Home Bibles ದ್ವಿತೀಯೋಪದೇಶಕಾಂಡ 31:13 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 31:13 · ಕನ್ನಡ ಬೈಬಲ್

ತಿಳಿಯದಿರುವ ಅವರ ಮಕ್ಕಳು ಸಹ ಕೇಳಿ ನೀವು ಸ್ವಾಧೀನಮಾಡಿಕೊಳ್ಳುವ ದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ನೀವು ಬದುಕುವ ದಿವಸಗಳೆಲ್ಲಾ ನಿಮ್ಮ ದೇವರಾದ ಕರ್ತನಿಗೆ ಭಯಪಡುವದಕ್ಕೆ ಕಲಿತುಕೊಳ್ಳಲಿ ಎಂದು ಆಜ್ಞಾಪಿಸಿ ಹೇಳಬೇಕು.

Cross references

ದ್ವಿತೀಯೋಪದೇಶಕಾಂಡ 6:7

ಅವು ಗಳನ್ನು ನಿನ್ನ ಮಕ್ಕಳಿಗೆ ಅಭ್ಯಾಸಮಾಡಿಸಿ ನಿನ್ನ ಮನೆಯಲ್ಲಿ ಕೂತಿರುವಾಗಲೂ ಮಾರ್ಗದಲ್ಲಿ ಹೋಗುವಾಗಲೂ ಮಲಗುವಾಗಲೂ ಏಳುವಾಗಲೂ ಅವುಗಳ ವಿಷಯ ವಾಗಿ ಮಾತನಾಡಬೇಕು.

ದ್ವಿತೀಯೋಪದೇಶಕಾಂಡ 11:2

ನಿಮಗೆ ಈ ಹೊತ್ತು ತಿಳಿಯಬೇಕಾದದ್ದೇನಂದರೆ --ನಿಮ್ಮ ದೇವರಾದ ಕರ್ತನು ಮಾಡಿದ ಶಿಕ್ಷೆಯನ್ನೂ ಆತನ ಮಹತ್ವವನ್ನೂ ಆತನ ಬಲವಾದ ಕೈಯನ್ನೂ ಆತನು ಚಾಚಿದತೋಳನ್ನೂ

ದ್ವಿತೀಯೋಪದೇಶಕಾಂಡ 32:47

ಇದು ನಿಮಗೆ ವ್ಯರ್ಥವಾದದ್ದಲ್ಲ, ಇದು ನಿಮ್ಮ ಜೀವವೇ. ನೀವು ಸ್ವಾಧೀನಮಾಡಿಕೊಳ್ಳುವದಕ್ಕೆ ಯೊರ್ದನನ್ನು ದಾಟುವ ಭೂಮಿಯಲ್ಲಿ ಇದರಿಂದಲೇ ನಿಮ್ಮ ದಿವಸಗಳನ್ನು ಹೆಚ್ಚಿಸಿಕೊಳ್ಳುವಿರಿ ಎಂದು ಹೇಳಿದನು.

ಕೀರ್ತನೆಗಳು 78:4

ನಾವು ಕರ್ತನ ಸ್ತೋತ್ರಗಳನ್ನೂ ಆತನ ತ್ರಾಣವನ್ನೂ ಆತನು ಮಾಡಿದ ಅದ್ಭುತಗಳನ್ನೂ ವಿವರಿಸುತ್ತಾ ಅವರ ಮಕ್ಕಳಿಗೆ, ಮುಂದಿನ ವಂಶಕ್ಕೆ ಮರೆಮಾಡುವದಿಲ್ಲ.

ಕೀರ್ತನೆಗಳು 78:5

ಆತನು ಯಾಕೋಬನಲ್ಲಿ ಸಾಕ್ಷಿ ಯನ್ನು ಸ್ಥಾಪಿಸಿ ಇಸ್ರಾಯೇಲಿನಲ್ಲಿ ನ್ಯಾಯಪ್ರಮಾಣವನ್ನು ಇಟ್ಟು

ಸಾಮೇತಿಗಳು 22:6

ನಡೆಯಬೇಕಾದ ಮಾರ್ಗದಲ್ಲಿರುವಂತೆ ಹುಡುಗನಿಗೆ ಶಿಕ್ಷಣಕೊಡು; ಆಗ ಮುಪ್ಪಿನಲ್ಲಿಯೂ ಅವನು ಅದ ರಿಂದ ಹೊರಟು ಹೋಗುವದಿಲ್ಲ.

ಎಫೆಸದವರಿಗೆ 6:4

ತಂದೆಗಳೇ, ನಿಮ್ಮ ಮಕ್ಕಳಿಗೆ ಕೋಪವನ್ನೆಬ್ಬಿಸದೆ ಕರ್ತನ ಶಿಕ್ಷೆಯಲ್ಲಿಯೂ ಉಪದೇಶದಲ್ಲಿಯೂ ಅವರನ್ನು ಬೆಳೆಸಿರಿ.

Interlinear

Choose Theme