ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಗುರುತುಗಳನ್ನೂ ಅದ್ಭುತಗಳನ್ನೂ ನಿನ್ನ ಕಣ್ಣುಗಳು ನೋಡಿದವಲ್ಲಾ?
Cross references
ನಿನ್ನ ಮುಂದೆ ಇದ್ದ ಪೂರ್ವದ ದಿವಸಗಳನ್ನು ದೇವರು ಭೂಮಿಯ ಮೇಲೆ ಮನುಷ್ಯನನ್ನು ಸೃಷ್ಟಿಸಿ ದಂದಿನಿಂದ ವಿಚಾರಿಸು; ಆಕಾಶದ ಈ ಕಡೆಯಿಂದ ಆ ಕಡೆಯವರೆಗೂ ವಿಚಾರಿಸು; ಇದರಂತೆ ದೊಡ್ಡ ಕಾರ್ಯ ಉಂಟಾಯಿತೇ? ಇಲ್ಲವೆ ಇದರಂತೆ ಕೇಳ ಲ್ಪಟ್ಟಿತೇ?
ನೀನು ಅವರಿಗೆ ಭಯಪಡಬೇಡ; ನಿನ್ನ ದೇವರಾದ ಕರ್ತನು ಫರೋಹನಿಗೂ ಎಲ್ಲಾ ಐಗುಪ್ತಕ್ಕೂ ಮಾಡಿದ್ದನು
ಆದರೆ ಉನ್ನತ ಸ್ಥಳಗಳು ಇನ್ನೂ ತೆಗೆದುಹಾಕಲ್ಪಡಲಿಲ್ಲ. ಜನರು ತಮ್ಮ ಹೃದಯಗಳನ್ನು ತಮ್ಮ ಪಿತೃಗಳ ದೇವರ ಕಡೆಗೆ ಇನ್ನೂ ಸಿದ್ಧಮಾಡಿರಲಿಲ್ಲ;
ಇದಲ್ಲದೆ ಐಗುಪ್ತದಲ್ಲಿ ನಮ್ಮ ಪಿತೃಗಳ ದೀನ ಸ್ಥಿತಿಯನ್ನು ನೋಡಿದಿ; ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿ.
ತಮ್ಮ ಕಣ್ಣುಗಳಿಂದ ನೋಡದಂತೆಯೂ ತಮ್ಮ ಕಿವಿಗಳಿಂದ ಕೇಳದಂತೆಯೂ ತಮ್ಮ ಹೃದಯದಿಂದ ಗ್ರಹಿಸಿ ತಿರುಗಿಕೊಂಡು ಸ್ವಸ್ಥವಾಗ ದಂತೆಯೂ ಈ ಜನರ ಹೃದಯವನ್ನು ಕೊಬ್ಬಿಸಿ ಕಿವಿ ಯನ್ನು ಮಂದಗೊಳಿಸಿ ಅವರ ಕಣ್ಣುಗಳನ್ನು ಮುಚ್ಚು ಎಂದು ನನಗೆ ಹೇಳಿದನು.
ಆದದರಿಂದ ಕರ್ತನು ಹೀಗೆ ಹೇಳುತ್ತಾನೆ. ಇಗೋ, ನಾನು ಈ ಜನರ ಮುಂದೆ ಎಡೆತಡೆಗಳನ್ನು ಇಡುತ್ತೇನೆ; ತಂದೆ ಗಳೂ ಮಕ್ಕಳೂ ಕೂಡ ಅವುಗಳ ಮೇಲೆ ಬೀಳುವರು; ನೆರೆಯವನೂ ಅವನ ಸ್ನೇಹಿತನೂ ನಾಶವಾಗುವನು.
ಮನುಷ್ಯಪುತ್ರನೇ, ನೀನು ತಿರುಗಿ ಬೀಳುವ ಮನೆತನದವರ ಮಧ್ಯದಲ್ಲಿ ವಾಸಿಸುತ್ತಿರುವಿ, ಅವರಿಗೆ ನೋಡುವದಕ್ಕೆ ಕಣ್ಣು ಗಳುಂಟು ನೋಡುವದಿಲ್ಲ, ಕೇಳುವದಕ್ಕೆ ಕಿವಿಗಳುಂಟು ಕೇಳುವದಿಲ್ಲ; ಅವರು ತಿರುಗಿ ಬೀಳುವ ಮನೆತನ ದವರು.