Home Bibles ದ್ವಿತೀಯೋಪದೇಶಕಾಂಡ 32:17 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 32:17 · ಕನ್ನಡ ಬೈಬಲ್

ದೇವರಿಗೆ ಅಲ್ಲ, ದೆವ್ವಗಳಿಗೆ, ಅವರು ಅರಿಯದ ದೇವರುಗಳಿಗೆ, ಇತ್ತಲಾಗಿ ಬಂದ ಹೊಸ ದೇವರು ಗಳಿಗೆ ನಿಮ್ಮ ಪಿತೃಗಳು ಭಯಪಡದವುಗಳಿಗೆ ಬಲಿ ಅರ್ಪಿಸಿದರು.

Cross references

ಲೇವ್ಯಕಾಂಡ 17:7

ಅವರು ಜಾರತ್ವ ಮಾಡುವಂತೆ ಯಾರ ಹಿಂದೆ ಹೋದರೋ ಆ ದೆವ್ವ ಗಳಿಗೆ ಇನ್ನೆಂದಿಗೂ ಅವರು ತಮ್ಮ ಯಜ್ಞಗಳನ್ನು ಸಮರ್ಪಿಸಬಾರದು. ಇದು ಅವರಿಗೆ ಅವರ ತಲ ತಲಾಂತರಗಳ ವರೆಗೆ ಶಾಶ್ವತವಾದ ನಿಯಮವಾಗಿ ರುವದು.

ದ್ವಿತೀಯೋಪದೇಶಕಾಂಡ 13:8

ನೀನು ಅವನಿಗೆ ಸಮ್ಮತಿಸಬಾರದು; ಅವನ ಮಾತನ್ನು ಕೇಳಬಾರದು; ನಿನ್ನ ಕಣ್ಣು ಅವನನ್ನು ಕರುಣಿಸಬಾರದು; ನೀನು ಅವ ನನ್ನು ಕನಿಕರಿಸಬಾರದು ಇಲ್ಲವೆ ಬಚ್ಚಿಡಬಾರದು.

ದ್ವಿತೀಯೋಪದೇಶಕಾಂಡ 28:64

ಇದ ಲ್ಲದೆ ಕರ್ತನು ನಿನ್ನನ್ನು ಭೂಮಿಯ ಈ ಮೇರೆಯಿಂದ ಆ ಮೇರೆಯ ವರೆಗೂ ಎಲ್ಲಾ ಜನಗಳಲ್ಲಿ ಚದರಿಸು ವನು; ಅಲ್ಲಿ ನೀನೂ ನಿನ್ನ ಪಿತೃಗಳೂ ತಿಳಿಯದಂಥ ಮರವೂ ಕಲ್ಲೂ ಆಗಿರುವಂಥ ಬೇರೆ ದೇವರುಗಳನ್ನು ಸೇವಿಸುವಿ.

ದ್ವಿತೀಯೋಪದೇಶಕಾಂಡ 32:21

ದೇವರಲ್ಲದ್ದರಿಂದ ಅವರು ನನಗೆ ರೋಷ ಹುಟ್ಟಿಸಿ ದರು; ತಮ್ಮ ವ್ಯರ್ಥವಾದವುಗಳಿಂದ ನನಗೆ ಕೋಪ ವನ್ನು ಎಬ್ಬಿಸಿದರು. ಜನವಲ್ಲದ್ದರಿಂದ ನಾನು ಅವರಿಗೆ ರೋಷ ಹುಟ್ಟಿಸುವೆನು; ಮೂಢ ಜನಾಂಗದಿಂದ ಅವರಿಗೆ ಕೋಪವನ್ನೆಬ್ಬಿಸುವೆನು.

ನ್ಯಾಯಾಧಿಪತಿಗಳು 5:8

ಅವರು ಹೊಸ ದೇವರುಗಳನ್ನು ಆದುಕೊಂಡರು; ಆಗ ಯುದ್ಧವು ಬಾಗಲುಗಳಲ್ಲಿ ಆಯಿತು. ಇಸ್ರಾಯೇಲಿನಲ್ಲಿ ನಾಲ್ವತ್ತು ಸಾವಿರ ಜನರೊಳಗೆ ಗುರಾಣಿಯೂ ಕಠಾರಿಯೂ ಕಾಣಲ್ಪಟ್ಟವೋ?

ಕೀರ್ತನೆಗಳು 106:37

ತಮ್ಮ ಗಂಡು ಹೆಣ್ಣು ಮಕ್ಕಳನ್ನೂ ದೆವ್ವಗಳಿಗೆ ಅರ್ಪಿಸಿದರು.

ಯೆಶಾಯ 44:8

ಹೆದರಬೇಡಿರಿ ಇಲ್ಲವೆ ಭಯಪಡಬೇಡಿರಿ ನಾನು ಪೂರ್ವದಿಂದಲೂ ನಿಮಗೆ ಹೇಳಲಿಲ್ಲವೋ? ಅದನ್ನು ಪ್ರಕಟಿಸಲಿ ಲ್ಲವೋ? ಅಂತೂ ನೀವೇ ನನ್ನ ಸಾಕ್ಷಿಗಳು. ನಾನಲ್ಲದೆ ಇನ್ನೊಬ್ಬ ದೇವರು ಇದ್ದಾನೋ? ಹೌದು, ಇನ್ನು ಯಾವ ದೇವರೂ ಇಲ್ಲ, ಯಾರೂ ನನಗೆ ಗೊತ್ತಿಲ್ಲ.

ಯೆರೆಮಿಯ 10:15

ನನ್ನ ಪ್ರಿಯಳಿಗೆ ನನ್ನ ಮನೆಯಲ್ಲಿ ಏನು ಕೆಲಸ, ಅವಳು ಬಹಳ ಮಂದಿಯ ಸಂಗಡ ಕುಯುಕ್ತಿಯನ್ನು ನಡಿಸಿದ್ದಾಳೆ; ಪರಿಶುದ್ಧ ಮಾಂಸವು ನಿನ್ನನ್ನು ಬಿಟ್ಟು ಹೋಯಿತು; ನೀನು ಕೆಟ್ಟತನ ಮಾಡುವಾಗ ಉಲ್ಲಾಸ ಪಡುತ್ತೀ.

ಯೆರೆಮಿಯ 19:4

ಕರ್ತನು ಹೀಗೆ ಹೇಳುತ್ತಾನೆ--ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲುಪಡುವಂತೆ ಮಾಡುತ್ತೇನೆ; ಅವರು ತಮ್ಮ ಶತ್ರುಗಳ ಕತ್ತಿಯಿಂದ ಬೀಳುವರು; ನಿನ್ನ ಕಣ್ಣುಗಳು ಅದನ್ನು ನೋಡುವವು; ಯೆಹೂದವನ್ನೆಲ್ಲಾ ನಾನು ಬಾಬೆಲಿನ ಅರಸನ ಕೈಗೆ ಒಪ್ಪಿಸುವೆನು; ಅವನು ಅವರನ್ನು ಬಾಬೆಲಿಗೆ ಒಯ್ದು ಕತ್ತಿಯಿಂದ ಕೊಲ್ಲುವನು.

1 ಕೊರಿಂಥದವರಿಗೆ 8:4

ವಿಗ್ರಹಗಳಿಗೆ ಸಮರ್ಪಣೆ ಮಾಡಿದವುಗಳನ್ನು ತಿನ್ನುವದರ ವಿಷ ಯದಲ್ಲಿ ನಾನು ಹೇಳುವದೇನಂದರೆ, ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದೂ ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ ನಾವು ಬಲ್ಲೆವು.

1 ಕೊರಿಂಥದವರಿಗೆ 10:19

ಹಾಗಾದರೆ ನಾನು ಏನು ಹೇಳಲಿ? ವಿಗ್ರಹವು ಏನಾದರೂ ವಿಶೇಷವೋ? ಇಲ್ಲವೆ ವಿಗ್ರಹಗಳಿಗೆ ಯಜ್ಞಾರ್ಪಣೆ ಮಾಡಿದ್ದು ಏನಾದರೂ ವಿಶೇಷವೋ?

1 ತಿಮೋಥೆಯ 4:1

ಕಡೇಕಾಲಗಳಲ್ಲಿ ಕೆಲವರು ವಂಚಿಸುವ ಆತ್ಮಗಳಿಗೂ ದೆವ್ವಗಳ ಬೋಧನೆಗಳಿಗೂ ಲಕ್ಷ್ಯಕೊಟ್ಟು ನಂಬಿಕೆಯಿಂದ ತೊಲಗಿಹೋಗುವ ರೆಂದು ಆತ್ಮನು ಸ್ಪಷ್ಟವಾಗಿ ಹೇಳುತ್ತಾನೆ.

ಪ್ರಕಟನೆ 9:20

ಈ ಉಪದ್ರವಗಳಿಂದ ಕೊಲ್ಲಲ್ಪಡದೆ ಉಳಿದ ಮನುಷ್ಯರು ದೆವ್ವಗಳನ್ನೂ ಬಂಗಾರದ ವಿಗ್ರಹಗಳನ್ನೂ ಬೆಳ್ಳಿಯ, ಹಿತ್ತಾಳೆಯ, ಕಲ್ಲಿನ ಮತ್ತು ಮರದ ವಿಗ್ರಹ ಗಳನ್ನೂ ಅಂದರೆ ನೋಡಲಾರದ ಕೇಳಲಾರದ ಇಲ್ಲವೆ ನಡೆಯಲಾರದವುಗಳನ್ನು ಆರಾಧಿಸದಂತೆ ಮಾನ ಸಾಂತರಪಡದೆ ಹೋದರು.ಇದಲ್ಲದೆ ತಾವು ಮಾಡುತ್ತಿದ್ದ ಕೊಲೆ ಮಾಟ ಜಾರತ್ವ ಕಳ್ಳತನ ಇವುಗಳಿ ಗಾಗಿಯೂ ಮಾನಸಾಂತರಪಡಲಿಲ್ಲ.

Interlinear

Choose Theme