Home Bibles ☰ Books ದ್ವಿತೀಯೋಪದೇಶಕಾಂಡ 6:12 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 6:12 · ಕನ್ನಡ ಬೈಬಲ್

ಐಗುಪ್ತದೇಶದ ದಾಸತ್ವದ ಮನೆಯೊಳಗಿಂದ ನಿನ್ನನ್ನು ಹೊರಗೆ ಬರ ಮಾಡಿದ ಕರ್ತನನ್ನು ಮರೆಯದ ಹಾಗೆ ನೋಡಿ ಕೋ.

Cross references

ನಿರ್ಗಮಕಾಂಡ 13:3

ಆಗ ಮೋಶೆಯು ಜನರಿಗೆ--ನೀವು ಐಗುಪ್ತದ ದಾಸತ್ವದ ಮನೆಯಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಯಾಕಂದರೆ ಕರ್ತನು ತನ್ನ ಬಲವಾದ ಕೈಯಿಂದ ನಿಮ್ಮನ್ನು ಅಲ್ಲಿಂದ ಹೊರಗೆ ಬರಮಾಡಿದ್ದಾನೆ. ಹೀಗಿರುವದರಿಂದ ಅಂದು ನೀವು ಹುಳಿ ರೊಟ್ಟಿಯನ್ನು ತಿನ್ನಬಾರದು.

ನಿರ್ಗಮಕಾಂಡ 13:14

ಇದಲ್ಲದೆ ಮುಂದೆ ಬರುವ ಕಾಲದಲ್ಲಿ ನಿನ್ನ ಮಗನು ನಿನಗೆ--ಇದೇನು ಎಂದು ಕೇಳುವಾಗ ನೀನು ಅವನಿಗೆಕರ್ತನು ತನ್ನ ಬಲವಾದ ಕೈಯಿಂದ ನಮ್ಮನ್ನು ಐಗುಪ್ತದ ದಾಸತ್ವದ ಮನೆಯಿಂದ ಹೊರಗೆ ಬರಮಾಡಿದ್ದಾನೆ.

ಅಂಕೆಗಳ ಪುಸ್ತಕ 15:39

ಅದನ್ನು ನೀವು ಗೊಂಡೆಯಾಗಿ ಇಟ್ಟುಕೊಂಡು ಅದನ್ನು ನೋಡುವಾಗ ಕರ್ತನ ಸಕಲ ಆಜ್ಞೆಗಳನ್ನು ನೆನಸಿ ಅವುಗಳ ಪ್ರಕಾರ ಮಾಡಿ ನಿಮ್ಮ ಹೃದಯವನ್ನೂ ಕಣ್ಣುಗಳನ್ನೂ ಅವು ಗಳಿಗನುಸಾರವಾಗಿ ಜಾರತ್ವಮಾಡುವಂತೆ ಹಿಂಬಾ ಲಿಸದೆ

ದ್ವಿತೀಯೋಪದೇಶಕಾಂಡ 4:23

ನಿಮ್ಮ ದೇವರಾದ ಕರ್ತನು ನಿಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಮರೆತು ನಿಮ್ಮ ದೇವರಾದ ಕರ್ತನು ಬೇಡವೆಂದು ಕೆತ್ತಿದ ಯಾವ ರೂಪದ ವಿಗ್ರಹ ವನ್ನೂ ಮಾಡಿಕೊಳ್ಳದ ಹಾಗೆ ಜಾಗ್ರತೆಯಾಗಿರ್ರಿ.

ದ್ವಿತೀಯೋಪದೇಶಕಾಂಡ 8:10

ನೀನು ತಿಂದು ತೃಪ್ತಿ ಹೊಂದಿದಾಗ ನಿನ್ನ ದೇವರಾದ ಕರ್ತನು ನಿನಗೆ ಕೊಟ್ಟ ಉತ್ತಮ ದೇಶದಲ್ಲಿ ಆತನನ್ನು ಸ್ತುತಿಸಬೇಕು.

ದ್ವಿತೀಯೋಪದೇಶಕಾಂಡ 32:18

ನಿನ್ನನ್ನು ಹುಟ್ಟಿಸಿದ ಬಂಡೆಯನ್ನು ನೆನಸದೆ ನಿನ್ನನ್ನು ರೂಪಿಸಿದ ದೇವರನ್ನು ಮರೆತುಬಿಟ್ಟಿದ್ದಿ.

ನ್ಯಾಯಾಧಿಪತಿಗಳು 2:12

ತಮ್ಮ ತಂದೆಗಳನ್ನು ಐಗುಪ್ತದಿಂದ ಹೊರಡಮಾಡಿದ ತಮ್ಮ ದೇವರಾದ ಕರ್ತನನ್ನು ಬಿಟ್ಟು ತಮ್ಮ ಸುತ್ತಲಿರುವ ಜನಗಳ ಅನ್ಯ ದೇವರುಗಳ ಹಿಂದೆಹೋಗಿ ಅವುಗಳಿಗೆ ಅಡ್ಡಬಿದ್ದು ಕರ್ತನಿಗೆ ಕೋಪವನ್ನೆಬ್ಬಿಸಿದರು.

2 ಅರಸುಗಳು 17:36

ಆದರೆ ಮಹಾಶಕ್ತಿ ಯಿಂದಲೂ ಭುಜಪರಾಕ್ರಮದಿಂದಲೂ ಐಗುಪ್ತದೇಶ ದಿಂದ ನಿಮ್ಮನ್ನು ಬರಮಾಡಿದ ಕರ್ತನಿಗೆ ನೀವು ಭಯಪಟ್ಟು ಅಡ್ಡಬಿದ್ದು ಆತನಿಗೆ ಬಲಿಯನ್ನು ಅರ್ಪಿ ಸಿರಿ.

2 ಅರಸುಗಳು 17:38

ನಾನು ನಿಮ್ಮ ಸಂಗಡ ಮಾಡಿದ ಒಡಂಬಡಿ ಕೆಯನ್ನು ನೀವು ಮರೆಯದೆ ಇತರ ದೇವರುಗಳಿಗೆ ಭಯಪಡದೆ

ಯೋಬ 8:13

ದೇವರನ್ನು ಮರೆಯುವ ವರೆಲ್ಲರ ಹಾದಿಗಳು ಹಾಗೆಯೇ; ಕಪಟಿಯ ನಿರೀಕ್ಷೆಯು ನಾಶವಾಗುವದು.

ಕೀರ್ತನೆಗಳು 44:17

ಇದೆಲ್ಲಾ ನಮ್ಮ ಮೇಲೆ ಬಂತು; ಆದರೆ ನಿನ್ನನ್ನು ಮರೆತುಬಿಡಲಿಲ್ಲ; ನಿನ್ನ ಒಡಂಬಡಿಕೆಯಲ್ಲಿ ಸುಳ್ಳಾ ಡಲಿಲ್ಲ.

ಕೀರ್ತನೆಗಳು 78:7

ಇವರು ದೇವರಲ್ಲಿ ತಮ್ಮ ನಿರೀಕ್ಷೆ ಇಡುವಂತೆಯೂ ದೇವರ ಕ್ರಿಯೆಗಳನ್ನು ಮರೆತುಬಿಡ ದಂತೆಯೂ ಆತನ ಆಜ್ಞೆಗಳನ್ನು ಕೈಕೊಂಡು

ಕೀರ್ತನೆಗಳು 103:2

ಓ ನನ್ನ ಮನವೇ, ಕರ್ತನನ್ನು ಸ್ತುತಿಸು. ಆತನ ಉಪಕಾರಗಳಲ್ಲಿ ಒಂದನ್ನೂ ಮರೆತುಬಿಡಬೇಡ.

ಸಾಮೇತಿಗಳು 30:9

ಇಲ್ಲವಾದರೆ ನಾನು ಸಂತೃಪ್ತನಾಗಿ ನಿನ್ನನ್ನು ನಿರಾಕರಿಸಿ--ಕರ್ತನು ಯಾರು ಎಂದು ಹೇಳಿಯೇನು? ಇಲ್ಲವೆ ನಾನು ಬಡವನಾಗಿ ಕದ್ದುಕೊಂಡು ದೇವರ ನಾಮವನ್ನು ಅಯೋಗ್ಯವಾಗಿ ಎತ್ತೇನು.

Interlinear

Choose Theme