Home Bibles ☰ Books ದ್ವಿತೀಯೋಪದೇಶಕಾಂಡ 5:14 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 5:14 · ಕನ್ನಡ ಬೈಬಲ್

ಏಳನೇ ದಿವಸವು ನಿನ್ನ ದೇವರಾದ ಕರ್ತನ ಸಬ್ಬತ್‌ ದಿವಸವೇ; ಅದ ರಲ್ಲಿ ನೀನೂ ನಿನ್ನ ಮಗನೂ ಮಗಳೂ ದಾಸನೂ ದಾಸಿಯೂ ಎತ್ತೂ ಕತ್ತೆಯೂ ಎಲ್ಲಾಪಶುಗಳೂ ನಿನ್ನ ಬಾಗಲುಗಳಲ್ಲಿರುವ ಪರವಾಸಿಯೂ ಯಾವ ಕೆಲಸ ವನ್ನೂ ಮಾಡಬಾರದು. ನಿನ್ನ ದಾಸನೂ ದಾಸಿಯೂ ನಿನ್ನ ಹಾಗೆ ವಿಶ್ರಮಿಸಿಕೊಳ್ಳಬೇಕು.

Cross references

ಆದಿಕಾಂಡ 2:2

ಏಳನೆಯ ದಿನದಲ್ಲಿ ದೇವರು ತಾನು ಮಾಡಿದ್ದ ತನ್ನ ಕೆಲಸವನ್ನು ಮುಗಿಸಿದ ಮೇಲೆ ಏಳನೆಯ ದಿನದಲ್ಲಿ ತಾನು ಮಾಡಿದ್ದ ಎಲ್ಲಾ ಕೆಲಸದಿಂದ ವಿಶ್ರಮಿಸಿಕೊಂಡನು.

ನಿರ್ಗಮಕಾಂಡ 16:29

ಅವನು--ನೋಡಿರಿ, ಕರ್ತನು ನಿಮಗೆ ಸಬ್ಬತ್‌ ದಿನವನ್ನು ಕೊಟ್ಟಿದ್ದರಿಂದಲೇ ಆರನೆಯ ದಿನ ದಲ್ಲಿ ನಿಮಗೆ ಎರಡು ದಿನಗಳ ರೊಟ್ಟಿಯನ್ನು ಕೊಟ್ಟಿ ದ್ದಾನೆ. ಪ್ರತಿಯೊಬ್ಬನು ತನ್ನ ತನ್ನ ಸ್ಥಳದಲ್ಲಿ ಇರಲಿ, ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟು ಹೋಗಬಾರದು ಎಂದು ಹೇಳಿದನು.

ನಿರ್ಗಮಕಾಂಡ 23:12

ಆರು ದಿವಸ ನೀನು ನಿನ್ನ ಕೆಲಸಗಳನ್ನು ಮಾಡ ಬೇಕು; ಏಳನೆಯ ದಿನದಲ್ಲಿ ನೀನು ನಿನ್ನ ಎತ್ತು ಕತ್ತೆಗಳು ವಿಶ್ರಮಿಸಿಕೊಳ್ಳಬೇಕು. ಇದಲ್ಲದೆ ನಿನ್ನ ದಾಸಿಯ ಮಗನು ಪರದೇಶಸ್ಥನು ದಣಿವಾರಿಸಿಕೊಳ್ಳಲಿ.

ಲೇವ್ಯಕಾಂಡ 25:44

ನಿನ್ನ ಸುತ್ತಲೂ ಇರುವ ಅನ್ಯಜನರು ನಿನಗೆ ದಾಸದಾಸಿಯ ರಾಗಿರುವಂತೆ ಅವರಿಂದ ದಾಸದಾಸಿಯರನ್ನು ನೀನು ಕೊಂಡುಕೊಳ್ಳಬೇಕು.

ನೆಹೆಮ್ಯ 5:5

ಆದರೂ ನಮ್ಮ ಶರೀರವು ನಮ್ಮ ಸಹೋದರರ ಶರೀರದ ಹಾಗೆ, ನಮ್ಮ ಮಕ್ಕಳು ಅವರ ಮಕ್ಕಳ ಹಾಗೆ ಆದರೆ ಇಗೋ, ಸೇವಕರಾಗಿರಲು ನಮ್ಮ ಕುಮಾರರನ್ನೂ ಕುಮಾರ್ತೆಯರನ್ನೂ ದಾಸರಾಗುವದಕ್ಕೆ ತಂದಿದ್ದೇವೆ. ನಮ್ಮ ಕುಮಾರ್ತೆ ಯರಲ್ಲಿ ಕೆಲವರು ಆಗಲೇ ದಾಸರಾದರು. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಯಾಕಂದರೆ ನಮ್ಮ ಹೊಲಗಳೂ ದ್ರಾಕ್ಷೇ ತೋಟಗಳೂ ಅನ್ಯರಿಗೆ ಸೇರಿ ದವು ಅಂದರು.

ನೆಹೆಮ್ಯ 13:15

ಆ ದಿವಸಗಳಲ್ಲಿ ನಾನು ಯೆಹೂದದೊಳಗೆ ಸಬ್ಬತ್ತುಗಳಲ್ಲಿ ಕೆಲವರು ದ್ರಾಕ್ಷೆ ತುಳಿಯುವದನ್ನೂ ಸಿವುಡುಗಳನ್ನು ತರುವದನ್ನೂ ಕತ್ತೆಗಳ ಮೇಲೆ ಹೇರಿ ಕೊಂಡು ಬರುವದನ್ನೂ ಮತ್ತು ಸಬ್ಬತ್ತುಗಳಲ್ಲಿ ಯೆರೂಸಲೇಮಿಗೆ ದ್ರಾಕ್ಷಾರಸವನ್ನೂ ದ್ರಾಕ್ಷೆ ಹಣ್ಣು ಗಳನ್ನೂ ಅಂಜೂರದ ಹಣ್ಣುಗಳನ್ನೂ ಎಲ್ಲಾ ಹೊರೆ ಗಳನ್ನೂ ತರುವದನ್ನು ನಾನು ನೋಡಿದ್ದರಿಂದ ಮಾರುವ ದಿವಸದಲ್ಲಿ ನಾನು ಸಾಕ್ಷಿಯಾಗಿ ಹೇಳಿದೆನು.

ನೆಹೆಮ್ಯ 13:16

ಇದಲ್ಲದೆ ವಿಾನುಗಳನ್ನೂ ಎಲ್ಲಾ ಸರುಕುಗಳನ್ನೂ ತಕ್ಕೊಂಡು ಬಂದು ಸಬ್ಬತ್‌ ದಿವಸದಲ್ಲಿ ಯೆಹೂದದ ಮಕ್ಕಳಿಗೆ ಮಾರುವ ತೂರಿನವರು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು.

ನೆಹೆಮ್ಯ 13:21

ಆಗ ನಾನು ಅವರನ್ನು ಗದರಿಸಿ ಅವರಿಗೆ--ನೀವು ಕೋಟೆಯ ಮುಂದೆ ಇಳುಕೊಂಡಿರುವದೇನು? ನೀವು ಇನ್ನು ಮೇಲೆ ಹಾಗೆ ಮಾಡಿದರೆ ನಿಮ್ಮ ಮೇಲೆ ಕೈ ಹಾಕುವೆನು ಅಂದೆನು. ಆ ಹೊತ್ತಿನಿಂದ ಅವರು ಸಬ್ಬತ್‌ ದಿವಸದಲ್ಲಿ ಬರಲೇ ಇಲ್ಲ;

ಹೆಬ್ರಿಯರಿಗೆ 4:4

ಒಂದು ಸ್ಥಳದಲ್ಲಿ ಏಳನೆಯ ದಿವಸವನ್ನು ಕುರಿತು--ದೇವರು ತನ್ನ ಕಾರ್ಯಗಳನ್ನೆಲ್ಲಾ ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನೆಂತಲೂ

Interlinear

Choose Theme