ಅವಳು ಸಾಯಂಕಾಲದಲ್ಲಿ ಪ್ರವೇಶಿಸಿ ಮಾರನೆ ದಿವಸದಲ್ಲಿ ಉಪಪತ್ನಿಗಳ ಕಾವಲಿನವನಾದಂಥ ಅರಸನ ಅಧಿಕಾರಿ ಯಾದಂಥ ಶವಷ್ಗಜನ ಕೈಗೆ ಸ್ತ್ರೀಯರ ಎರಡನೇ ಮನೆಗೆ ತಿರುಗುವಳು. ಅರಸನು ಯಾರಲ್ಲಿ ಸಂತೋಷಪಟ್ಟು ಅವಳನ್ನು ಹೆಸರಿನಿಂದ ಕರೆದರೆ ಹೊರತು ಅವಳು ಇನ್ನು ಮೇಲೆ ಅರಸನ ಬಳಿಯಲ್ಲಿ ಪ್ರವೇಶಿಸದೆ ಇರುವಳು.
Cross references
ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿದ್ದರಿಂದ ಆ ಕಾರ್ಯವನ್ನು ಮಾಡು ವದಕ್ಕೆ ಹಿಂಜರಿಯಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.
ಆದರೆ ನೀನು ಅವಳನ್ನು ಮೆಚ್ಚದೆ ಹೋದರೆ ಅವಳನ್ನು ಅವಳ ಮನಸ್ಸಿದ್ದಲ್ಲಿಗೆ ಕಳುಹಿಸಿಬಿಡಬೇಕು; ಹೇಗಾದರೂ ಹಣಕ್ಕೆ ಮಾರಲೇಬಾರದು; ನೀನು ಅವಳನ್ನು ತಗ್ಗಿಸಿದ್ದರಿಂದ ಅವಳನ್ನು ದಾಸಿಯ ಹಾಗೆ ನಡಿಸಬಾರದು.
ಕರಿಸಲ್ಪಡದೆ ಅರಸನ ಬಳಿಗೆ ಒಳಮನೆಯಲ್ಲಿ ಪ್ರವೇಶಿಸುವ ಯಾವನಾದರೂ ಗಂಡಸಾದರೂ ಸರಿ ಹೆಂಗಸಾದರೂ ಸರಿ ಬದುಕುವ ಹಾಗೆ ಅರಸನು ಬಂಗಾರದ ಮುದ್ರೆ ಕೋಲನ್ನು ಅವನ ಬಳಿಗೆ ಚಾಚಿ ದರೆ ಹೊರತು ಅವನನ್ನು ಕೊಲ್ಲಬೇಕೆಂಬ ಅವನ ಆಜ್ಞೆ ಒಂದೇ ಉಂಟೆಂದು ಅರಸನ ಸಮಸ್ತ ಸೇವ ಕರೂ ಅರಸನ ಪ್ರಾಂತ್ಯಗಳ ಜನರೂ ತಿಳಿದಿದ್ದಾರೆ. ಆದರೆ ನಾನು ಈ ಮೂವತ್ತು ದಿವಸಗಳಿಂದ ಅರಸನ ಬಳಿಗೆ ಕರೆಯಲ್ಪಡಲಿಲ್ಲ ಎಂದು ಅಂದಾಗ
ಈಗಲಾದರೋ ಓ ಯಾಕೋಬೇ, ಇಸ್ರಾಯೇಲೇ ನಿನ್ನನ್ನು ಸೃಷ್ಟಿಸಿದಾತನೂ ರೂಪಿಸಿದಾತನೂ ಆದ ಕರ್ತನು ಇಂತೆನ್ನುತ್ತಾನೆ--ಹೆದರಬೇಡ, ನಾನು ನಿನ್ನನ್ನು ವಿಮೋಚಿಸಿದೆನಲ್ಲಾ ನಿನ್ನ ಹೆಸರು ಹಿಡಿದು ಕರೆದೆನಲ್ಲಾ; ನೀನು ನನ್ನವನೇ.
ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆದು ಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ; ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಅಡ್ಡ ಹೆಸರನ್ನು ಇಟ್ಟಿದ್ದೇನೆ.
ಇನ್ನು ಮೇಲೆ ನೀನು ಬಿಡಲ್ಪಟ್ಟವಳೆಂದು ಹೇಳಲ್ಪಡುವದಿಲ್ಲ, ಇಲ್ಲವೆ ನಿನ್ನ ದೇಶಕ್ಕೆ ಹಾಳಾದದ್ದೆಂದು ಹೇಳಲ್ಪಡುವದಿಲ್ಲ: ಆದರೆ ನೀನು (ಹೆಫ್ಜೀಬಾ) ಮೆಚ್ಚಿದವಳೆಂದೂ ನಿನ್ನ ದೇಶವು (ಬೆಯೂಲಾ) ಮದುವೆಯಾದದ್ದೆಂದೂ ಕರೆಯಲ್ಪ ಡುವದು; ಯಾಕಂದರೆ ಕರ್ತನು ನಿನ್ನಲ್ಲಿ ಉಲ್ಲಾಸಿಸು ವನು; ನಿನ್ನ ದೇಶವು ಮದುವೆಯಾಗುವದು.