Home Bibles ದ್ವಿತೀಯೋಪದೇಶಕಾಂಡ 3:18 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 3:18 · ಕನ್ನಡ ಬೈಬಲ್

ಆ ಕಾಲದಲ್ಲಿ ನಾನು ನಿಮಗೆ ಆಜ್ಞಾಪಿಸಿದ್ದೇನಂದರೆ--ನಿಮ್ಮ ದೇವರಾದ ಕರ್ತನು ನಿಮಗೆ ಈ ದೇಶವನ್ನು ಸ್ವಾಸ್ತ್ಯವಾಗಿ ಕೊಟ್ಟಿದ್ದಾನೆ; ಯುದ್ಧಸ್ಥ ರಾಗಿರುವ ನೀವೆಲ್ಲರು ನಿಮ್ಮ ಸಹೋದರರಾದ ಇಸ್ರಾಯೇಲ್‌ ಮಕ್ಕಳ ಮುಂದೆ ಆಯುಧ ಧರಿಸಿ ಕೊಂಡು ಹಾದುಹೋಗಬೇಕು.

Cross references

ಆದಿಕಾಂಡ 15:7

ಆತನು ಅವನಿಗೆ--ಈ ದೇಶವನ್ನು ಬಾಧ್ಯವಾಗಿ ನಿನಗೆ ಕೊಡುವದಕ್ಕೆ ಕಲ್ದೀಯರ ಊರ್‌ನಿಂದ ನಿನ್ನನ್ನು ಹೊರಗೆ ತಂದ ಕರ್ತನು ನಾನೇ ಎಂದು ಹೇಳಿದನು.

ಅಂಕೆಗಳ ಪುಸ್ತಕ 32:20

ಆಗ ಮೋಶೆಯು ಇವರಿಗೆ--ನೀವು ಈ ಕಾರ್ಯ ವನ್ನು ಮಾಡಿದರೆ ನೀವು ಕರ್ತನ ಮುಂದೆ ಯುದ್ದಕ್ಕೆ ಸಿದ್ಧವಾಗಿದ್ದರೆ

ಅಂಕೆಗಳ ಪುಸ್ತಕ 33:53

ನೀವು ಆ ದೇಶವನ್ನು ತಕ್ಕೊಂಡು ಅದರಲ್ಲಿ ವಾಸಮಾಡಿರಿ; ಯಾಕಂದರೆ ಅದನ್ನು ಸ್ವಾಧೀನಪಡಿಸಿ ಕೊಳ್ಳುವದಕ್ಕೆ ಆ ದೇಶವನ್ನು ನಿಮಗೆ ಕೊಟ್ಟಿದ್ದೇನೆ.

ದ್ವಿತೀಯೋಪದೇಶಕಾಂಡ 5:31

ನೀನಾದರೋ ಇಲ್ಲಿ ನನ್ನ ಸಂಗಡ ನಿಂತು ಕೋ; ಆಗ ನೀನು ಅವರಿಗೆ ಬೋಧಿಸತಕ್ಕಂಥ ಮತ್ತು ನಾನು ಅವರಿಗೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಅವರು ಮಾಡತಕ್ಕಂಥ ಎಲ್ಲಾ ಆಜ್ಞೆ ನಿಯಮ ನ್ಯಾಯ ಗಳನ್ನು ನಿನಗೆ ಹೇಳುವೆನು ಅಂದನು.

ದ್ವಿತೀಯೋಪದೇಶಕಾಂಡ 6:1

ನೀವು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗುವ ದೇಶದಲ್ಲಿ ಮಾಡತಕ್ಕವುಗಳು;

ದ್ವಿತೀಯೋಪದೇಶಕಾಂಡ 9:6

ಹೀಗಿರುವದರಿಂದ ನಿನ್ನ ನೀತಿಗೋಸ್ಕರ ನಿನ್ನ ದೇವರಾದ ಕರ್ತನು ನಿನಗೆ ಈ ಉತ್ತಮ ದೇಶವನ್ನು ಸ್ವಾಧೀನಪಡಿಸಿಕೊಳ್ಳುವದಕ್ಕೆ ಕೊಡುವದಿಲ್ಲವೆಂದು ತಿಳಿದುಕೊಳ್ಳಬೇಕು; ನೀನು ಬಗ್ಗದ ಕುತ್ತಿಗೆಯುಳ್ಳ ಜನವೇ.

ದ್ವಿತೀಯೋಪದೇಶಕಾಂಡ 12:1

ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ನಿನ್ನ ಪಿತೃಗಳ ದೇವರಾದ ಕರ್ತನು ಕೊಡುವ ದೇಶದಲ್ಲಿ ನೀವು ಭೂಮಿಯ ಮೇಲೆ ಬದುಕುವ ದಿವಸಗಳಲ್ಲೆಲ್ಲಾ ಲಕ್ಷಿಸಿ ಮಾಡತಕ್ಕ ನಿಯಮ ನ್ಯಾಯಗಳು ಇವೇ.

ದ್ವಿತೀಯೋಪದೇಶಕಾಂಡ 15:4

ಬಡತನವು ನಿನ್ನ ಮಧ್ಯದಲ್ಲಿರದ ಹಾಗೆ; ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಪಡಿಸಿಕೊಳ್ಳು ವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಕರ್ತನು ನಿನ್ನನ್ನು ಬಹಳವಾಗಿ ಆಶೀರ್ವದಿಸುವನು.

ದ್ವಿತೀಯೋಪದೇಶಕಾಂಡ 19:2

ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನಮಾಡಿಕೊಳ್ಳುವದಕ್ಕೆ ಕೊಡುವ ನಿನ್ನ ದೇಶದ ಮಧ್ಯದಲ್ಲಿ ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.

ದ್ವಿತೀಯೋಪದೇಶಕಾಂಡ 19:7

ಆದಕಾರಣ ನಾನು ನಿನಗೆ ಆಜ್ಞಾಪಿಸು ವದೇನಂದರೆ--ಮೂರು ಪಟ್ಟಣಗಳನ್ನು ನಿನಗಾಗಿ ಪ್ರತ್ಯೇಕಿಸಬೇಕು.

ದ್ವಿತೀಯೋಪದೇಶಕಾಂಡ 19:14

ನಿನ್ನ ದೇವರಾದ ಕರ್ತನು ನಿನಗೆ ಸ್ವಾಧೀನ ಮಾಡಿ ಕೊಳ್ಳುವದಕ್ಕೆ ಕೊಡುವ ದೇಶದೊಳಗೆ ನೀನು ಹೊಂದುವ ಸ್ವಾಸ್ತ್ಯದಲ್ಲಿ ಹಿರಿಯರು ಇಟ್ಟಂಥ ನಿನ್ನ ನೆರೆಯವನ ಮೇರೆಯನ್ನು ತಪ್ಪಿಸಬಾರದು.

ದ್ವಿತೀಯೋಪದೇಶಕಾಂಡ 21:1

ನಿನ್ನ ದೇವರಾದ ಕರ್ತನು ನಿನಗೆ ಸ್ವಾಸ್ತ್ಯ ವಾಗಿ ಕೊಡುವ ದೇಶದಲ್ಲಿ ಯಾವನಾ ದರೂ ಹತನಾಗಿ ಹೊಲದಲ್ಲಿ ಸಿಕ್ಕಿರಲಾಗಿ ಅವನನ್ನು ಯಾರು ಹೊಡೆದರೆಂದು ತಿಳಿಯದೆ ಹೋದರೆ

ದ್ವಿತೀಯೋಪದೇಶಕಾಂಡ 25:19

ಆದದರಿಂದ ನಿನ್ನ ದೇವರಾದ ಕರ್ತನು ನಿನಗೆ ವಶಮಾಡಿಕೊಳ್ಳುವದಕ್ಕೆ ಸ್ವಾಸ್ತ್ಯವಾಗಿ ಕೊಡುವ ದೇಶದಲ್ಲಿ ಸುತ್ತಲಾಗಿರುವ ಶತ್ರುಗಳಿಂದ ನಿನ್ನ ದೇವರಾದ ಕರ್ತನು ನಿನ್ನನ್ನು ಬಿಡಿಸಿ ವಿಶ್ರಾಂತಿ ಕೊಟ್ಟ ಮೇಲೆ ಆಮಾಲೇಕ್ಯನ ಜ್ಞಾಪಕವನ್ನು ಆಕಾಶದ ಕೆಳಗಿಂದ ಅಳಿಸಿಬಿಡಬೇಕು; ಇದನ್ನು ಮರೆಯಬಾರದು.

ಯೆಹೋಶುವ 1:11

ನೀವು ದಂಡಿನ ಮಧ್ಯದಲ್ಲಿ ಹೋಗಿ ಜನರಿಗೆ ಆಜ್ಞಾಪಿಸಿ ಹೇಳಬೇಕಾದದ್ದೇನಂದರೆ--ನಿಮ ಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ; ನಿಮ್ಮ ದೇವರಾದ ಕರ್ತನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿರುವ ದೇಶವನ್ನು ನೀವು ಸ್ವಾಧೀನಮಾಡಿಕೊಳ್ಳಲು ಇನ್ನು ಮೂರು ದಿವಸಗಳಲ್ಲಿ ಯೊರ್ದನನ್ನು ದಾಟಿ ಹೋಗ ಬೇಕು ಅಂದನು.

ಯೆಹೋಶುವ 1:12

ಇದಲ್ಲದೆ ಯೆಹೋಶುವನು ರೂಬೇನ್ಯರಿಗೂ ಗಾದ್ಯರಿಗೂ ಮನಸ್ಸೆಯ ಅರ್ಧಗೋತ್ರದವರಿಗೂ ಹೇಳಿದ್ದೇನಂದರೆ --

ಯೆಹೋಶುವ 1:15

ಕರ್ತನು ನಿಮ್ಮ ಹಾಗೆಯೇ ನಿಮ್ಮ ಸಹೋದರರನ್ನು ವಿಶ್ರಾಂತಿ ಪಡಿಸಿ ಅವರು ನಿಮ್ಮ ದೇವರಾದ ಕರ್ತನು ತಮಗೆ ಕೊಡುವ ದೇಶವನ್ನು ಸ್ವಾಧೀನಮಾಡಿಕೊಳ್ಳುವ ವರೆಗೆ ಅವರಿಗೆ ಸಹಾಯ ಮಾಡಿರಿ; ತರುವಾಯ ಕರ್ತನ ಸೇವಕನಾದ ಮೋಶೆಯು ಯೊರ್ದನಿಗೆ ಈಚೆಯಲ್ಲಿ ಸೂರ್ಯನು ಉದಯಿಸುವ ದಿಕ್ಕಿನಲ್ಲಿ ನಿಮಗೆ ಕೊಟ್ಟ ನಿಮ್ಮ ಸ್ವಾಸ್ತ್ಯವಾದ ದೇಶಕ್ಕೆ ತಿರಿಗಿ ಬಂದು ಅದನ್ನು ಅನುಭವಿಸಿರಿ ಅಂದನು.

ಯೆಹೋಶುವ 4:12

ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರವೂ ಮೋಶೆಯು ತಮಗೆ ಹೇಳಿದ ಹಾಗೆಯೇ ಯುದ್ಧಸನ್ನದ್ಧರಾಗಿ ಇಸ್ರಾಯೇಲ್‌ ಮಕ್ಕಳ ಮುಂದೆ ಹಾದುಹೋದರು.

ಯೆಹೋಶುವ 22:1

ಆಗ ಯೆಹೋಶುವನು ರೂಬೇನ್ಯರನ್ನೂ ಗಾದ್ಯರನ್ನೂ ಮನಸ್ಸೆಯ ಅರ್ಧಗೋತ್ರ ದವರನ್ನೂ ಕರಿಸಿ ಅವರಿಗೆ--

ಯೆಹೋಶುವ 22:2

ಕರ್ತನ ಸೇವಕನಾದ ಮೋಶೆಯು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ನೀವು ಕೈಕೊಂಡು ನಾನು ನಿಮಗೆ ಆಜ್ಞಾಪಿಸಿದ್ದೆಲ್ಲಾದರಲ್ಲಿ ನನ್ನ ಮಾತಿಗೆ ವಿಧೇಯರಾದಿರಿ.

ಯೆಹೋಶುವ 22:9

ಕರ್ತನು ಮೋಶೆಗೆ ಕೊಟ್ಟ ಮಾತಿನ ಪ್ರಕಾರ ರೂಬೇನನ ಮಕ್ಕಳೂ ಗಾದನ ಮಕ್ಕಳೂ ಮನಸ್ಸೆಯ ಅರ್ಧ ಗೋತ್ರದವರೂ ತಾವು ವಶಮಾಡಿಕೊಂಡ ತಮ್ಮ ಸ್ವಾಸ್ತ್ಯದ ದೇಶವಾಗಿರುವ ಗಿಲ್ಯಾದ್‌ ದೇಶಕ್ಕೆ ಹೋಗುವದಕ್ಕೆ ಕಾನಾನ್‌ ದೇಶದಲ್ಲಿರುವ ಶೀಲೋ ವನ್ನೂ ಇಸ್ರಾಯೇಲ್‌ ಮಕ್ಕಳನ್ನೂ ಬಿಟ್ಟು ತಿರಿಗಿ ಹೋದರು.

ಕೀರ್ತನೆಗಳು 136:21

ಅವರ ದೇಶವನ್ನು ಬಾಧ್ಯತೆ ಯಾಗಿ ಕೊಟ್ಟಾತನನ್ನು ಕೊಂಡಾಡಿರಿ; ಆತನ ಕರು ಣೆಯು ಎಂದೆಂದಿಗೂ ಅದೆ.

Interlinear

Choose Theme