Home Bibles ದ್ವಿತೀಯೋಪದೇಶಕಾಂಡ 28:50 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 28:50 · ಕನ್ನಡ ಬೈಬಲ್

ಮುದುಕರ ಮುಖದಾಕ್ಷಿಣ್ಯ ನೋಡದೆಯೂ ಚಿಕ್ಕವ ರಿಗೆ ದಯೆತೋರಿಸದೆ ಇರುವಂಥ ಕಠಿಣ ಮುಖವುಳ್ಳ ಜನಾಂಗವನ್ನೂ ನಿನ್ನ ಮೇಲೆ ಬರಮಾಡುವನು.

Cross references

2 ದಿನವೃತ್ತಾಂತ 36:17

ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು.

ಸಾಮೇತಿಗಳು 7:13

ಹೀಗೆ ಅವಳು ಅವ ನನ್ನು--ಹಿಡುಕೊಂಡು ಮುದ್ದಿಟ್ಟು

ಸಭಾಪ್ರಸಂಗಿ 8:1

ಜ್ಞಾನಿಯ ಹಾಗೆ ಇರುವವನು ಯಾರು? ಈ ಸಂಗತಿಯ ಅರ್ಥವನ್ನು ಬಲ್ಲವನು ಯಾರು? ಒಬ್ಬ ಮನುಷ್ಯನ ಜ್ಞಾನವು ಅವನ ಮುಖ ವನ್ನು ಬೆಳಗಿಸುತ್ತದೆ, ಅವನ ಧೈರ್ಯದ ಮುಖವು ಬದಲಾಗುವದು.

ಯೆಶಾಯ 47:6

ನಾನು ನಿನ್ನ ಜನರ ಮೇಲೆ ರೋಷಗೊಂಡು, ನನ್ನ ಸ್ವಾಸ್ಥ್ಯವನ್ನು ಅಪವಿತ್ರ ಮಾಡಿ, ನಿನ್ನ ಕೈಯಲ್ಲಿ ಅವರನ್ನು ಒಪ್ಪಿಸಿಬಿಟ್ಟೆನು; ನೀನು ಅವರಿಗೆ ಕರುಣೆಯನ್ನು ತೋರಿಸದೆ ಮುದುಕರ ಮೇಲೆಯೂ ಬಹು ಭಾರವಾದ ನೊಗವನ್ನು ಹೊರಿ ಸಿದಿ.

ಯೆರೆಮಿಯ 21:7

ನಿನಗೆ ವಿರೋಧವಾಗಿ ತಮ್ಮತಮ್ಮ ಆಯುಧಗಳಿಂದ ನಾಶಮಾಡುವವರನ್ನು ಸಿದ್ಧಮಾಡು ತ್ತೇನೆ; ಅವರು ನಿನ್ನ ಶ್ರೇಷ್ಠ ದೇವದಾರುಗಳನ್ನು ಕಡಿದು ಬೆಂಕಿಯಲ್ಲಿ ಹಾಕುವರು.

ದಾನಿಯೇಲ 7:7

ತರುವಾಯ ರಾತ್ರಿಯ ದರ್ಶನದಲ್ಲಿ ನಾನು ನೋಡಲಾಗಿ ಇಗೋ, ನಾಲ್ಕ ನೆಯ ಮೃಗವು ಭಯಂಕರವಾದದ್ದೂ ಘೋರವಾ ದದ್ದೂ ಬಹಳ ಬಲವುಳ್ಳದ್ದೂ ಆಗಿತ್ತು; ಅದಕ್ಕೆ ಕಬ್ಬಿಣದ ದೊಡ್ಡ ಹಲ್ಲುಗಳಿದ್ದವು. ಅದು ತಿಂದು ತುಂಡು ತುಂಡು ಮಾಡಿ ಮಿಕ್ಕಿದ್ದನ್ನು ತನ್ನ ಕಾಲುಗಳ ಕೆಳಗೆ ಹಾಕಿ ತುಳಿಯಿತು. ಅದು ಮೊದಲಿನ ಎಲ್ಲಾ ಮೃಗಗಳಿಗಿಂತ ವ್ಯತ್ಯಾಸವುಳ್ಳದ್ದು ಮತ್ತು ಹತ್ತು ಕೊಂಬುಗಳುಳ್ಳದ್ದು ಆಗಿತ್ತು.

ದಾನಿಯೇಲ 8:23

ಅವರ ರಾಜ್ಯದ ಕಡೆಯ ಕಾಲದಲ್ಲಿ, ಯಾವಾಗ ಅಪರಾಧಿಗಳು ತುಂಬಿ ಬರುವರೋ, ಆಗ ಕ್ರೂರ ಮುಖವುಳ್ಳವನೂ ತಂತ್ರವುಳ್ಳವನೂ ಆದ ಒಬ್ಬ ಅರಸನು ಏಳುವನು.

ಹೊಶೇಯ 13:16

ಸಮಾರ್ಯವು ಹಾಳಾಗಿ ಹೋಗುವದು; ಅವಳು ತನ್ನ ದೇವರಿಗೆ ವಿರುದ್ಧವಾಗಿ ತಿರಿಗಿ ಬಿದ್ದಿದ್ದಾಳೆ; ಅವರೆಲ್ಲರೂ ಕತ್ತಿ ಯಿಂದ ಬೀಳುವರು; ಅವರ ಎಳೇ ಕೂಸುಗಳು ಚೂರು ಚೂರಾಗಿ ಬಡಿಯಲ್ಪಡುವವು; ಅವರ ಗರ್ಭಿಣಿಯರು ಸೀಳಲ್ಪಡುವರು.

ಲೂಕ 19:44

ಇದಲ್ಲದೆ ಅವರು ನಿನ್ನನ್ನೂ ನಿನ್ನೊಳ ಗಿರುವ ನಿನ್ನ ಮಕ್ಕಳನ್ನೂ ನೆಲಸಮ ಮಾಡುವರು; ಮತ್ತು ನಿನ್ನಲ್ಲಿ ಒಂದು ಕಲ್ಲಿನ ಮೇಲೆ ಮತ್ತೊಂದು ಕಲ್ಲು ಇರದಂತೆ ಮಾಡುವರು; ಯಾಕಂದರೆ ನಿನ್ನನ್ನು ಸಂಧಿಸಿದ ಸಮಯವನ್ನು ನೀನು ತಿಳುಕೊಳ್ಳಲಿಲ್ಲ ಅಂದನು.

ಲೂಕ 21:23

ಆದರೆ ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಮೊಲೆ ಕುಡಿಸುವ ವರಿಗೂ ಅಯ್ಯೊ! ಯಾಕಂದರೆ ದೇಶದಲ್ಲಿ ಮಹಾ ವಿಪತ್ತೂ ಈ ಜನರ ಮೇಲೆ ಕೋಪವೂ ಆಗ ಇರು ವದು.

Interlinear

Choose Theme