Home Bibles ☰ Books ಸಭಾಪ್ರಸಂಗಿ 1:18 · ಕನ್ನಡ ಬೈಬಲ್
ಸಭಾಪ್ರಸಂಗಿ 1:18 · ಕನ್ನಡ ಬೈಬಲ್

ಬಹು ಜ್ಞಾನವಿದ್ದಲ್ಲಿ ದುಃಖ; ತಿಳುವಳಿಕೆಯನ್ನು ಹೆಚ್ಚಿಸಿಕೊಳ್ಳು ವವನು ತನ್ನ ವ್ಯಥೆಯನ್ನು ಹೆಚ್ಚಿಸಿಕೊಳ್ಳುತ್ತಾನೆ.

Cross references

ಯೋಬ 28:28

ಆತನು ಮನುಷ್ಯನಿಗೆ ಹೇಳಿದ್ದೇ ನಂದರೆ--ಇಗೋ, ಕರ್ತನ ಭಯವೇ ಜ್ಞಾನ; ಕೇಡಿನಿಂದ ತೊಲಗುವದೇ ಗ್ರಹಿಕೆ.

ಸಭಾಪ್ರಸಂಗಿ 2:15

ಆಗ ನಾನು ನನ್ನ ಹೃದಯದಲ್ಲಿ --ಮೂಢನಿಗೆ ಸಂಭವಿಸುವಂತೆ ನನಗೂ ಸಂಭವಿಸು ತ್ತದೆ. ಇದರಿಂದ ಯಾಕೆ ನಾನು ಹೆಚ್ಚು ಜ್ಞಾನದಿಂದ ಇದ್ದೇನೆ ಎಂದು ಅಂದುಕೊಂಡೆನು. ಆಗ ನಾನು ಇದೂ ವ್ಯರ್ಥವೆಂದು ನನ್ನ ಹೃದಯದಲ್ಲಿ ಅಂದು ಕೊಂಡೆನು.

ಸಭಾಪ್ರಸಂಗಿ 2:23

ಅವನ ದಿವಸಗಳೆಲ್ಲಾ ವ್ಯಸನಮಯವೇ, ಅವನ ಪ್ರಯಾಸವು ದುಃಖಮಯವೇ; ಹೌದು, ಅವನ ಹೃದಯವು ರಾತ್ರಿಯಲ್ಲಿ ವಿಶ್ರಾಂತಿತಕ್ಕೊಳ್ಳುವದಿಲ್ಲ. ಇದೂ ಕೂಡ ವ್ಯರ್ಥವೇ.

ಸಭಾಪ್ರಸಂಗಿ 7:16

ನೀನು ಅತಿ ಯಾಗಿ ನೀತಿವಂತನಾಗಿರಬೇಡ; ಅಲ್ಲದೆ ಅತಿಯಾಗಿ ನಿನ್ನನ್ನು ಜ್ಞಾನಿಯನ್ನಾಗಿ ಮಾಡಿಕೊಳ್ಳಬೇಡ; ನಿನ್ನನ್ನು ನೀನೇ ಯಾಕೆ ನಾಶಪಡಿಸಿಕೊಳ್ಳುವಿ?

ಸಭಾಪ್ರಸಂಗಿ 12:12

ಕೊನೆಗೆ ನನ್ನ ಮಗನೇ, ಇವುಗಳಿಂದ ಎಚ್ಚರಿಕೆ ಯಾಗಿರು. ಬಹಳ ಪುಸ್ತಕಗಳನ್ನು ಮಾಡುವದಕ್ಕೆ ಅಂತ್ಯ ವಿಲ್ಲ; ಹೆಚ್ಚು ಅಭ್ಯಾಸವು ಶರೀರಕ್ಕೆ ಆಯಾಸವಾಗಿದೆ.

1 ಕೊರಿಂಥದವರಿಗೆ 3:18

ಯಾವನೂ ತನ್ನನ್ನು ತಾನೇ ಮೋಸಗೊಳಿಸ ದಿರಲಿ; ನಿಮ್ಮಲ್ಲಿ ಯಾವನಾದರೂ ಈ ಲೋಕ ಸಂಬಂಧವಾಗಿ ಜ್ಞಾನಿಯಾಗಿದ್ದೇನೆಂದು ಭಾವಿಸಿ ಕೊಂಡರೆ ಜ್ಞಾನಿಯಾಗುವಂತೆ ಹುಚ್ಚನಾಗಲಿ.

ಯಾಕೋಬ 3:13

ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು? ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಸಾತ್ವಿಕತ್ವದಲ್ಲಿ ತನ್ನ ಕ್ರಿಯೆಗಳನ್ನು ತೋರಿಸಲಿ.

Interlinear

Choose Theme