ ದ್ರಾಕ್ಷಾರಸವನ್ನೂ ನನ್ನ ಹಾಲನ್ನೂ ಕುಡಿದಿದ್ದೇನೆ. ತಿನ್ನಿರಿ, ಓ ಸ್ನೇಹಿತರೇ; ಕುಡಿಯಿರಿ. ಹೌದು, ನನ್ನ ಪ್ರಿಯರೇ, ಸಮೃದ್ಧಿಯಾಗಿ ಕುಡಿಯಿರಿ.

ಮತ್ತಾಯ 22:2

ಪರಲೋಕ ರಾಜ್ಯವು ತನ್ನ ಮಗನ ಮದುವೆ ಮಾಡಿದ ಒಬ್ಬಾನೊಬ್ಬ ಅರಸನಿಗೆ ಹೋಲಿಕೆಯಾಗಿದೆ.

ಲೂಕ 14:8

ಯಾವನಾದರೂ ನಿನ್ನನ್ನು ಮದುವೆಗೆ ಕರೆದರೆ ಉನ್ನತ ಸ್ಥಳದಲ್ಲಿ ಕೂತುಕೊಳ್ಳಬೇಡ; ಯಾಕಂದರೆ ಅವನು ನಿನಗಿಂತಲೂ ಗೌರವವುಳ್ಳ ಮನುಷ್ಯನನ್ನು ಕರೆದಿರ ಬಹುದು;

ಪ್ರಕಟನೆ 11:10

ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು.

ಪ್ರಕಟನೆ 19:9

ಇದಲ್ಲದೆ ಅವನು--ಕುರಿಮರಿ ಯಾದಾತನ ವಿವಾಹದ ಔತಣಕ್ಕೆ ಕರೆಯಲ್ಪಟ್ಟವರು ಧನ್ಯರು ಎಂಬದಾಗಿ ಬರೆ ಎಂದು ನನಗೆ ಹೇಳಿದನು. ಇದಲ್ಲದೆ ಅವನು--ಇವುಗಳು ದೇವರ ನಿಜವಾದ ಮಾತುಗಳಾಗಿವೆ ಎಂದು ನನಗೆ ಹೇಳಿದನು.

Interlinear

Choose Theme