ದ್ವಿತೀಯೋಪದೇಶಕಾಂಡ 28:31 · ಕನ್ನಡ ಬೈಬಲ್
ನಿನ್ನ ಎತ್ತು ನಿನ್ನ ಕಣ್ಣುಗಳ ಮುಂದೆ ಕೊಯ್ಯಲ್ಪಟ್ಟಾಗ ನೀನು ಅದರಲ್ಲಿ ತಿನ್ನುವದಿಲ್ಲ; ನಿನ್ನ ಕತ್ತೆ ನಿನ್ನ ಕಣ್ಣುಗಳ ಮುಂದೆ ಬಲಾತ್ಕಾರವಾಗಿ ಒಯ್ಯಲ್ಪಟ್ಟು ನಿನಗೆ ಮತ್ತೆ ಸಿಕ್ಕುವದಿಲ್ಲ; ನಿನ್ನ ಕುರಿಗಳು ನಿನ್ನ ಶತ್ರುವಿಗೆ ಕೊಡಲ್ಪಡುವವು; ಅವುಗಳನ್ನು ರಕ್ಷಿಸುವದಕ್ಕೆ ಯಾರೂ ಇರುವದಿಲ್ಲ.
Cross references
ನ್ಯಾಯಾಧಿಪತಿಗಳು 6:1
ಆದರೆ ಇಸ್ರಾಯೇಲ್ ಮಕ್ಕಳು ಕರ್ತನ ದೃಷ್ಟಿಯಲ್ಲಿ ಕೆಟ್ಟತನಮಾಡಿದರು; ಆದದ ರಿಂದ ಕರ್ತನು ಅವರನ್ನು ಏಳು ವರುಷ ಮಿದ್ಯಾನ್ಯರ ಕೈಗೆ ಒಪ್ಪಿಸಿಕೊಟ್ಟನು.
ನ್ಯಾಯಾಧಿಪತಿಗಳು 6:4
ಗಾಜಾದ ಪ್ರದೇಶದ ಮಟ್ಟಿಗೂ ಭೂಮಿಯ ಫಲವನ್ನು ಕೆಡಿಸಿಬಿಟ್ಟು ಇಸ್ರಾಯೇಲಿನಲ್ಲಿ ಆಹಾರವಾದರೂ ಕುರಿದನ ಕತ್ತೆಗಳಾದರೂ ಉಳಿಯ ಗೊಡಿಸಲಿಲ್ಲ.
ಯೋಬ 1:14
ಒಬ್ಬ ಸೇವಕನು ಯೋಬನ ಬಳಿಗೆ ಬಂದು--ಎತ್ತುಗಳು ಉಳುತ್ತಾ ಕತ್ತೆಗಳು ಅವುಗಳ ಹತ್ತಿರ ಮೇಯುತ್ತಾ ಇರಲಾಗಿ