Home Bibles ☰ Books ದ್ವಿತೀಯೋಪದೇಶಕಾಂಡ 4:41 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 4:41 · ಕನ್ನಡ ಬೈಬಲ್

ಆಗ ಮೋಶೆಯು ಯೊರ್ದನಿನ ಈಚೆಯಲ್ಲಿರುವ ಸೂರ್ಯೋದಯದ ಕಡೆಗೆ ಮೂರು ಪಟ್ಟಣಗಳನ್ನು ಪ್ರತ್ಯೇಕ ಮಾಡಿದನು.

Cross references

ಅಂಕೆಗಳ ಪುಸ್ತಕ 35:6

ನೀವು ಲೇವಿಯರಿಗೆ ಕೊಡುವ ಪಟ್ಟಣಗಳೊಳಗೆ ಮನುಷ್ಯಹತ್ಯಮಾಡಿದ ವನು ಓಡುವಹಾಗೆ ಆರು ಆಶ್ರಯದ ಪಟ್ಟಣಗಳನ್ನು ನೇಮಿಸಬೇಕು; ಅವುಗಳ ಹೊರತು ನೀವು ನಾಲ್ವತ್ತೆರಡು ಪಟ್ಟಣಗಳನ್ನು ಕೊಡಬೇಕು.

ಅಂಕೆಗಳ ಪುಸ್ತಕ 35:14

ಯೊರ್ದನಿನ ಈಚೆಯಲ್ಲಿ ಮೂರು ಪಟ್ಟಣಗಳನ್ನೂ ಕಾನಾನ್‌ ದೇಶದಲ್ಲಿ ಮೂರು ಪಟ್ಟಣ ಗಳನ್ನೂ ಆಶ್ರಯದ ಪಟ್ಟಣಗಳಾಗಿ ಕೊಡಬೇಕು.

ದ್ವಿತೀಯೋಪದೇಶಕಾಂಡ 19:2

ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ಕೊಡುವ ನಿನ್ನ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.

ದ್ವಿತೀಯೋಪದೇಶಕಾಂಡ 19:7

ಆದಕಾರಣ ನಾನು ನಿನಗೆ ಆಜ್ಞಾಪಿಸು ವದೇನಂದರೆ--ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.

ದ್ವಿತೀಯೋಪದೇಶಕಾಂಡ 19:14

ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನ ಮಾಡಿ ಕೊಳ್ಳುವದಕ್ಕೆ ಕೊಡುವ ದೇಶದೊಳಗೆ ನೀನು ಹೊಂದುವ ಸ್ವಾಸ್ತ್ಯದಲ್ಲಿ ಹಿರಿಯರು ಇಟ್ಟಂಥ ನಿನ್ನ ನೆರೆಯವನ ಮೇರೆಯನ್ನು ತಪ್ಪಿಸಬಾರದು.

ಯೆಹೋಶುವ 20:2

ನೀನು ಇಸ್ರಾಯೇಲ್‌ ಮಕ್ಕಳಿಗೆ ಹೇಳಬೇಕಾದ ದ್ದೇನಂದರೆ, ಯಾವನಾದರೂ ಅರಿಯದೆ ಕೈತಪ್ಪಿ ಹೊಡೆದು ಕೊಂದು ಹಾಕಿದವನು ಅಲ್ಲಿ ಓಡಿಹೋಗು ವದಕ್ಕೆ ನಾನು ಮೋಶೆಯ ಮುಖಾಂತರ ನಿಮಗೆ ಹೇಳಿದ ಆಶ್ರಯ ಪಟ್ಟಣಗಳನ್ನು ಗೊತ್ತು ಮಾಡಿ ಕೊಳ್ಳಿರಿ.

Interlinear

Choose Theme