Home Bibles ದ್ವಿತೀಯೋಪದೇಶಕಾಂಡ 3:16 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 3:16 · ಕನ್ನಡ ಬೈಬಲ್

ರೂಬೇನನ ಮನೆಯವರಿಗೂ ಗಾದನ ಮನೆಯವರಿಗೂ ಗಿಲ್ಯಾದ್‌ ಮೊದಲುಗೊಂಡು ಅರ್ನೋನ್‌ ನದಿಯ ವರೆಗೆ ಕೊಟ್ಟೆನು.

Cross references

ಆದಿಕಾಂಡ 32:22

ಅವನು ಆ ರಾತ್ರಿಯಲ್ಲಿ ಎದ್ದು ತನ್ನ ಇಬ್ಬರು ಹೆಂಡತಿಯರನ್ನೂ ಇಬ್ಬರು ದಾಸಿಯರನ್ನೂ ತನ್ನ ಹನ್ನೊಂದು ಮಂದಿ ಕುಮಾರರನ್ನೂ ತಕ್ಕೊಂಡು ಯಬ್ಬೋಕ್‌ ಎಂಬ ಸ್ಥಳದಲ್ಲಿ ದಾಟಿದನು.

ಅಂಕೆಗಳ ಪುಸ್ತಕ 21:24

ಇಸ್ರಾಯೇಲ್ಯರು ಅವನನ್ನು ಕತ್ತಿಯಿಂದ ಹೊಡೆದು ಅವನ ದೇಶವನ್ನು ಅರ್ನೋನ್‌ ನದಿಯಿಂದ ಯಬ್ಬೋಕ್‌ ನದಿಯ ವರೆಗೂ ಅಮ್ಮೋನನ ಮಕ್ಕಳ ಮೇರೆಯ ವರೆಗೂ ಸ್ವಾಧೀನಮಾಡಿಕೊಂಡರು. ಅಮ್ಮೋನನ ಮಕ್ಕಳ ಮೇರೆ ಬಲವುಳ್ಳದ್ದಾಗಿತ್ತು.

ಅಂಕೆಗಳ ಪುಸ್ತಕ 32:33

ಹಾಗೆಯೇ ಮೋಶೆಯು ಗಾದನ ಮಕ್ಕಳಿಗೂ ರೂಬೇನನ ಮಕ್ಕಳಿಗೂ ಯೋಸೇಫನ ಮಗನಾದ ಮನಸ್ಸೆಯ ಅರ್ಧ ಗೋತ್ರಕ್ಕೂ ಅಮೋರಿಯರ ಅರಸ ನಾದ ಸೀಹೋನನ ರಾಜ್ಯವನ್ನೂ ಬಾಷಾನಿನ ಅರಸ ನಾದ ಓಗನ ರಾಜ್ಯವನ್ನೂ ಅದರ ಭೂಮಿಯನ್ನೂ ಅದರ ಮೇರೆಗಳಲ್ಲಿ ಸುತ್ತಮುತ್ತಲಿನ ಪಟ್ಟಣಗಳನ್ನೂ ಕೊಟ್ಟನು.

ದ್ವಿತೀಯೋಪದೇಶಕಾಂಡ 2:37

ಅಮ್ಮೋನಿಯರ ಮಕ್ಕಳ ದೇಶಕ್ಕೂ ಯಬ್ಬೋಕ್‌ ನದಿಯ ಯಾವ ದೊಂದು ಸ್ಥಳಕ್ಕೂ ಪರ್ವತ ಪಟ್ಟಣಗಳಿಗೂ ನಮ್ಮ ದೇವರಾದ ಕರ್ತನು ನಮಗೆ ಬೇಡವೆಂದ ಯಾವ ಸ್ಥಳಕ್ಕೂ ನೀನು ಮಾತ್ರ ಬರಲಿಲ್ಲ.

ಯೆಹೋಶುವ 12:2

ಅರ್ನೋನ್‌ ನದಿಯ ಮಧ್ಯಭಾಗ, ದಡದ ಬಳಿಯಲ್ಲಿ ಇರುವ ಅರೋಯೇರಿ ನಿಂದಲೂ ಅರ್ಧ ಗಿಲ್ಯಾದಿನಿಂದಲೂ ಅಮ್ಮೋನನ ಮಕ್ಕಳ ಮೇರೆಯಾದ ಯಬ್ಬೋಕ್‌ ನದಿಯ ವರೆಗೆ

2 ಸಮುವೇಲ 24:5

ಅವರು ಯೊರ್ದನನ್ನು ದಾಟಿ ಗಾದ್‌ ನದಿಯ ಮಧ್ಯದಲ್ಲಿರುವ ಪಟ್ಟಣಕ್ಕೆ ಬಲ ಪಾರ್ಶ್ವವಾದ ಅರೋಯೇರಿನಲ್ಲಿಯೂ ಯಗ್ಜೇರಿ ನಲ್ಲಿಯೂ ಇಳಿದು

Interlinear

Choose Theme