Home Bibles ಸಭಾಪ್ರಸಂಗಿ 7:5 · ಕನ್ನಡ ಬೈಬಲ್
ಸಭಾಪ್ರಸಂಗಿ 7:5 · ಕನ್ನಡ ಬೈಬಲ್

ಮೂಢರ ಹಾಡನ್ನು ಒಬ್ಬ ಮನುಷ್ಯನು ಕೇಳುವದಕ್ಕಿಂತ ಜ್ಞಾನಿಗಳ ಗದರಿಕೆಯನ್ನು ಕೇಳುವದು ಲೇಸು.

Cross references

ಕೀರ್ತನೆಗಳು 69:12

ಬಾಗಲಲ್ಲಿ ಕೂತು ಕೊಳ್ಳುವವರು ನನಗೆ ವಿರೋಧವಾಗಿ ಮಾತನಾಡು ತ್ತಾರೆ; ನಾನು ಮದ್ಯಪಾನಿಗಳಿಗೆ ಸಂಗೀತವಾದೆನು.

ಕೀರ್ತನೆಗಳು 141:5

ನೀತಿವಂತನು ನನ್ನನ್ನು ಹೊಡೆಯಲಿ; ಅದು ಕರುಣೆಯೇ; ಅವನು ನನ್ನನ್ನು ಗದರಿಸಲಿ; ಅದು ನನ್ನ ತಲೆಗೆ ಶ್ರೇಷ್ಠ ಎಣ್ಣೆಯೇ. ಅದನ್ನು ನನ್ನ ತಲೆ ಬೇಡವೆನ್ನದಿರಲಿ; ಆದರೆ ಇನ್ನೂ ಅವರ ಕೇಡುಗಳಲ್ಲಿ ನನ್ನ ಪ್ರಾರ್ಥನೆ ಇರುವದು.

ಸಾಮೇತಿಗಳು 9:8

ಪರಿಹಾಸ್ಯಮಾಡುವವನು ನಿನ್ನನ್ನು ಹಗೆಮಾಡದಂತೆ ಅವನನ್ನು ಗದರಿಸಬೇಡ. ಜ್ಞಾನಿಯನ್ನು ಗದರಿಸಿದರೆ ಅವನು ನಿನ್ನನ್ನು ಪ್ರೀತಿ ಮಾಡುವನು.

ಸಾಮೇತಿಗಳು 13:13

ವಾಕ್ಯವನ್ನು ಉಲ್ಲಂಘಿಸುವ ವನು ನಾಶವಾಗುವನು; ಆಜ್ಞೆಗೆ ಭಯಪಡುವವನು ಪ್ರತಿಫಲ ಹೊಂದುವನು.

ಸಾಮೇತಿಗಳು 13:18

ಬೋಧನೆಯನ್ನು ತಿರಸ್ಕರಿಸುವವನಿಗೆ ಬಡತನವೂ ಅವಮಾನವೂ ಬರುವವು.; ಗದರಿಕೆಯನ್ನು ಗಮನಿಸು ವವನು ಸನ್ಮಾನಹೊಂದುವನು.

ಸಾಮೇತಿಗಳು 15:31

ಜೀವದ ಗದರಿಕೆಗೆ ಕಿವಿ ಗೊಡುವವನು ಜ್ಞಾನಿಗಳ ನಡುವೆ ವಾಸವಾಗಿದ್ದಾನೆ.

ಸಾಮೇತಿಗಳು 17:10

ಬುದ್ಧಿಹೀನನಿಗೆ ನೂರು ಪೆಟ್ಟುಗಳಿಗಿಂತ ಜ್ಞಾನಿಗೆ ಒಂದು ಗದರಿಕೆಯ ಮಾತು ಹೆಚ್ಚಾಗಿ ನಾಟು ತ್ತದೆ.

ಸಾಮೇತಿಗಳು 27:6

ಸ್ನೇಹಿತನು ಮಾಡುವ ಗಾಯಗಳು ನಂಬಿಕೆಯುಳ್ಳವುಗಳಾಗಿವೆ; ಶತ್ರುವಿನ ಮುದ್ದುಗಳು ಮೋಸಕರವಾಗಿವೆ.

ಪ್ರಕಟನೆ 3:19

ನಾನು ಯಾರಾರನ್ನು ಪ್ರೀತಿಸುತ್ತೇನೋ ಅವರನ್ನು ಗದರಿಸುತ್ತೇನೆ ಮತ್ತು ಶಿಕ್ಷಿಸುತ್ತೇನೆ; ಆದದರಿಂದ ನೀನು ಆಸಕ್ತನಾಗಿರು; ಮಾನಸಾಂತರಪಡು.

Interlinear

Choose Theme